Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಶಿಕ್ಷಣ ಸುದ್ದಿ

ಕುವೆಂಪು ವಿವಿಯಿಂದ ಪದವಿ ಪ್ರದಾನಕ್ಕೆ ಅರ್ಜಿ ಆಹ್ವಾನ


ಶಿವಮೊಗ್ಗ,ಮೇ.13: ಕುವೆಂಪು ವಿಶ್ವವಿದ್ಯಾಲಯದ 35 ನೇ ವಾರ್ಷಿಕ ಘಟಿಕೋತ್ಸವ ಮೇ/ಜೂನ್-2025 ರ ಮಾಹೆಯಲ್ಲಿ ಜರುಗಲಿದ್ದು ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.

ಆಗಸ್ಟ್/ಸೆಪ್ಟಂಬರ್-2024 ರ ಸ್ನಾತಕ, ಅಕ್ಟೋಬರ್/ನವೆಂಬರ್-2024 ರ ಬಿ.ಪಿ ಇಡಿ, ಸ್ನಾತಕೋತ್ತರ, ಪಿಜಿ ಡಿಪ್ಲೋಮಾ, ಜನವರಿ/ಫೆಬ್ರವರಿ-2025ರ ಬಿ.ಇಡಿ ಹಾಗೂ 2025 ಜನವರಿ 31 ಮತ್ತು ನಂತರದಲ್ಲಿ ಪಿಹೆಚ್.ಡಿ ಪದವಿಗೆ ಪ್ರಕಟಣೆ ಹೊರಡಿಸಲಾದ ಅರ್ಹ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.

ಘಟಿಕೋತ್ಸವದಲ್ಲಿ ರ‍್ಯಾಂಕ್/ ಸ್ವರ್ಣ ಪದಕ/ನಗದು ಬಹುಮಾನ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಿದ್ದು, ಮೇಲ್ಕಂಡ ವರ್ಷದಲ್ಲಿ ಪ್ರವೇಶ ಶುಲ್ಕದ ಜೊತೆಗೆ ಘಟಿಕೋತ್ಸವ ಶುಲ್ಕವನ್ನು ಪಾವತಿಸಿರುವ ದೂರ ಶಿಕ್ಷಣದ ವಿದ್ಯಾರ್ಥಿಗಳು ಹಾಗೂ ರೆಗ್ಯೂಲರ್ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.

ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ವಿಶ್ವವಿದ್ಯಾಲಯದ ವೆಬ್‌ಸೈಟ್ ವಿಳಾಸ www.kuvempu.ac.in ನಲ್ಲಿ ವಿದ್ಯಾರ್ಥಿಗಳು ಎಕ್ಸಾಮಿನೇಷನ್ ಗೆ ಲಾಗಿನ್ ಆಗಿ ಕಾನ್ವೊಕೇಶನ್ ಅಪ್ಲಿಕೇಷನ್ ಎಂಬ ಲಿಂಕ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು. ಇ–ಅರ್ಜಿಯನ್ನು ಅಪ್‌ಲೋಡ್ ಮಾಡುವ ಬಗ್ಗೆ ಸೂಚನೆಗಳನ್ನು ಈ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ.

ಪಿಹೆಚ್.ಡಿ, ಪದವೀಧÀರರು ಅರ್ಜಿಯನ್ನು ನೇರವಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.in ನೀಡಲಾಗಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜೂ.2 ಕೊನೆಯ ದಿನಾಂಕವಾಗಿದೆ.

ದೂರಶಿಕ್ಷಣದ ಅಭ್ಯರ್ಥಿಗಳಿಗೆ ರೂ.1265, ಪಿಹೆಚ್.ಡಿ/ಎಂ.ಫಿಲ್ ಪದವೀಧರ(ಸಾಮಾನ್ಯ)ರಿಗೆ ರೂ.4125, ಎಸ್‌ಸಿ/ಎಸ್‌ಟಿಗೆ ರೂ.3610, ಹಾಗೂ ರೆಗ್ಯುಲರ್ ಅಭ್ಯರ್ಥಿಗಳಿಗೆ(ಸಾಮಾನ್ಯ) ರೂ.1045, ಎಸ್‌ಸಿ/ಎಸ್‌ಟಿಗೆ ರೂ.905 ಎನ್‌ಆರ್‌ಐಗೆ ರೂ. 6985 ಶುಲ್ಕ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಎಟಿಎಂ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಇಂಟರ್‌ನೆಟ್ ಬ್ಯಾಂಕಿಣಗ್ ಪೇ ಮೆಂಟ್/ ಪೇ ಯು ನಲ್ಲಿ ನೇರವಾಗಿ ಪಾವತಿಸಬಹುದಾಗಿದೆ.

ಘಟಿಕೋತ್ಸದಲ್ಲಿ ಆಯಾ ಪದವಿಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದವರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ವೇದಿಕೆ ಮೇಲೆ ಪ್ರದಾನ ಮಾಡಲಿದ್ದು, ಇತರೆ ರ‍್ಯಾಂಕ್ ವಿಜೇತರಿಗೆ ಪದವಿ ಮತ್ತು ಪ್ರಮಾಣ ಪತ್ರ ಖುದ್ದಾಗಿ ಘಟಿಕೋತ್ಸವದ ಕಚೇರಿಯಲ್ಲಿ ವಿತರಿಸಲಾಗುತ್ತದೆ. ರೆಗ್ಯುಲರ್ ಆಗಿ ಅಧ್ಯಯನ ಮಾಡಿರುವ ಸ್ನಾತಕ/ ಸ್ನಾತಕೋತ್ತರ ಪದವೀಧರರ ಪದವಿ ಪ್ರಮಾಣ ಪತ್ರವನ್ನು ಘಟಿಕೋತ್ಸವ ನಂತರದಲ್ಲಿ ಅವರು ಅಧ್ಯಯನ ಮಾಡಿದ ವಿಭಾಗ/ ಕಾಲೇಜುಗಳಿಂದ ಪಡೆದುಕೊಳ್ಳಬಹುದು. ಪ್ರಸುತ್ತ ಶೈಕ್ಷಣಿಕ ಸಾಲಿಗೆ ಹೊರತುಪಡಿಸಿ ಬೇರೆಲ್ಲಾ ಅರ್ಜಿದಾರರು ಘಟಿಕೋತ್ಸವದ ನಂತರದಲ್ಲಿ ಅವರವರ ವಿಭಾಗ/ಕಾಲೇಜು/ಅಧ್ಯಯನ ಕೇಂದ್ರಗಳಿAದ ಅವರ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟಾçರ್ ಮೌಲ್ಯಮಾಪನ ಕಾರ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ, ಶಂಕರಘಟ್ಟ-577451, ಇ-ಮೇಲ್:[email protected] ಹಾಗೂ ದೂ.ಸಂ: ಅಂಡರ್ ಗ್ರಾಜುಯೇಟ್ ಕೋರ್ಸ್-7022254997, ಪೋಸ್ಟ್ ಗ್ರಾಜುಯೇಟ್ ಕೋರ್ಸ್/ ಪ್ರೊಫೆಷನಲ್ ಕೋರ್ಸ್/ಪಿಹೆಚ್.ಡಿ-7022254993, ಡಿಸ್ಟೆಂಟ್ ಮೋಡ್-7022255891, ಕಂಪ್ಯೂಟರ್ ಸೆಕ್ಷನ್-8904712601, ಟಿಕ್ನಿಕಲ್ ಅಸಿಸ್ಟೆಂಟ್-7022255745, ಆನ್‌ಲೈನ್ ರಿಲೆಟೆಡ್ ಎನ್‌ಕ್ವೆರಿ-8183098138, 8183098136 ಗೆ ಸಂಪರ್ಕಿಸಬಹುದು ಎಂದು ಕುಲಸಚಿವರು ಮೌಲ್ಯಮಾಪನ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ