Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆನರಾ ಬ್ಯಾಂಕ್ ವಿರುದ್ಧ ಸುಳ್ಳು ದೂರು ದಾಖಲಿಸಿದಕ್ಕೆ ರೂ.25,000 ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ


ಧಾರವಾಡ  ಮೇ.20: ಅಣ್ಣಿಗೇರಿಯ ನಿವಾಸಿ ಪಿ.ಎಷ್. ರಜಪುತ ಇವರು ಹುಬ್ಬಳ್ಳಿ-ಧಾರವಾಡದಲ್ಲಿ ಕೆಂಪು ಮೆನಸಿನಕಾಯಿ ವ್ಯಾಪಾರ ಮಾಡುತ್ತಿದ್ದರು. 2017 ರಲ್ಲಿ ಖರೀದಿಸಿದ ಕೆಂಪು ಮೆನಸಿನಕಾಯಿಗಳನ್ನು ಅಣ್ಣಿಗೇರಿಯ ಉಗ್ರಾಣದಲ್ಲಿ ಬಾಡಿಗೆ ಪಡೆದು ಕಾಯ್ದಿರಿಸಿದ್ದರು. ದೂರುದಾರರು ಅವುಗಳ ಮೇಲೆ ಕೆನರಾ ಬ್ಯಾಂಕಿನಲ್ಲಿ ರೂ.12,90,000 ಲೋನ್ನ್ನು ಪಡೆದಿದ್ದರು. ಲೋನ್ ನಿಯಮದಂತೆ ದೂರುದಾರರು ಕಂತಿನ ಹಣ ತುಂಬದೇ ಅವರ ಖಾತೆಯನ್ನು ಎನ್.ಪಿ.ಎ ಮಾಡಿದ್ದರು. ಇದನ್ನು ಪ್ರಶ್ನಿಸಿ ದೂರುದಾರರು ತಾನು ಇಟ್ಟಂತಹ ಕೆಂಪು ಮೆನಸಿನಕಾಯಿಯ ಮೊತ್ತ ಅಂದಾಜು ರೂ.42 ಲಕ್ಷ ಇದ್ದು ಅದನ್ನು ಸರಿಪಡಿಸಿಕೊಳ್ಳದೇ ತನ್ನ ಖಾತೆಯನ್ನು ಎನ್.ಪಿ.ಎ ಮಾಡಿರುವುದನ್ನು ಪ್ರಶ್ನಿಸಿ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.



ದಾಖಲೆಗಳನ್ನು ಪರಿಶೀಲಿಸಿದ ಆಯೋಗ ದೂರುದಾರರು ಉಗ್ರಾಣದ ಬಾಡಿಗೆ ಹಣವನ್ನು ತುಂಬಿರಲಿಲ್ಲ. ಕೊನೆಗೆ ಉಗ್ರಾಣದ ಸಿಬ್ಬಂದಿ ನೋಟಿಸ್ ನೀಡಿ ಅವರು ಇಟ್ಟಂತಹ ಕೆಂಪು ಮೆನಸಿನಕಾಯಿಯನ್ನು ಹರಾಜಿಗೆ ಹಚ್ಚಿ ತಮ್ಮ ಬಾಡಿಗೆ ಹಣವನ್ನು ಪಡೆದಿರುತ್ತಾರೆ. ಆದರೆ ದೂರುದಾರರು ಬ್ಯಾಂಕಿನಿಂದ ಪಡೆದಂತಹ ಸಾಲಕ್ಕೆ ಕಂತನ್ನು ತುಂಬದೇ ಇದ್ದ ಕಾರಣ ಅವರ ಖಾತೆಯನ್ನು ಎನ್.ಪಿ.ಎ ಮಾಡಿರುವುದು ಸರಿ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೇ ಬ್ಯಾಂಕಿಗೆ ಮೋಸ ಮಾಡುವದುರುದ್ದೇಶದಿಂದ ಈ ರೀತಿ ಸುಳ್ಳು ದೂರನ್ನು ದಾಖಲಿಸಿರುವುದು ಕಂಡು ಬರುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು, ದೂರು ದಾಖಲಿಸಿದ ಫಿರ್ಯಾದಿ ಕೆನರಾ ಬ್ಯಾಂಕಿಗೆ ರೂ.25,000 ಗಳ ದಂಡವನ್ನು ಖರ್ಚಿನ ಪರಿಹಾರವಾಗಿ ನೀಡುವಂತೆ ಆದೇಶಿಸಿ ಅವರ ದೂರನ್ನು ವಜಾ ಮಾಡಿ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮಹಿಳಾ ಸದಸ್ಯರು ತೀರ್ಪು ನೀಡಿದ್ದಾರೆ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ