ಮಾನ್ವಿ:ತಾಲೂಕಿನ ಕಪಗಲ್ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ರೈಲ್ವೆ ಇಲಾಖೆಯಿಂದ ಗಿಣಿಗೇರ ದಿಂದ ಮೆಹಬೂಬ್ ನಗರ ರೈಲ್ವೆ ಟ್ರಾಕ್ ನಿರ್ಮಾಣ ಕಾಮಗಾರಿಗಾಗಿ ಅಗತ್ಯವಿರುವ ಮರಂಗಾಗಿ ಜಮೀನಿನಲ್ಲಿ ಆಗೆದ ಗುಂಡಿಗೆ ಕಪಗಲ್ ಗ್ರಾಮದ ಬಾಲಕ ಯಶವಂತ ತಂದೆ ಆಂಜನೇಯ್ಯ ವ.8 ವರ್ಷ ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ
ಭಾನುವಾರ ವಾಗಿರುವುದರಿಂದ ತಾಯಿ ಜೊತೆಗೆ ಕಪಗಲ್ಲ್ ಗ್ರಾಮದ ಹೊರಭಾಗದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ತೆರಳಿದ ತಂದೆಗೆ ಊಟ ನೀಡುವುದಕ್ಕೆಂದು ತೆರಳಿದ ವೇಳೆ ಆಟವಾಡುತ್ತ ಜಮೀನಿನ ಪಕ್ಕದಲ್ಲಿನ ರೈಲ್ವೆ ಟ್ರಾಕ್ ನಿರ್ಮಾಣ ಕಾಮಗಾರಿಗಾಗಿ ಆಗೆದ ಗುಂಡಿಯಲ್ಲಿ ಬಿದ್ದು ಬಾಲಕ ಮೃತ ಪಟ್ಟಿದು ರೈಲ್ವೆ ಕಾಮಗಾರಿಗಾಗಿ ಅಗತ್ಯವಿರುವ ಮರಂ ಅನ್ನು ಅಗೆದ ಗುತ್ತಿಗೆ ದಾರರು ನಂತರ ಗುಂಡಿಯ ಸುತ್ತ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿದರಿಂದ ಬಾಲಕ ಮೃತಪಟ್ಟಿರುವ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದು ಮಾನ್ವಿ ಪೊಲೀಸ್ ಠಾಣೆಯ ಪಿ.ಐ. ಸೇಮಶೇಖರ ಎಸ್, ಕೆಂಚರೆಡ್ಡಿ ಅಗತ್ಯ ತನಿಖೇ ಕೈಗೊಂಡಿದ್ದಾರೆ.
