Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ನ.18 ರಂದು ಕೃಷಿ ಉಪಕರಣಗಳ ಬಹಿರಂಗ ಹರಾಜು





ಬಳ್ಳಾರಿ,ನ.14

ಜಿಲ್ಲೆಯ ಹಗರಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿರುವ ಅನುಪಯುಕ್ತ ವಸ್ತುಗಳಾದ ಕೃಷಿ ಉಪಕರಣಗಳನ್ನು ನ.18 ರಂದು ಬೆಳಿಗ್ಗೆ 10 ಗಂಟೆಗೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಅವರು ತಿಳಿಸಿದ್ದಾರೆ.

ಆಸಕ್ತಿವುಳ್ಳವರು ಅನುಪಯುಕ್ತ ವಸ್ತುಗಳ ಬಗ್ಗೆ ಕಚೆೆರಿಯ ಕಾರ್ಯನಿರ್ವಹಿಸುವ ಯಾವುದೇ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ ಹೊರತು ಪಡಿಸಿ) ಬೆಳಿಗ್ಗೆ 09 ಗಂಟೆಯಿ0ದ ಸಂಜೆ 05 ಗಂಟೆಯೊಳಗೆ ಖುದ್ದಾಗಿ ಬಂದು ಪರಿಶೀಲಿಸಿಕೊಳ್ಳಬಹುದು.

*ಷರತ್ತು:*

ಅನುಪಯುಕ್ತ ವಸ್ತುಗಳನ್ನು ಹರಾಜಿನ ಕೊನೆಯ ಸಮಯದವರೆಗೂ ಕಚೇರಿ ವೇಳೆಯಲ್ಲಿ ಪರಿಶೀಲಿಸಿಕೊಳ್ಳಬಹುದು. ಅನುಪಯುಕ್ತ ವಸ್ತುಗಳನ್ನು ನೋಡಲು ಸಾಕಷ್ಟು ಕಾಲಾವಧಿ ನೋಡಿರುವುದರಿಂದ ಹರಾಜಿನ ಬಗ್ಗೆ ಹರಾಜು ಮುಗಿದ ಬಳಿಕ ಬರುವ ಯಾವುದೇ ಆಕ್ಷೇಪಣೆಗಳನ್ನು ಅಂಗೀಕರಿಸುವುದಿಲ್ಲ.

ಹರಾಜಿನಲ್ಲಿ ಭಾಗವಹಿಸುವವರು ಹರಾಜಿಗೆ ಮುಂಚೆ ಅನುಪಯುಕ್ತ ವಸ್ತುಗಳಿಗೆ ಠೇವಣಿ ಹಣ 10 ಸಾವಿರ ರೂಗಳು ಪ್ರತ್ಯೇಕವಾಗಿ ಕಚೇರಿಗೆ ಸಂದಾಯ ಮಾಡಿ ಹರಾಜಿನಲ್ಲಿ ಭಾಗವಹಿಸಬೇಕು. ಹರಾಜು ಮುಗಿದ ಬಳಿಕ ಹÀಣವನ್ನು ಹಿಂತಿರುಗಿಸಲಾಗುವುದು. ಹೆಚ್ಚಿನ ಬಿಡ್ ಮಾಡಿದ ಸವಾಲುದಾರರು ಸವಾಲು ನಿಂತಲ್ಲಿ ಕೂಡಲೇ ಪೂರ್ಣ ಹಣವನ್ನು ಸಂದಾಯ ಮಾಡಿ ಅಧೀಕೃತ ಸ್ವೀಕೃತಿ ಪತ್ರ ಪಡೆಯ ತಕ್ಕದ್ದು, ಇಲ್ಲದಿದ್ದಲ್ಲಿ ಅವರು ಕಟ್ಟಿರುವ ಠೇವಣಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.

ಹಣವನ್ನು ಹಣಕಾಸು ನಿಯಂತ್ರಾಧಿಕಾರಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಇವರಿಗೆ ಸಂದಾಯ ಮಾಡಲಾಗುವುದು. ಹರಾಜಿನಲ್ಲಿ ಅನುಪಯುಕ್ತ ವಸ್ತುಗಳು ಒಂದು ವೇಳೆ ಸರಿಯಾದ ಬೆಲೆಗೆ ಹೋಗದಿದ್ದಲ್ಲಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹರಾಜನ್ನು ರದ್ದುಪಡಿಸುವ ಹಕ್ಕನ್ನು ಹೊಂದಿರುತ್ತದೆ.

ಯಶಸ್ವಿ ಬಿಡ್‌ದಾರನು ಪೂರ್ಣ ಹಣ ಸಂದಾಯ ಮಾಡಿ ಸ್ವೀಕೃತ ಪತ್ರ ಪಡೆದ ಸಮಯದಿಂದಲೇ ಅನುಪಯುಕ್ತ ವಸ್ತುಗಳ ಮೇಲೆ ಹಕ್ಕುವುಳ್ಳವನಾಗಿ ಅದರ ರಕ್ಷಣೆ, ನಿರ್ವಹಣೆ, ಸಾಗಾಣಿಕೆ ಇತ್ಯಾದಿ ಎಲ್ಲಾ ಸ್ವಯಂ ಆಗಿ ನೋಡಿಕೊಳ್ಳತಕ್ಕದ್ದು. ಹರಾಜು ಪ್ರಾರಂಭವಾದ ನಂತರ ಬಂದವರಿಗೆ ಹರಾಜಿನಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ. ಮೇಲೆ ತಿಳಿಸಿದ ಅನುಪಯುಕ್ತ ವಸ್ತುಗಳನ್ನು ನ.18 ರೊಳಗೆ ಪಡೆಯತಕ್ಕದ್ದು, ನಂತರ ಅವಕಾಶವಿರುವುದಿಲ್ಲ.

ಯಶಸ್ವಿ ಬಿಡ್‌ದಾರನ ಠೇವಣಿ ಹಣವನ್ನು ನ.18 ರಂದು ಹಿಂತಿರುಗಿಸಲಾಗುವುದು. ಯಶಸ್ವಿ ಬಿಡ್‌ದಾರರು ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಹೊರತುಪಡಿಸಿ ಕೇಂದ್ರ‍್ರದ ಬೇರೆ ವಸ್ತುಗಳಿಗೆ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಬಾರದು. ಯಾವುದೇ ತರಹದ ಹಾನಿಯಾದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಿಯಮಾವಳಿ ಮತ್ತು ನಿರ್ಣಯದ ಪ್ರಕಾರ ಹಾನಿಯ ಖರ್ಚನ್ನು ತಕ್ಷಣ ಭರಿಸಬೇಕು.

ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಕೇವಲ ಕಚೆರಿ ಸಮಯದಲ್ಲಿ ಅಂದರೆ ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಮಾತ್ರ ಕೇಂದ್ರದ ಹೊರಗೆ ಸಾಗಿಸಬೇಕು. ಬಿಡ್ ಮಾಡಿದ ಅನುಪಯುಕ್ತ ವಸ್ತುಗಳನ್ನು ಕೇಂದ್ರದ ಹೊರಗೆ ಸಾಗಿಸಲು ಅವಶ್ಯಕವಾದ ಪರವಾನಿಗೆ ಪತ್ರಗಳನ್ನು ಸಂಭ0ದಪಟ್ಟ ಅಧಿಕಾರಿಗಳಿಂದ/ಸ0ಸ್ಥೆಗಳಿ0ದ ಬಿಡ್‌ದಾರರೇ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ