Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ

ದಾವಣಗೆರೆ ಜ.30  ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಗುರುವಾರ (ಜ.30) ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಿರುಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಸಲಹೆ ಮತ್ತು ಸೂಚನೆಗಳ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಮೈಕ್ರೋ ಫೈನಾನ್ಸ್ ಕಂಪನಿಗಳು ನ್ಯಾಯಬದ್ಧವಾಗಿ ವ್ಯವಹರಿಸಲಿ, ಆದರೆ ಕಿರುಕುಳ ಮರುಕಳಿಸಿದರೆ ಸ್ವಯಂ ಹಿತಾಸಕ್ತಿಯಿಂದ ಎಫ್‌ಐಆರ್ ದಾಖಲಿಸುವಂತೆ ತಿಳಿಸಿದರು.
ಸಾಲವನ್ನು ನೀಡುವಾಗ ಸಾಲ ಪಡೆಯುವ ವ್ಯಕ್ತಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ಪರಿಗಣಿಸಬೇಕು. ಮಾಸಿಕ ಒಟ್ಟು ಆದಾಯದ ಶೇ 50 ರಷ್ಟು ಮೊತ್ತವನ್ನು ಮಾತ್ರ ಸಾಲ ಮರುಪಾವತಿ ಸಾಮರ್ಥ್ಯ ಎಂದು ಪರಿಗಣಿಸಬೇಕು. ವ್ಯಕ್ತಿಯು ಬೇರೆಯ ಮೂಲಗಳಿಂದ ಈಗಾಗಲೇ ಪಡೆದಿರುವ ಸಾಲದ ಮರುಪಾವತಿ ಕಂತಿನ ಮೊತ್ತವು. ಆದಾಯದ ಮೂಲಕ್ಕಿಂತ ಶೇ. 50 ರಷ್ಟು ಮೀರುತ್ತಿದ್ದರೆ, ಅಂತಹ ವ್ಯಕ್ತಿಗೆ ಸಾಲ ನೀಡುವಂತಿಲ್ಲ. ಒಂದೊಮ್ಮೆ ನೀಡದರೆ, ಅದು ಮೈಕ್ರೋ ಪೈನಾನ್ಸ್ ಕಂಪನಿ ಕಡೆಯಿಂದ ಆದ ಲೋಪ ಎಂದು ಹೇಳಲಾಗುವುದು. ಜನರಿಗೆ ಅವರ ಅಗತ್ಯಕ್ಕಿಂತ ಹೆಚ್ಚಾಗಿ ಸಾಲವನ್ನು ನೀಡುತ್ತಿದ್ದಾರೆ. ಸಾಲ ಮರುಪಾವತಿಲು ನಿಮ್ಮ ಚೌಕಟ್ಟುನ್ನು ಮೀರಿ ಅವರಿಗೆ ತೊಂದರೆ ನೀಡುತ್ತಿದ್ದಿರಿ. ಇದರ ಬಗ್ಗೆ ಪ್ರಕರಣ ದಾಖಲು ಮಾಡಲಾಗುವುದು. ಗ್ರಾಮೀಣ ಭಾಗದ ಜನರಿಗೆ ಸಾಲದ ಅವಶ್ಯಕತೆ ತುಂಬಾ ಇರುವುದರಿಂದ ಆರ್.ಬಿ.ಐ ನಿಯಮಾನುಸಾರ ಸಾಲ ನೀಡಿ, ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಬೇಕು ಎಂದರು. ಸಾರ್ವಜನಿಕರಿಗೆ ನಿಮ್ಮ ಪೈನಾನ್ಸ್ ಕಂಪನಿಯ ಬಡ್ಡಿ ಎಷ್ಟು ಅಂತ ತಿಳಿಸಿ, ಮೈಕ್ರೋ ಫೈನಾನ್ಸ್ 2 ಲಕ್ಷ ರೂ ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ನೀಡುವ ಸಂಧರ್ಭದಲ್ಲಿ ಅರ್ಜಿ ಹಾಗೂ ಷರತ್ತುಗಳು ಕನ್ನಡದಲ್ಲಿರಬೇಕು.
ಸಾಲ ಮತ್ತು ಬಾಕಿ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದ ವ್ಯಕ್ತಿಯ ಕುಟುಂಬದ ಯಾವ ವ್ಯಕ್ತಿಗಳನ್ನು ಕೆವೈಸಿ ಕೇಳುವಂತಿಲ್ಲ. ಬಾಕಿ ಪಾವತಿ ಮಾಡಿ ಎಂದು ಒತ್ತಾಯಿಸುವಂತಿಲ್ಲ. ಅತ್ಯಂತ ಕಡಿಮೆ ಮೊತ್ತದ ಸಾಲವಾದರೂ ವಿಮೆ ಮಾಡಿಸಬೇಕು. ಸಾಲ ಪಡೆದ ವ್ಯಕ್ತಿಯು ಮೃತಪಟ್ಟಲ್ಲಿ ವಿಮೆಯ ಮೂಲಕ ಸಾಲದ ಮೊತ್ತವನ್ನು ಪಡೆಯಬೇಕು. ಬಡ್ಡಿ ದರ ಗರಿಷ್ಠ ಶೇ. 18 ರಷ್ಟು ಮಾತ್ರ, ಇದಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವಂತಿಲ್ಲ.
ವಸೂಲಿ ಸಿಬ್ಬಂದಿ ಬೆದರಿಕೆ ಹಾಕಬಾರದು, ಬೈಗುಳ-ಅವಾಚ್ಯ ಶಬ್ದಗಳ ಬಳಕೆ ಮಾಡಬಾರದು. ಸಾಲ ಪಡೆದವರಿಗೆ ಪದೇ ಪದೇ ಕರೆ ಮಾಡಬಾರದು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಕರೆ ಮಾಡಬೇಕು. ಸಾಲ ಪಡೆದ ವ್ಯಕ್ತಿಯ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಮತ್ತು ಸಹದ್ಯೋಗಿಗಳಿಗೆ ಕರೆ ಮಾಡುವಂತಿಲ್ಲ. ಸಾಲ ಪಡೆದವರ ಹೆಸರು ಮತ್ತು ವಿವರಗಳನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಸಾಲ ಪಡೆದ ಕುಟುಂಬದವರ ಮೇಲೆ ಹಲ್ಲೆ ನಡೆಸುವಂತಿಲ್ಲ. ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ. ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೃತ್ಯವನ್ನು ಎಸಗುವಂತಿಲ್ಲ. ಸಾಲ ಪಡೆದವರ ಆಸ್ತಿ-ಸ್ವತ್ತುಗಳಿಗೆ ಹಾನಿ ಮಾಡುವಂತಿಲ್ಲ. ಬಾಕಿ ಪಾವತಿ ಮಾಡದೇ ಇದ್ದಾಗ ಎದುರಾಗಬಹುದಾದ ಪರಿಸ್ಥಿತಿಯ ಬಗ್ಗೆ ಸುಳ್ಳು ಮಾಹಿತಿ ನೀಡಬಾರದು. ತಡವಾಗಿ ಕಂತು ಪಾವತಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಬಡ್ಡಿ ಹಾಕುವಂತಿಲ್ಲ. ಸಾಲ ವಸೂಲಿಗೆ ರೌಡಿಗಳನ್ನು ಬಿಟ್ಟು ದಬ್ಬಾಳಿಕೆ ಮಾಡುವಂತಿಲ್ಲ. ಆರ್.ಬಿ.ಐ ನಿಯಾಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು. ಫೆನಾನ್ಸ್ ಕಂಪನಿಯವರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ತೆಗೆದುಕೊಳ್ಳಬಾರದು. ಪಾನ್ ಬ್ರೋಕರ‍್ಸ್ ತಮ್ಮ ಅಂಗಡಿಗಳ ಮುಂದೆ ಸಿಸಿಟಿವಿ ಹಾಕಿಸಿ ನಿಮ್ಮಿಂದಲೂ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಗಳೂರು, ಮಾಯಕೊಂಡ, ಹೊನ್ನಾಳಿಯಿಂದ ಸಾಕಷ್ಟು ದೂರುಗಳು ಬಂದಿರುತ್ತವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿರುತ್ತದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತಾನಾಡಿ, ರಾಜ್ಯದೆಲ್ಲೆಡೆ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದೆ. ಸಾಕಷ್ಟು ಜನ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈತರು, ಕಾರ್ಮಿಕರು ಚಿಕ್ಕ ಅತಿ ಚಿಕ್ಕ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸಾಲ ತೆಗೆದುಕೊಂಡಿದ್ದಾರೆ. ಕಿರುಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ವಿತರಣೆ ಮತ್ತು ಮರಪಾವತಿಯಲ್ಲಿ ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು ಗೌರವದಿಂದ ನೋಡಿಕೊಳ್ಳುವುದು. ಕಂತು ಕಟ್ಟಲು ತಪ್ಪಿದ ಗ್ರಾಹಕರೊಂದಿಗೆ ವ್ಯವಹರಿಸಲು ಆರ್.ಬಿ.ಐ ನಿರ್ದೇಶಗಳನ್ನು ಪಾಲಿಸುವುದು, ಗ್ರಾಹಕ ಸ್ನೇಹಿ ಮತ್ತು ನ್ಯಾಯಸಮ್ಮತವಾಗಿರಬೇಕು. ನೀವು ಸೂಕ್ತವಲ್ಲದ ಸಮಯದಲ್ಲಿ ಗ್ರಾಹಕರನ್ನು ಸಂಪರ್ಕ ಮಾಡುವುದಾಗಲಿ ಅಥವಾ ಸಾಲ ವಸೂಲಾತಿ ಮಾಡಬಾರದು. ಅವರ ಮನೆಯಲ್ಲಿ ಮೃತ್ಯು ಸಂಭವಿಸಿದಾಗ, ಅನಾರೋಗ್ಯದ ಸಂದರ್ಭದಲ್ಲಿ ಸಾಲ ಮಸೂಲಾತಿ ಮಾಡಬಾರದು. ಪ್ರತಿಯೊಂದು ಕಿರುಹಣಕಾಸು ಸಂಸ್ಥೆಯೂ ಸಾಲಗಾರರೊಂದಿಗೆ ಸಂವಹನ ಮಾರ್ಗದರ್ಶನ ನೀಡಬೇಕೆಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ಆಚಾರ್ಯ, ಡಿವೈಎಸ್‌ಪಿ ಬಸವರಾಜ, ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ ಉಪಸ್ಥಿತರಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ