Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ನಬಾರ್ಡ ನೆರವು* *ಸ್ವಾವಲಂಬಿ ಸಖಿ ಒಕ್ಕೂಟದ ಉತ್ಪನ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನಿಶ್


*



*ಧಾರವಾಡ  ಜು.18:* ಜುಲೈ 15 ರಂದು ನಬಾರ್ಡ ಕ್ಷೇತ್ರಿಯ ಕಾರ್ಯಲಯ ಬೆಂಗಳೂರುನಲ್ಲಿ ಆಯೋಜಿಸಿದ್ದ ನಬಾರ್ಡ 44 ಸಂಸ್ಥೆ ದಿನಾಚರಣೆ ಅಂಗವಾಗಿ ಸ್ವಾವಲಂಬಿ ಒಕ್ಕೂಟಗಳು ಆಯೋಜಿಸಿದ್ದ ಕೈ ಕುಸುರಿ ಹಾಗೂ ಕೈಮಗ್ಗ ವಸ್ತುಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದ ಧಾರವಾಡದ ಸ್ವಾವಲಂಬಿ ಸಖಿ ಒಕ್ಕೂಟ ತಯಾರಿಸಿದ ಅದ್ಭುತವಾದ ಆರಿ ಕಸೂತಿ ಉತ್ಪನ್ನಗಳಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜಿನೀಶ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.



ಈ ಆರಿ ಕಲೆಯು, ಕಾಶ್ಮೀರದಲ್ಲಿ ಹುಟ್ಟಿಕೊಂಡಿದ್ದರು, ನಮ್ಮ ಧಾರವಾಡದ ಮಹಿಳೆಯರು ಅದನ್ನು ವಿವಿಧ ಉತ್ಪನ್ನಗಳಿಗೆ ಅಳವಡಿಸಿಕೊಂಡಿದ್ದಾರೆ. ಅದರಿಂದ ಅವರು ಬಹಳಷ್ಟು ಕಲಾತ್ಮಕ ವಸ್ತುಗಳನ್ನು ತಯಾರಿಸಿದ್ದಾರೆ. ಇದುವರೆಗೆ 1.85 ಕೋಟಿಯ ವ್ಯವಹಾರ ಮಾಡಿದ್ದು, ಅದಕ್ಕೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಅವರು ಖಣದ ಬಟ್ಟೆ ಮತ್ತು ಆರಿ ಕಲೆಯನ್ನು ನವೀಕರಿಸಿ ಅದರಿಂದ ಆಭರಣಗಳು, ಬ್ಯಾಗುಗಳು, ಮಕ್ಕಳ ಉಡುಪುಗಳು, ಲೆಹೆಂಗಾ ಬ್ಲೌಸ್ ಇತ್ಯಾದಿ ಉಡುಪುಗಳನ್ನು ತಯಾರಿಸಿದ್ದಾರೆ. ಹುಬ್ಬಳ್ಳಿಯ ಶಿರೂರ ಪಾರ್ಕ್ ಹತ್ತಿರ ಇವರು ಒಂದು ಮಳಿಗೆಯನ್ನು ತೆರೆದು, ಸದರಿ ಉತ್ಪನ್ನಗಳ ಮಾರಾಟವನ್ನು ಉತ್ತಮವಾಗಿ ಕೈಗೊಂಡಿದ್ದಾರೆ.

2021 ರಲ್ಲಿ ಧಾರವಾಡ ಜಿಲ್ಲೆಯಲ್ಲಿ, ನಬಾರ್ಡ್ ಸಹಭಾಗಿತ್ವದಲ್ಲಿ, 350 ಸದಸ್ಯರನ್ನು ಒಳಗೊಂಡು ಈ ಕಂಪನಿ ಪ್ರಾರಂಭಿಸಿದರು. ಇದಕ್ಕೆ 9 ಜನ ಮಹಿಳಾ ನಿರ್ದೇಶಕರು ಎಲ್ಲರೂ ಗ್ರಹಿಣಿಯರಾಗಿದ್ದು ಈ ಕಂಪನಿಯನ್ನು ಬಲಿಷ್ಠವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಆರು ಘಟಕಗಳಿದ್ದು, ಆರಿಬ್ಯಾಗ್ ಯೂನಿಟ್, ಎಥನಿಕ್ ವೇರ್, ಲಾಂಜ್ ವೇರ, ಫ್ರೇಮ್ ಯುನಿಟ್, ಜುವೆಲರಿ ಯೂನಿಟ್, ಕುರ್ತಿ ಯೂನಿಟ್ ಹೀಗೆ ಆರು ಘಟಕಗಳನ್ನು ನಿರ್ವಹಿಸುತ್ತಿದ್ದಾರೆ. ಎಲ್ಲಾ ಉತ್ಪನ್ನಗಳನ್ನು ಅಲ್ಲಿಯೇ ತಯಾರಿಸಲಾಗುತ್ತಿದೆ.

ಕರ್ನಾಟಕ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಅವಸರ್ ಎಂಬ ಒಂದು ಮಳಿಗೆಯನ್ನು ಸ್ಥಾಪಿಸಿದ್ದಾರೆ. ಈ ಮಳಿಗೆ ನಮಗೆ ದೊರೆತಿರುವುದು , ಒಂದು ಸುವರ್ಣ ಅವಕಾಶವಾಗಿದೆ. ಎಂದು ಡಾ. ಶಾಲಿನಿ ರಜನೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಸ್ವಾವಲಂಬಿ ಸಖಿ ಕಂಪನಿಯು, ಸಾಮಾಜಿಕ ಜಾಲ ತಾಣಗಳಾದ face book,instagram (@authentic_Karnataka) ನಲ್ಲಿಯೂ ಸಕ್ರಿಯವಾಗಿದೆ. ತಮ್ಮ ವೆಬ್ ಸೈಟ authentickarnataka.in ಮೂಲಕ ವ್ಯವಹರಿಸುತ್ತಿದೆ.

ಈ ಚಟುವಟಿಕೆಗಳಿಗೆ ನಬಾರ್ಡ್ ಬ್ಯಾಂಕ ಆರ್ಥಿಕವಾಗಿ ಹಾಗೂ ಟ್ರೈನಿಂಗ್ ಗಳಿಗಾಗಿ ಸಹಾಯವನ್ನು ನೀಡುವ ಮೂಲಕ ಮಹಿಳೆಯರಿಗೆ ಆಧಾರವಾಗಿ ನಿಂತಿದೆ. ಸ್ವಾವಲಂಬಿ ಮಹಿಳೆಯರ ಈ ಕಥೆಯು ಎಲ್ಲ ಮಹಿಳೆಯರಿಗೂ ಸ್ಪೂರ್ತಿಯಾಗಲಿ ಎಂದು ಡಾ. ಶಾಲಿನಿ ರಜನೀಶ್ ರವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ನಬಾರ್ಡ್‍ನ ಚೀಫ್ ಜನರಲ್ ಮ್ಯಾನೇಜರ ಡಾ. ಸುರೇಂದ್ರ ಬಾಬು ಗುಪ್ತಾ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೀಜನಲ್ ಡೈರೆಕ್ಟರ್ ಡಾ.ಸೋನಾಲಿ ಸೇನ್, ಕೆನರಾ ಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಭವೇಂದ್ರ ಕುಮಾರ್, ಧಾರವಾಡ ನಬಾರ್ಡನ ಸಹಾಯಕ ಮಹಾ ಪ್ರಬಂಧಕ ಮಯೂರ ಕಾಂಬ್ಳೆ, ಸ್ವಾಲಂಬಿ ಸಖಿ ಒಕ್ಕೂಟದ ಸರ್ವಮಂಗಳ ಮೊತಿ, ವಿಜಯ ಮುದಿಗೌಡರ ಮತ್ತು ಅಕ್ಷತಾ ಎಫ್. ಅವರು ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ