Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಮೌನ ಎಂಬ ಬಂಗಾರ

 

ಎಷ್ಟೋ ಬಾರಿ ಸಣ್ಣ ಪುಟ್ಟ ಮಾತುಕತೆಗಳು ವಾದ ವಿವಾದಗಳಲ್ಲಿ ಪರ್ಯವಸಾನವಾಗುತ್ತದೆ. ಸರಿ ತಪ್ಪುಗಳ ಎಣಿಕೆಯಲ್ಲಿ ತೊಡಗಿ ಸೋಲು ಗೆಲುವುಗಳ ಪ್ರಶ್ನೆ ಜನರನ್ನು ಕಾಡುತ್ತದೆ. ಇಬ್ಬರು ವ್ಯಕ್ತಿಗಳ ನಡುವಿನ ಒಂದು ಪುಟ್ಟ ಮಾತು ಪರಸ್ಪರರ ನಡುವಿನ ಜಗಳಕ್ಕೆ ಕಾರಣವಾಗಿ ಈ ಜಗಳವು ಜಾತಿ ಧರ್ಮಗಳ ಹೆಸರಿನವರೆಗೂ ಮುಂದುವರೆದು ನಂತರ ಧರ್ಮ ಯುದ್ಧದವರೆಗೂ ಕೊಂಡೊಯ್ದ ಉದಾಹರಣೆಗಳಿವೆ. ಆದರೆ ನಿಜವಾಗಿಯೂ ನಮ್ಮನ್ನು ಕಾಡುವ ಪ್ರಶ್ನೆ , ಈ ರೀತಿಯ ಜಗಳಗಳು ನಮಗೆ ಅವಶ್ಯವಿದೆಯೇ ಎಂದು?

ಎಷ್ಟೋ ಬಾರಿ ವಾದ ವಿವಾದಗಳ ಮಾಡುವಾಗ ಜನರು ತಮ್ಮ ಎದುರಿಗಿರುವವರನ್ನು ದೂರುತ್ತಾರೆ... ತಾವು ಸರಿಯಾಗಿದ್ದೇವೆ ಎಂದಲ್ಲ ಬದಲಾಗಿ ಅವರಿಗೆ ಏನು ಮಾತನಾಡಬೇಕು ಎಂದು ತೋಚದೆ ಹಾಗೆ ವರ್ತಿಸುತ್ತಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು.

ಗ್ರೀಸ್ ನ ತತ್ವಜ್ಞಾನಿ ಸಾಕ್ರೆಟಿಸ್ ಒಂದು ಬಾರಿ ಕೆಲ ಒರಟು ಮತ್ತು ತಿಳುವಳಿಕೆ ಇಲ್ಲದ ಜನರಿಂದ ಸುತ್ತುವರಿಯಲ್ಪಟ್ಟ. ಅವರೆಲ್ಲರೂ ಆತನನ್ನು ಅವಾಚ್ಯವಾಗಿ ಬೈಯುತ್ತಾ ನಿಂತರು, ಮತ್ತೆ ಕೆಲವರು ಆತನ ಕೊರಳಪಟ್ಟಿ ಹಿಡಿದು ಆತನಿಗೆ ಅವಮಾನ ಮಾಡಿದರು.

ಆದರೆ ಸಾಕ್ರಟಿಸನ ಪ್ರತಿಕ್ರಿಯೆ ಅತ್ಯಂತ ಭಿನ್ನವಾಗಿತ್ತು . ಆತ ಯಾರಿಗೂ ತಿರುಗಿಸಿ ಉತ್ತರ ಕೊಡಲಿಲ್ಲ, ಪ್ರತಿರೋಧವನ್ನು ಕೂಡ ತೋರಲಿಲ್ಲ. ಸುಮ್ಮನೆ ಗರುಡಗಂಬದಂತೆ ನಿಂತು ಅವರೆಲ್ಲರಿಂದ ಬೈಗುಳವನ್ನು ತಿಂದ. ಒಂದು ಹಂತದವರೆಗೆ ಬೈದು ಸಾಕಾದ ಅವರೆಲ್ಲ ಪರಸ್ಪರ ಮುಖ ನೋಡಿಕೊಂಡು ಅಲ್ಲಿಂದ ಹೊರಟು ಹೋದರು.

ಅವರೆಲ್ಲ ಹೊರಟು ಹೋದ ನಂತರ ಏನೂ ಆಗಿಯೇ ಇಲ್ಲ ಎಂಬಂತೆ ಎದ್ದು ತನ್ನ ಬಟ್ಟೆಗಳನ್ನು ಜಾಡಿಸಿ ಹೊರಟು ಬಂದ ಸಾಕ್ರೆಟಿಸ್ ನನ್ನು ನೋಡಿ ಆತನ ಶಿಷ್ಯರು ದಂಗಾದರು. ಕುತೂಹಲ ತಾಳದ ಆತನ ಶಿಷ್ಯನೊಬ್ಬ ಸಾಕ್ರೆಟಿಸ್ ನ ಶಾಂತ ಪ್ರತಿಕ್ರಿಯೆಯನ್ನು ಕುರಿತು " ಅವರು ನಿಮ್ಮ ಮೇಲೆ ಅಷ್ಟೆಲ್ಲ ರೀತಿಯಲ್ಲಿ ದಾಳಿ ಮಾಡಿ ಮಾತನಾಡುತ್ತಿದ್ದಾಗಲೂ ನೀವು ಯಾವುದಕ್ಕೂ ಪ್ರತಿಕ್ರಿಯಿಸದೆ ಸುಮ್ಮನೆ ನಿಂತದ್ದೇಕೆ? ಎಂದು ಪ್ರಶ್ನಿಸಿದ.

ಸಾಕ್ರೆಟಿಸ್ ಕೂಡಲೇ "ಕತ್ತೆಯೊಂದು ನಿನ್ನನ್ನು ಒದೆಯಿತು ಎಂದು ನೀನು ಆ ಕತ್ತೆಯನ್ನು ಕೋರ್ಟಿಗೆ ಕೊಂಡೊಯ್ಯುವೆಯಾ.... ಇಲ್ಲವಷ್ಟೇ ಇದೂ ಹಾಗೆಯೇ" ಎಂದು ಉತ್ತರಿಸಿದ.

ಆತನ ಒಂದು ಸಾಲಿನ ಈ ಉತ್ತರದಲ್ಲಿ ಒಂದಿಡಿ ಜನ್ಮಕ್ಕಾಗುವಷ್ಟು ಪಾಠವಿದೆ.

ಜಾಣನಾದವನು ಮೂರ್ಖನಂತೆ ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಆತ ಕೆಟ್ಟ ಜನರ ವರ್ತನೆಗೆ ಮೌನವಾಗಿ ಉಳಿಯುವ ಮೂಲಕ ತನ್ನ ಪ್ರತಿಕ್ರಿಯೆಯನ್ನು ತೋರುತ್ತಾನೆ.
ಬಹಳಷ್ಟು ಬಾರಿ ಮೌನ ನಮ್ಮ ಬಲಹೀನತೆಯಲ್ಲ ಇದು ನಮ್ಮ ತಾಕತ್ತು ಎಂಬುದನ್ನು ನಾವು ಅರಿಯಬೇಕು.

ಮೌನವನ್ನು ಭರಿಸುವುದು ಶಕ್ತಿಯ ಸಂಕೇತ
ಮೌನವು ಹಲವಾರು ಸಮಸ್ಯೆಗಳಿಗೆ ಒಂದೇ ರೀತಿಯ ಪ್ರತಿಕ್ರಿಯೆಯನ್ನು ನೀಡುವ ಮೂಲಕ ಉತ್ತರವಾಗ ಬಲ್ಲದು. ಅರಿತವರು ಮೌನದ ಮೊರೆ ಹೋಗುತ್ತಾರೆ.

ಜ್ಞಾನಿಗಳು ಪ್ರಬುದ್ಧರು ಯಾವಾಗ ಮಾತನಾಡಬೇಕು, ಹೇಗೆ ಮಾತನಾಡಬೇಕು, ಎಷ್ಟು ಮಾತನಾಡಬೇಕು ಎಂಬುದರ ಅರಿವನ್ನು ಹೊಂದಿದ್ದು, ಯಾವಾಗ ಜನರನ್ನು ದೂರವಿಡಬೇಕು ಎಂಬುದನ್ನು ಕೂಡ ಅರಿತಿರುತ್ತಾರೆ.

ಕೆಲವೊಬ್ಬರು ತಮ್ಮ ಎದುರಾಳಿಗಳನ್ನು ಸುಮ್ಮನಾಗಿರಿಸಲು ಒಂದೇ ಸಮನೆ ಮಾತನಾಡುತ್ತಾರೆ. ಕೆಲವರು ತಮಗೆ ಎಲ್ಲವೂ ತಿಳಿದಿದೆ ಎಂಬಂತೆ ಮಾತನಾಡುತ್ತಾರೆ. ಆಗ ತಿಳುವಳಿಕೆ ಉಳ್ಳವರು ಅವರ ಎಲ್ಲ ಮಾತುಗಳು ಬಡಾಯಿ ಎಂದು ಗೊತ್ತಿದ್ದರೂ ಕೂಡ ಮುಗುಳ್ನಗುತ್ತಾ ಸುಮ್ಮನೆ ಇರುತ್ತಾರೆ.... ಕಾರಣ ಅತ್ಯಂತ ಸರಳ ಮತ್ತು ಸ್ಪಷ್ಟ.

"ಮಾತು ಬೆಳ್ಳಿ, ಮೌನ ಬಂಗಾರ" ಎಂದು ನಮ್ಮ ಹಿರಿಯರು ಹೇಳಿರುವುದು ಇದೇ ಕಾರಣಕ್ಕೆ ಇರಬಹುದು. ಎಷ್ಟೋ ಬಾರಿ ನೂರಾರು ಮಾತನಾಡಿ ಒಪ್ಪಿಸುವ ವಿಷಯವನ್ನು ಕೇವಲ ಒಂದು ಮೌನದ ಭಾವದಲ್ಲಿ ನಾವು ತಿಳಿ ಹೇಳಬಹುದು. ಪತಿಗೆ ತನ್ನ ಪತ್ನಿಯ ಮೌನ, ಮಕ್ಕಳಿಗೆ ತಮ್ಮ ತಾಯಿಯ ಮೌನ ತರುವಷ್ಟು ಭಯವನ್ನು ಈ ಜಗತ್ತಿನಲ್ಲಿ ಮತ್ತೆ ಬೇರಾವ ವಿಷಯದಲ್ಲೂ ನಾವು ಕಾಣಲು ಸಾಧ್ಯವಿಲ್ಲ.

ಮೌನಕ್ಕಿರುವ ಧಾರಣ ಶಕ್ತಿ ಮಾತಿಗಿಲ್ಲ. ಎಷ್ಟೋ ಬಾರಿ ಹೆಣ್ಣಿಗೆ ಮೌನವೇ ಆಭರಣ. ಎಷ್ಟೋ ಬಾರಿ ಜಗಳವನ್ನು ತಪ್ಪಿಸಲು ಇಲ್ಲದ ಕಿರಿಕಿರಿಗಳನ್ನು ನೋವುಗಳನ್ನು ತಪ್ಪಿಸಲು ಜನರು ಮೌನದ ಮೊರೆ ಹೋಗುತ್ತಾರೆ.... ಮೌನ ಪಲಾಯನ ವಾದವಲ್ಲ. ಮೌನ ಪೂರ್ಣ ವಿರಾಮವೂ ಅಲ್ಲ.... ಅದೊಂದು ಅಲ್ಪವಿರಾಮ. ತುಸು ಯೋಚಿಸಿ ಮುಂದುವರೆಯಲು ನಮಗೆ ನಾವು ಕೊಟ್ಟುಕೊಳ್ಳುವ ಸಮಯ ಈ ಸಮಯವನ್ನು ಚೆನ್ನಾಗಿ ಯೋಚಿಸಿ ಬಳಸಿಕೊಳ್ಳಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ