Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ರಾಜ್ಯಮಟ್ಟದ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಅರ್ಜಿ ಆಹ್ವಾನ

ಬಳ್ಳಾರಿ,ಮೇ 23
ನೈಜ ಚರ್ಮ ಕುಶಲಕರ್ಮಿಗಳಲ್ಲಿನ ಕರಕುಶಲತೆ, ಪಾದರಕ್ಷೆ ತಯಾರಿಕೆಯ ನೈಪುಣ್ಯತೆ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಗುರುತಿಸಿ ಉತ್ತೇಜಿಸಲು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ (ಲಿಡಕರ್) ವತಿಯಿಂದ ರಾಜ್ಯಮಟ್ಟದ ಸ್ಥಳದಲ್ಲೇ ಪಾದರಕ್ಷಾ ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ಜೂನ್ 06 ರಂದು ಬೆಳಿಗ್ಗೆ 11 ರಿಂದ ಸಂಜೆ 05 ಗಂಟೆಯವರೆಗೆ ಬೆಂಗಳೂರಿನ ಕೆಂಗೇರಿಯ ಉಲ್ಲಾಳ ಉಪನಗರದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್ ಅಂಡ್ ಫ್ಯಾಷನ್ ಟೆಕ್ನಾಲಜಿ, ಇಲ್ಲಿ ನಡೆಯಲಿದೆ. ಚರ್ಮ ಕುಶಲಕರ್ಮಿಗಳು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ.
*ಆಕರ್ಷಕ ನಗದು ಬಹುಮಾನಗಳು:*
ಪ್ರಥಮ ಬಹುಮಾನ-ರೂ.50 ಸಾವಿರ, ದ್ವಿತೀಯ ಬಹುಮಾನ-ರೂ.30 ಸಾವಿರ, ತೃತೀಯ ಬಹುಮಾನ- ರೂ.20 ಸಾವಿರ ಹಾಗೂ ಸಮಾಧಾನಕರ ಬಹುಮಾನ (ಇಬ್ಬರಿಗೆ)- ತಲಾ ರೂ.10 ಸಾವಿರ.
*ಅರ್ಹತೆಗಳು ಮತ್ತು ನಿಯಮಗಳು:*
ಸ್ಪರ್ಧಾಳುಗಳು 18 ರಿಂದ 55 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿಗೆ ಸೇರಿದ (ಆರುಂಧತಿಯಾರ್, ಚಮ್ಮಾದಿಯಾ, ಚಮಾರ್, ಚಂಬಾರ್, ಚಮಗಾರ್, ದಕ್ಕಲ್, ದಕ್ಕಲ್‌ವಾರ್, ದಕ್ಕಲಿಗ, ಮಾದರ್, ಮಾದಿಗ್, ಮಾದಿಗ, ಮಿನಿಮಾದಿಗ್, ಜಾಂಬುವುಲು, ಹರಳಯ್ಯ, ಮಾಚಿಗಾರ್, ಮೋಚಿಗಾರ್, ಮೋಚಿ, ಮುಚಿ, ತೆಲುಗು ಮೋಚಿ, ಕಮಾಟಿ ಮೋಚಿ, ರೋಹಿದಾಸ್, ಧೋರ್, ಕಕ್ಕಯ್ಯ, ಕಂಕಯ್ಯ, ಸಮಗಾರ, ಸಮಗಾರ್) ಚರ್ಮ ಕುಶಲಕರ್ಮಿಗಳಾಗಿರಬೇಕು ಅಥವಾ ಅವರ ಕುಟುಂಬದವರಾಗಿರಬೇಕು.
ಪುರುಷ ಅಥವಾ ಮಹಿಳೆಯರ ಒಂದು ಜೊತೆ ಪಾದರಕ್ಷೆಯನ್ನು ಮಾತ್ರ ತಯಾರಿಸಬೇಕು. ಪಾದರಕ್ಷೆ ತಯಾರಿಸಲು ಬೇಕಾಗುವ ಕಚ್ಚಾವಸ್ತು ಹಾಗೂ ಅಗತ್ಯ ಪರಿಕರಗಳನ್ನು ಸ್ಪರ್ಧಾಳುಗಳೇ ಸ್ವತಃ ತರಬೇಕು. ಕೊಲ್ಹಾಪುರಿ ಮಾದರಿಯ ಪಾದರಕ್ಷೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಸ್ಪರ್ಧಾಳುಗಳಿಗೆ ಅಂದು ಊಟದ ವ್ಯವಸ್ಥೆ ಮಾಡಲಾಗುವುದು. ಸ್ಪರ್ಧಾಳುಗಳು ಸ್ವಂತ ಖರ್ಚಿನಲ್ಲಿ ಬರಬೇಕಾಗಿದ್ದು, ಸೂಕ್ತ ದಾಖಲಾತಿಗಳನ್ನು ಒದಗಿಸಿದಲ್ಲಿ ನಿಯಮಾನುಸಾರ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದು.
*ಸಲ್ಲಿಸಬೇಕಾದ ಅಗತ್ಯ ದಾಖಲೆಗಳು:*
ಜಾತಿ ಪ್ರಮಾಣ ಪತ್ರ, ವೃತ್ತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ನಿಗಮದಿಂದ ತರಬೇತಿ ಪಡೆದ ದಾಖಲೆ ಅಥವಾ ಇ-ಶ್ರಮ್ ಕಾರ್ಡ್.
ಅರ್ಜಿ ನಮೂನೆಗಳನ್ನು ನಿಗಮದ ಅಧಿಕೃತ ವೆಬ್‌ಸೈಟ್ https://lidkar.com ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮೇ 30 ರೊಳಗೆ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಬೇಕು.
*ಅರ್ಜಿ ಸಲ್ಲಿಸಬೇಕಾದ ವಿಳಾಸ:*
ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ, ಕೇಂದ್ರ ಕಚೇರಿ, ಡಾ.ಬಾಬು ಜಗಜೀವನ ರಾಂ ಲಿಡಕರ್ ಭವನ, ಮಿಲ್ರ‍್ಸ್ ಟ್ಯಾಂಕ್ ಬಂಡ ಏರಿಯಾ, ವಸಂತ ನಗರ, ಬೆಂಗಳೂರು - 560052.
ಹೆಚ್ಚಿನ ಮಾಹಿತಿಗಾಗಿ ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಹತ್ತಿರದ ಬುಡಾ ಕಾಂಪ್ಲೆಕ್ಸ್ ನ ಮಳಿಗೆ 24 ರ ಲಿಡ್ಕರ್ ಲೆದರ್ ಎಂಪೋರಿಯA ಕಚೇರಿ ಅಥವಾ ಮೊ.8660667128 ಗೆ ಸಂಪರ್ಕಿಸಬಹುದಾಗಿದೆ ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ (ಲಿಡಕರ್)ದ ಜಿಲ್ಲಾ ಸಂಯೋಜಕ ಟಿ.ಸಂಜೀವಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ