ಮಸ್ಕಿ : ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ "ನಮ್ಮ ನಡೆ ಮತಗಟ್ಟೆಯ ಕಡೆ" ಕಾರ್ಯಕ್ರಮ ನಡೆಸಲಾಯಿತು. ಮಸ್ಕಿ ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ, ಗ್ರಾಮ ಪಂಚಾಯತಿ ಗೌಡನಬಾವಿ ವತಿಯಿಂದ ಗೌಡನಬಾವಿ ಗ್ರಾಮ ಪಂಚಾಯತ್ ಆವರಣದಲ್ಲಿ "ನಮ್ಮ ನಡೆ ಮತಗಟ್ಟೆಯ ಕಡೆ" ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತ ಗೀತಾ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ವಿನೂತನವಾಗಿ ಕಲಾ ತಂಡಗಳಿಂದ ವೇಷ ಭೂಷಣಗಳಿಂದ ಜಾಗೃತಿ ಮೂಡಿಸಲಾಯಿತು.ನಂತರ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಗೌಡನಬಾವಿ ಗ್ರಾಮಸ್ಥರು ಚುನಾವಣಾ ಸಿಬ್ಬಂದಿಗಳು,ಹಾಜರಿದ್ದರು.
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.