Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಶಿಕ್ಷಣ ಸುದ್ದಿ

ಬಿಡಿಸಿಸಿ&ಐ ಹೋಟಲ್ ಮೇನೇಜ್ಮೆಂಟ್ ಕೋರ್ಸ್ : ಪ್ರಾಯೋಗಿಕ ತರಬೇತಿ

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್ಮೆಂಟ್ ಸೆಂಟರ್' ನೇತೃತ್ವದಲ್ಲಿ ನಡೆಯುತ್ತಿರುವ ಹೋಟಲ್ ಮ್ಯಾನೇಜ್ಮೆಂಟ್ ಕೋರ್ಸ್ನ ಭಾಗವಾಗಿ ವಿದ್ಯಾರ್ಥಿಗಳನ್ನು ತೋರಣಗಲ್ಲು, ಹೊಸಪೇಟೆ ಮತ್ತು ಹಂಪೆಯ ಅಂತಾರಾಷ್ಟ್ರೀಯ ದರ್ಜೆಯ ವಿವಿಧ ಹೋಟಲ್‌ಗಳಲ್ಲಿ  ಪ್ರಾಯೋಗಿಕ ತರಬೇತಿ ನೀಡಲಾಯಿತು.

ಅಂತಾರಾಷ್ಟ್ರೀಯ ದರ್ಜೆಯ ತೋರಣಗಲ್ಲು ವಿದ್ಯಾನಗರ ಹೋಟಲ್ ಹಯಾತ್, ರಾಕ್ ರೀಜೆನ್ಸಿ, ಹೊಸಪೇಟೆಯ ರಾಯಲ್ ಆರ್ಕಿಡ್, ಹಂಪೆಯ ವಿಜಯಶ್ರೀ ಹೆರಿಟೇಜ್ ಮತ್ತು ದರೋಜಿಯ ಎವಾಲ್ವ್ ಬ್ಯಾಕ್ ಹೋಟಲ್‌ನಲ್ಲಿ ಒಟ್ಟು 33 ವಿದ್ಯಾರ್ಥಿಗಳಿಗೆ  ಪ್ರಾಯೋಗಿಕ ತರಬೇತಿ ನೀಡಲಾಯಿತು.

ಹೋಟಲ್ ಹಯಾತ್‌ನ ಅಸಿಸ್ಟೆಂಟ್ ಜನರಲ್ ಮೇನೇಜರ್ ರವೀಂದ್ರನಾಥ್, ತರಬೇತಿ ಅಧಿಕಾರಿ ನೈಜಲ್ ನಾಯ್ಡು, ರಕ್ಷಿತ್ ಮತ್ತು ಶಂಪಾ ಅವರು, ಹೋಟಲ್‌ನ ಕೋಣೆಗಳ ನಿರ್ವಹಣೆ, ಹೋಟಲ್‌ನಲ್ಲಿಯ ದೈನಂದಿನ ಚಟುವಟಿಕೆಗಳು, ಗ್ರಾಹಕರೊಂದಿಗಿನ ಆತ್ಮೀಯತೆ, ಶಿಸ್ತು-ಸಂಯಮ ಮತ್ತು ಇನ್ನಿತರೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್ಮೆಂಟ್ ಸೆಂಟರ್'ನ ಹೋಟಲ್ ಮೇನೇಜ್‌ಮೆಂಟ್ ಕೋರ್ಸ್ನ ತರಬೇತುದಾರರಾದ ಅನಿಲ್ ಕನಗಿನಿ ಮತ್ತು ಶ್ರೀಮತಿ ಅನುಷಾ ಅವರು, ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯ ನೀಡಲಿಕ್ಕಾಗಿ ಅಂತಾರಾಷ್ಟ್ರೀಯ ದರ್ಜೆಯ ಹೋಟಲ್‌ಗಳ ನಿರ್ವಹಣೆ ಮತ್ತು ದೈನಂದಿನ ಚಟುವಟಿಕೆಗಳ ಕುರಿತು ಪ್ರಾಯೋಗಿಕ ತರಬೇತಿ ಅಗತ್ಯವಾಗಿದೆ. ಕಾರಣ ವಿದ್ಯಾರ್ಥಿಗಳನ್ನು ತೋರಣಗಲ್ಲು, ಹೊಸಪೇಟೆ ಮತ್ತು ಹಂಪೆಯ ಹೋಟಲ್‌ಗಳಿಗೆ ಕರೆದುಕೊಂಡು ಬಂದು, ವೃತ್ತಿಪರರಿಂದಲೇ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ `ಸ್ಕಿಲ್ ಡೆವಲಪ್ಮೆಂಟ್ ಸೆಂಟರ್'ನ ಹೋಟಲ್ ಮೇನೇಜ್‌ಮೆಂಟ್ ಕೋರ್ಸ್ನ ವಿದ್ಯಾರ್ಥಿಗಳಾದ ಎರ‍್ರಿಸ್ವಾಮಿ ನಾಯಕ್ ಮತ್ತು ಜಿ. ಜ್ಯೋತಿ  ಅವರು, ಬಿಡಿಸಿಸಿ&ಐನ ಹೋಟಲ್ ಮೇನೇಜ್‌ಮೆಂಟ್ ಕೋರ್ಸ್ನಿಂದ ಕೌಶಲ್ಯಪೂರ್ಣ ತರಬೇತಿ ಸಿಗುತ್ತಿದೆ. ಅಂತಾರಾಷ್ಟ್ರೀಯ ದರ್ಜೆಯ ಹೋಟಲ್‌ಗಳಲ್ಲಿಯ ದೈನಂದಿನ ನಿರ್ವಹಣೆ - ಚಟುವಟಿಕೆಗಳ ಕುರಿತು ಸಾಕಷ್ಟು ಮಾಹಿತಿ ಸಿಕ್ಕಿದೆ. ಕೋರ್ಸ್ ಪೂರ್ಣಗೊಂಡ ನಂತರ ಇಲ್ಲಿಯ ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ಖಂಡಿತವಾಗಿಯೂ ಅಪಾರ ಬೇಡಿಕೆ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಡಿಸಿಸಿ&ಐನ ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಅವರು, ಹೋಟಲ್‌ಗಳ ನಿರ್ವಹಣೆಯಲ್ಲಿ ವೃತ್ತಿಪರತೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಹೋಟಲ್ ಮೇನೇಜ್‌ಮೆಂಟ್ ಕೋರ್ಸ್ನ ತರಬೇತಿ ನೀಡಲಾಗುತ್ತಿದೆ. ಮೊದಲನೇ ಬ್ಯಾಚ್‌ನ ಕೌಶಲ್ಯತೆ ಆಧರಿಸಿ, ಎರಡನೇ ಬ್ಯಾಚ್ ಪ್ರಾರಂಭಿಸುತ್ತೇವೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು, ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಚೇರ್ಮೆನ್ ಆಗಿರುವ ಯಶವಂತರಾಜ್ ನಾಗಿರೆಡ್ಡಿ ಅವರು, ಜಿಲ್ಲಾ ಪಂಚಾಯಿತಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಜಂಟಿ ಆಶ್ರಯದಲ್ಲಿ ಹೋಟಲ್ ಮೇನೇಜ್‌ಮೆಂಟ್ ಕೋರ್ಸ್ಗೆ ಉಚಿತ ಪ್ರವೇಶ ನೀಡಿ, ಗುಣಮಟ್ಟದ ವೃತ್ತಿ ತರಬೇತಿ ನೀಡಲಾಗಿದೆ. ಶೀಘ್ರದಲ್ಲೇ ಎರಡನೇ ಬ್ಯಾಚ್ ಪ್ರಾರಂಭಿಸಲಾಗುತ್ತದೆ ಎಂದರು.

ಹೋಟಲ್ ಹಯಾತ್‌ನ ಮೈಕಲ್, ರಾಯಲ್ ಆರ್ಕಿಡ್‌ನ ಇಬ್ರಾಹಿಂ, ಎವಾಲ್ವ್ ಬ್ಯಾಕ್‌ನ ಜಾನ್ಸಿ, ವಿದ್ಯಾಶ್ರೀ ರೆಸಾರ್ಟ್ನ ತನುಶ್ರೀ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ