Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾಲಶತಕ ಕೃತಿ ಲೋಕಾರ್ಪಣೆ:

ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು, ಆಗ ಮಾತ್ರ ಪತ್ರಿಕೆಗಳು ಉನ್ನತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಲದೆ ಪುಸ್ತಕಗಳನ್ನು ಕೊಂಡು ಓದುವುದರಿಂದ ಲೇಖಕರಿಗೆ ಆರ್ಥಿಕವಾಗಿ ಅನುಕೂಲವಾಗಲಿದ್ದು, ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಬರೆದು ಪ್ರಕಟಿಸಲು ಅನುಕೂಲವಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರುಸ್ಕೃತ ಮಂಜಮ್ಮ ವಿ ಜೋಗತಿ ತಿಳಿಸಿದರು.
ತಾಲೂಕಿನ ತೆಕ್ಕಲಕೋಟೆಯ ಶ್ರೀಮತಿ ಹೊನ್ನೂರಮ್ಮ ದಿವಂಗತ ಎಂ.ಸಿದ್ದಪ್ಪ ಸರ್ಕಾರಿಪ್ರಥಮದರ್ಜೆ ಕಾಲೇಜಿನ ಬಯಲು ರಂಗಮ0ದಿರದಲ್ಲಿ ಯುವ ಕವಿ ನಿಟ್ರುವಟ್ಟಿ ಲಕ್ಷö್ಮಣ ಅವರ ಬಾಲಶತಕ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ನಮ್ಮಲ್ಲಿ ಇಂದಿಗೂ ಪತ್ರಿಕೆಗಳನ್ನು ಕೊಂಡು ಓದುವ ಸಂಸ್ಕೃತಿ ಹೆಚ್ಚಾಗುತ್ತಿಲ್ಲ. ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು, ಪ್ರತಿಯೊಬ್ಬರು ಪತ್ರಿಕೆ ಮತ್ತು ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಳ್ಳಬೇಕೆ0ದು ಕರೆ ನೀಡಿದರು.
ನಾನು ಈ ಮಟ್ಟಕ್ಕೆ ಬೆಳೆಯಲು ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರು ಮಾಡಲು ಪತ್ರಿಕೆಗಳು ಮತ್ತು ಪುಸ್ತಕಗಳು ಸಾಕಷ್ಟು ಅನುಕೂಲ ಮಾಡಿಕೊಟ್ಟಿವೆ. ನಾನು ಪ್ರತಿನಿತ್ಯ ಪತ್ರಿಕೆಯನ್ನು ಓದುತ್ತೇನೆ. ವಿವಿಧ ಪುಸ್ತಕಗಳನ್ನು ಓದುತ್ತಿದ್ದು, ಇಂದು ಸಭೆ ಸಮಾರಂಭಗಳಲ್ಲಿ ಮಾತನಾಡುವ ಕಲೆ ಸಿದ್ದಿಸಿದ್ದು ಓದಿನಿಂದ ಎಂದು ಹೇಳಿದರು.
ಕವಿಗಳು ಸಮಾಜದಲ್ಲಿ ತುಳಿತಕ್ಕೊಳಗಾದವರ ಮತ್ತು ಶೋಷಿತರ ಧ್ವನಿಯಾಗಿ ಕಾವ್ಯ ಬರೆಯಬೇಕು, ಕಾವ್ಯದಿಂದ ಸಮಾಜ ತಿದ್ದುವ ಕಾರ್ಯ ನಡೆಯಬೇಕು, ಜ್ಞಾನದಿಂದ ದುಡ್ಡು ಸಂಪಾದನೆ ಮಾಡಬಹುದೆ ಹೊರತು ದುಡ್ಡಿನಿಂದ ಜ್ಞಾನ ಸಂಪಾದನೆ ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ವಿದ್ಯೆಯನ್ನು ಕಲಿಯಬೇಕು, ವಿದ್ಯೆ ಇದ್ದರೆ ಮಾತ್ರ ಸಮಾಜದಲ್ಲಿ ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಸಮಾಜದಲ್ಲಿ ನನ್ನಂತಹ ಮಗು ಹುಟ್ಟಿದರೆ ಆ ಮಗುವನ್ನು ಯಾವ ತಂದೆ ತಾಯಿ ನಿರ್ಲಕ್ಷೆö್ಯ ಮಾಡಬೇಡಿ, ಅವರಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿ ಅವರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನನ್ನಂತೆ ಹುಟ್ಟಿದ ಅನೇಕ ಮಕ್ಕಳಿಗೆ ಶಿಕ್ಷಣವಿಲ್ಲದೆ ಅನೇಕರು ಇಂದು ಸಿಗ್ನಲ್‌ಗಳಲ್ಲಿ, ರೈಲುಗಳಲ್ಲಿ, ರಸ್ತೆಗಳಲ್ಲಿ ನಿಂತು ಭಿಕ್ಷೆ ಬೇಡುವ ಪರಿಸ್ಥಿತಿ ಇರುತ್ತದೆ. ಆದ್ದರಿಂದ ನನ್ನಂತಹ ಮಗು ಹುಟ್ಟಿದರೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.
ಸಾಹಿತಿ ಹೆಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ ನಮ್ಮದೆಯ ಜ್ಯೋತಿ ಮತ್ತೊಂದು ದೀಪವನ್ನು ಹಚ್ಚುವ ಕೆಲಸವಾಗಬೇಕು, ಸಾಂಸ್ಕೃತಿಕ, ಸಾಹಿತ್ಯಿಕ ಕಾಯಕ ದೀಪವಾಗಿ ನಮ್ಮ ಜೀವನ ಬೆಳಗುವಂತಾಗಬೇಕೆ0ದು ಹೇಳಿದರು.
ಪ್ರಾಚಾರ್ಯ ಮಲ್ಲಿಕಾರ್ಜುನ ಮೋಕಾ ಮಾತನಾಡಿದರು. ಲೇಖಕ ದೀಕ್ಷಿತ್ ನಾಯಕ್ ಬಾಲಶತಕ ಕೃತಿ ಪರಿಚಯ ಮಾಡಿಕೊಟ್ಟರು. ಕರುನಾಡು ರಾಜ್ಯ ಪರಿಷತ್ ಅಧ್ಯಕ್ಷ ಪಯಾಜ್ ಅಹಮ್ಮದ್ ಖಾನ್, ಕವಿ ಎನ್.ಎಸ್.ವೇಣುಗೋಪಾಲ, ಕೆ.ಎಂ.ಸಿದ್ದರಾಮಯ್ಯ ಗವಾಯಿ ಲೇಖಕ ನಿಟ್ರುವಟ್ಟಿ ಲಕ್ಷö ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ