Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ರೈತ ಆತ್ಮಹತ್ಯೆ ಸರಕಾರದಿಂದ ಪರಿಹಾರ ಧನ ವಿತರಣೆ   ೬ ಜನ ರೈತರಿಗೆ ತಲಾ ೫ ಲಕ್ಷ ರೂ. ಹಾಗೂ ಒಬ್ಬ ರೈತರಿಗೆ ೨ ಲಕ್ಷರೂ ಪರಿಹಾರ ಧನ ವಿತರಣೆ

ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು ಎನ್ನುವುದು ನನ್ನ ಕಳಕಳಿ ಮನವಿ  ನನ್ನ ಕ್ಷೇತ್ರದಲ್ಲಿ ರೈತ ಆತ್ಮಹತ್ಯೆ ಅಂತಹ ಘಟನೆಗಳು ನಡೆದದ್ದು ಬಹಳ ದುಃಖಕರ ಸಂಗತಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.

ಬೀದರ್ ನಗರದ  ಪ್ರತಾಪ ನಗರದಲ್ಲಿನ ಶಾಸಕರ ಕಚೇರಿಯಲ್ಲಿ  ರೈತ ಆತ್ಮಹತ್ಯೆ  ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರಿಗೆ ಪರಿಹಾರ ಧನದ ಮಾಹಿತಿ ಪತ್ರ ವಿತರಿಸಿ  ಅವರು ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರದ   ಕಪಲಾಪುರ, ಹೊನ್ನಡ್ಡಿ,  ಅಷ್ಟೂರ, ಮರ್ಜಾಪುರ,  ಜಮಿಸ್ತಾಪುರ, ಘೋಡಂಪಳ್ಳಿ, ಸಂಗೋಳಗಿ ತಾಂಡಾ  ಗ್ರಾಮ ಸೇರಿ ಒಟ್ಟು ಆರು  ಜನ ರೈತರು ಸಾಲ ಭಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಹಾಗೂ ಒಬ್ಬರು ರೈತರಿಗೆ ಹಾವು ಕಡಿದು ಮೃತಪಟ್ಟಿದ್ದರು ಅವರ ಕುಟುಂಬದ ಸಂತ್ರಸ್ತರಿಗೆ  ಅಂದು ಸರಕಾರ ದಿಂದ  ಪರಿಹಾರ ಧನ ಒದಗಿಸುವ ಭರವಸೆ ನೀಡಿದ್ದೆ ಇದೀಗ  ರೈತ ಆತ್ಮಹತ್ಯೆಗೆ  ತಲಾ ೫ ಲಕ್ಷ ರೂ. ಹಾಗೂ ಹಾವು ಕಡಿತದಿಂದ ಮೃತಪಟ್ಟ ರೈತರಿಗೆ  ಎರಡು ಲಕ್ಷ ರೂ. ಇಗಾಗಲೇ ಅವರ ಖಾತೆಗೆ ಸರಕಾರದಿಂದ  ಜಮಾ ಮಾಡಲಾಗಿದೆ ಇಂದು  ಪರಿಹಾರ ಧನದ ಮಾಹಿತಿ ಪತ್ರ  ವಿತರಣೆ ಮಾಡಿ ಮೃತ ರೈತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿ ಮುಂದಿನ ಜೀವನಕ್ಕೆ ಪ್ರೋತ್ಸಾಹಿಸಲಾಯಿತು.

ಬೇಸಾಯದ ಬದುಕಿನಲ್ಲಿ  ಅನುಭವಿಸಿದ ಸೋಲು ಮತ್ತು ಸಾಲದ ಶೂಲ ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ನೂಕುತ್ತಿವೆ. ಕೃಷಿ ನೆರವಿಗಾಗಿ ಸರಕಾರದಿಂದ ಹತ್ತಾರು ಯೋಜನೆಗಳು ಇದ್ದರೂ ರೈತರನ್ನು ಆತ್ಮಹತ್ಯೆಯ ದವಡೆಯಿಂದ ಪಾರು ಮಾಡಲು ಆಗುತ್ತಿಲ್ಲ ಎನ್ನುವುದು ದುಃಖದ ಸಂಗತಿ. ಮಳೆಯಾಶ್ರಿತ ಜಮೀನಿನನಲ್ಲಿ ತೊಗರಿ, ಹೆಸರು, ಉದ್ದು, ಜೋಳ, ಹತ್ತಿ, ಕಡಲೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಿತ್ತನೆ ಬೀಜ, ರಸಗೊಬ್ಬರ, ಉಳಿಮೆ, ಕೂಲಿಗಾಗಿ ಸಾಲ ಮಾಡಿ ತಂದAತಹ ಹಣವನ್ನು ಖರ್ಚು  ಮಾಡಿ, ದಿನ ಕಳೆದಂತೆ ಅದರ ಬಡ್ಡಿಯೂ ಹೆಚ್ಚಾಗುತ್ತದೆ. ನಿರೀಕ್ಷಿತ ಮಟ್ಟದಲ್ಲಿ ಫಸಲು ಬಾರದೆ, ಬೆಲೆಯೂ ಸಿಗದೆ ಹತಾಶೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದ ಖೇದನೀಯ.   ಸಮಸ್ಯೆಗಳಿಲ್ಲದ ಮನುಕುಲವನ್ನು ಊಹಿಸುವುದು ಅಸಾಧ್ಯ. ಪ್ರಾಣಿ, ಪಕ್ಷಿ ಸಂಕುಲವೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತವೆ. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಇತ್ತೀಚಿನ  ದಿನಗಳಲ್ಲಿ ರೈತರು  ಆತ್ಮಹತ್ಯೆಗೆ ಶರಣಾಗುತ್ತಿರುವುದು ವಿಷಾದನೀಯ ಎಂದರು.

ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾದ ಬೆಳೆ ಹಾನಿಯಿಂದಾಗಿ ಕೃಷಿ ಬದುಕಿನಲ್ಲಿ ಭರವಸೆ ಕಳೆದಕೊಳ್ಳುತ್ತಿರುವುದು ಗಭೀರವಾದ ವಿಷಯ ಇಂತಹ ಸಂದರ್ಭದಲ್ಲಿ ಸರಕಾರ  ರೈತರಿಗೆ  ಶೀಘ್ರ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.  ಅಧಿಕಾರಿಗಳು ಸಹ ಕೃಷಿ ಹಾಗೂ ತೋಟಗಾರಿಕೆ ಕಾರ್ಯಕ್ರಮದಲ್ಲಿ  ರೈತರು ಆತ್ಮಹತ್ಯೆ ದಾರಿ ತುಳಿಯದಂತೆ  ಆತ್ಮಹತ್ಯೆಗೆ ಕಾರಣಗಳು ಮತ್ತು ತಡೆಯುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಿ ಕೃಷಿ ಹಾಗೂ ತೋಟಗಾರಿಕೆ ಬೆಳೆಯಲ್ಲಿ ಮಿಶ್ರ ಬೇಸಾಯ ಮಾಹಿತಿ ನೀಡುವ ಮೂಲಕ ಕೃಷಿಯಲ್ಲಿ ಯಶಸ್ಸು ಕಂಡು ರೈತರನ್ನು ಲಾಭದಾಯಕವಾಗಿ ಮಾಡುವುದು ಅಧಿಕಾರಿಗಳ ಕರ್ತವ್ಯ ಈ ನಿಟ್ಟಿನಲ್ಲಿ ಅಧಿಕಾರಿಗಳು  ಶ್ರಮಿಸಬೇಕು ಎಂದರು.


ಬೀದರ್ ಕೃಷಿ ಇಲಾಖೆ  ಉಪ ಕೃಷಿ  ನಿರ್ದೇಶಕರಾದ ಎಂಎಕೆ ಅನ್ಸಾರಿ  ಮಾತನಾಡಿ, ಕೃಷಿ ಸಂಬAಧಿತ ಸಮಸ್ಯೆಗಳು ಎದುರಾದರೆ ರೈತರು ಆತಂಕಪಡಬಾರದು ತಕ್ಷಣ ಸಮೀಪದ   ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು ಕೃಷಿ ಕಟುವಟಿಕೆ ಕುರಿತು ಮಾಹಿತಿ ಪಡೆದುಕೊಳ್ಳಬೇಕು, ಹವಮಾನ ಬದಲಾವಣೆ, ಮಣ್ಣಿನ ಸವಕಳಿ, ನೀರಿನ ಕೊರತೆ, ಕೀಟಗಳು ರೋಗಗಳು, ಮಾರುಕಟ್ಟೆ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಮುಕ್ತವಾಗಿ ಹಂಚಿಕೊAಡು ಪರಿಹಾರ ಕಂಡುಕೊಳ್ಳಬೇಕು  ಮತ್ತು ಸರಕಾರದಿಂದ ದೊರೆಯುವ ಸೌಲಭ್ಯವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಕೃಷಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ರೈತರು ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮವಾಗಿ ಕೃಷಿ ಮಾಡಬೇಕು ಮತ್ತು ಬಿತ್ತನೆ ನಂತರ ಪ್ರಧಾನ  ಮಂತ್ರಿ ಫಸಲ ಭೀಮಾ ಯೋಜನೆ ಬೆಳೆ ವಿಮೆ  ಅಳವಡಿಸಿಕೊಳ್ಳಬೇಕು ಎಂದರು.


ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಸತೋಷ್ ಪಾಟೀಲ್, ಸತೀಶ ಶೆಟಕಾರ, ಮುಖಂಡರಾದ ಹಣಮಂತರಾವ ಮೈಲಾರೆ, ಸಂಜುಕುಮಾರ ರೆಡ್ಡಿ, ಸಂತೋಶ ರೆಡ್ಡಿ, ಘಾಳೆಪ್ಪ ಚಟ್ಟನಳ್ಳಿ,   ಶಿವಕುಮಾರ  ಕಪಲಾಪುರ, ರವಿಕುಮಾರ ಬಾಲೆಬಾಯಿ,  ರಾಜು ಮಂಗಲಗಿ, ಸಿದ್ದು ಪಾಟೀಲ,  ಗುಂಡಪ್ಪ ಬುಧೇರಾ, ಬಜರಂಗ ಖಾಶೆಂಪುರ, ದಯಾನಂದ,  ಸಚೀನ್ ಕೋಣಿ, ಅಮರ ಚಾಂಬಳೆ, ದತ್ತು ಕಾಡವಾದ,  ಶಿವಕುಮಾರ ನಾಗಲಗಿದ್ದಿ, ಕಿರಣ್ ತಾದಲಾಪುರ, ಶಿವಕುಮಾರ ಸುಲ್ತಾನಪರ, ರಾಜಕುಮಾರ ಘೋಡಂಪಳ್ಳಿ, ವಿಜಯಕುಮಾರ ಚಿಟ್ಟಾ, ಕಮಲ ರೆಡ್ಡಿ,   ಸಂಗಮೇಶ ಹಳ್ಳಿ, ದೀಲೀಪ್ ಗುಮ್ಮಾ, ಸೋಮು ಚುಳ್ಕೆ, ಕೃಷ್ಣ ,   ರಾಜಕುಮಾರ  ಮರ್ಜಾಪುರ, ಧನರಾಜ ಖೇಮಶೆಟ್ಟಿ, ಚನ್ನಬಸವ,  ರಮೇಶ ಮರ್ಜಾಪುರ,  ವಿರೇಶ,  ಬಾಬುರಾವ ತಾಂಡಾ ಮತ್ತಿತರರು ಉಪಸ್ಥಿತರಿದ್ದರು.


ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ ಸಹಾಯಕ ನಾಗೇಶ ಸಿದ್ಧಾ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ