Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಬಳ್ಳಾರಿ ರಾಘವರು ಶ್ರೇಷ್ಠ ಮಾನವತಾವಾದಿ: ಸಿದ್ದರಾಮ ಕಲ್ಮಠ

ಮಹಾನ್ ನಟರಾಗಿದ್ದ ರಾಘವರು ನೂರಾರು ನಾಟಕಗಳಲ್ಲಿ ತಮ್ಮ ಅಭಿನಯ,ಸಂಭಾಷಣೆಯಿಂದ ದೇಶಾದ್ಯಂತ ಅಸಂಖ್ಯಾತ ಜನರ ಅಭಿಮಾನ ಪ್ರೀತಿಯನ್ನು ಗಳಿಸಿದ್ದರೆಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಸಚಿವ ಸಿ .ನಾಗರಾಜ್ ರವರು ಹೇಳಿದರು.

ಅವರು ರಾಘವ ಕಲಾ ಮಂದಿರದಲ್ಲಿ

ರಾಘವ ಮೆಮೋರಿಯಲ್ ಅಸೋಸಿಯೇಷನ್(ರಿ) ಇವರು ಆಯೋಜಿಸಿದ್ದ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 145ನೇ ಜಯಂತಿ ಅಂಗವಾಗಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ,ಪುಸ್ತಕ ಬಿಡುಗಡೆ, ನಾಟಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

 ಅವರು ರಾಘವರ ಬಾಲ್ಯ,ರಂಗಾಸಕ್ತಿ,ನಾಟಕ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ರಂಗಭೂಮಿ ಕ್ಷೇತ್ರಕ್ಕೆ ಅವರದು ಅಮೂಲ್ಯ ಕೊಡುಗೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ,ಲೇಖಕ ಸಿದ್ದರಾಮ ಕಲ್ಮಠ ಮಾತನಾಡಿ, ಭಾರತೀಯ ರಂಗಭೂಮಿ ಕಂಡ ಧೀಮಂತ ನಟ ಬಳ್ಳಾರಿ ರಾಘವರು.ಅವರು ತಮ್ಮ ಹೊಸ ಅಲೆಯ ನಾಟಕಗಳಿಂದ ಅಂದಿನ ರಂಗಭೂಮಿಗೆ ಆಧುನಿಕತೆಯ ಸ್ಪರ್ಶ ನೀಡಿದರು.ಕನ್ನಡ ,ತೆಲುಗು ನಾಟಕಗಳಲ್ಲಿ ಅನೇಕ ಬದಲಾವಣೆಗಳಾದವು.ಅವರೊಬ್ಬ ಬಹುಭಾಷೆಗಳ ನಟ.ನಾಟಕಕಾರ,ನಿರ್ದೇಶಕ, ವೃತ್ತಿಯಲ್ಲಿ ವಕೀಲರಾಗಿದ್ದರೂ ಸಮಾಜಸುಧಾರಣೆಗೆ ನಾಟಕಗಳು ಮುಖ್ಯವೆಂದು ಭಾವಿಸಿದರು.ಅವರು ನಾಟಕಗಳು ಸಮಕಾಲೀನ ಸಮಾಜವನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದ್ದರು ಎಂದು ಅಭಿಪ್ರಾಯಪಟ್ಟರು.

ಸಹೃದಯರಾಗಿದ್ದ ರಾಘವರು ಕಲಾವಿದನಿಗೆ ಯಾವ ಭಾಷೆ,ಧರ್ಮ,ಮತದ ಭೇದವಿಲ್ಲ,ರಂಗಭೂಮಿಯಿಂದ ಸಮಾನತೆಯ ಸಮಾಜ ಕಟ್ಟಬಹುದೆಂದು ಕನಸು ಕಂಡಿದ್ದ ರಾಘವರು ಶ್ರೇಷ್ಠ ಮಾನವತಾವಾದಿ ಎಂದು ಹೇಳಿದರು. ಅಧ್ಯಕ್ಷತೆವಹಿಸಿದ್ದ ಅಸೋಸಿಯೇಷನ್ ನ ಗೌರವಾಧ್ಯಕ್ಷ ಕೆ.ಚನ್ನಪ್ಪ ಅವರು ಸಿದ್ದರಾಮ ಕಲ್ಮಠ ರಚಿಸಿದ " ರಂಗಭೂಮಿಯ ಅನರ್ಘ್ಯ ರತ್ನ ಬಳ್ಳಾರಿ ರಾಘವ " ಕೃತಿ ಬಿಡುಗಡೆ ಮಾಡಿದರು.ಅವರು ರಾಘವರ ಆದರ್ಶ ರಂಗ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದರು.

ವೇದಿಕೆ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಕೆ ಕೋಟೇಶ್ವರರಾವ್, ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್, ಹೆಚ್ ವಿಷ್ಣುವರ್ಧನ ರೆಡ್ಡಿ ಕಾರ್ಯದರ್ಶಿ ಎನ್. ಪ್ರಕಾಶ್, ಖಜಾಂಜಿ ಈ. ಧನಂಜಯ ,ಜಂಟಿ ಕಾರ್ಯದರ್ಶಿ ಎಂ. ರಾಮಾಂಜನೇಯಲು ಉಪಸ್ಥಿತರಿದ್ದರು.

ಈ ಸಾಲಿನ ರಾಜ್ಯಮಟ್ಟದ "ಬಳ್ಳಾರಿ ರಾಘವ" ಪ್ರಶಸ್ತಿಯನ್ನುರಂಗಭೂಮಿ,ಚಲನಚಿತ್ರ ನಟ ಶ್ರೀ ಡಿಂಗ್ರಿ ನಾಗರಾಜ ರವರಿಗೆ ನೀಡಿ ಗೌರವಿಸಲಾಯಿತು.

ನಂತರ ಧಾರವಾಡದ ಕಲಾಸಂಗಮ ಸಂಸ್ಥೆಯಿಂದ ವೀರೇಶ ಬಳಗಾಲಪೇಟ್ ರಚನೆಯ ಪ್ರಭು ಹಂಚಿನಾಳ ನಿರ್ದೇಶನದ "ಸಮರಸಿಂಹ ಸಂಗೊಳ್ಳಿ ರಾಯಣ್ಣ" ಕನ್ನಡ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ಕೋಲಾಚಲಂ ಸಂಧ್ಯಾ ಪ್ರಾರ್ಥಸಿದರು. ಕೆ ಕೋಟೇಶ್ವರರಾವ್ ಸ್ಚಾಗತಿಸಿದರು.ಎಂ. ರಾಮಾಂಜನೇಯಲು ವಂದಿಸಿದರು. ವಿಷ್ಣು ಹಡಪದ ನಿರೂಪಿಸಿದರು.ರಮಣಪ್ಪ ಭಜಂತ್ರಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ನೂರಾರು ಕಲಾಭಿಮಾನಿಗಳು ಪಾಲ್ಗೊಂಡಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ