Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಗೌತಮ ಬುದ್ದ ಏಷಿಯಾದ ಬೆಳಕು: ಕೆ ರಾಘವೇಂದ್ರ ಹಿಟ್ನಾಳ



ಕೊಪ್ಪಳ ಮೇ 02: ಭಗವಾನ್ ಗೌತಮ ಬುದ್ದ ಅವರು ಇಡೀ ಏಷಿಯಾದ ಬೆಳಕು ಎಂದು ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅವರು ಗೌತಮ ಬುದ್ದ ವ್ಯಕ್ತಿತ್ವವನ್ನು ಬಣ್ಣಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಮೇ 01ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಭಗವಾನ್ ಬುದ್ಧ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಮ್ಮ ಮನೆಯಲ್ಲಿದ್ದ ಸಿರಿ ಸಂಪತ್ತನ್ನು ತ್ಯಜಿಸಿ ಸರಳ ಬದುಕಿಗೆ ಬಂದ ಬುದ್ದ ಅವರು ಈ ಜಗತ್ತು ಕಂಡ ಮಹಾಮಹೀಮರಾಗಿದ್ದಾರೆ. ಇಂತಹ ಮಹಾತ್ಮನ ಜಯಂತಿಯು ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದು ವಿಶೇಷ ಎಂದರು. 75 ವರ್ಷಗಳಾದರು ಸಹ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸುವ ಕೆಲಸ ಮಾಡಬೇಕಿದೆ. ಅಂದಾಗ ಸಮಾನತೆ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಬುದ್ದ ಪೂರ್ಣಿಮೆಯು ಸಂಭ್ರಮದ ದಿನವಾಗಿದೆ. ಬುದ್ದ, ಬಸವ, ಅಂಬೇಡ್ಕರ ಅವರು ಜಗತ್ತಿಗೆ ಬೆಳಕು ನೀಡಿದ ಮಹಾನ್ ನಾಯಕರು. ಯುದ್ದ ಬೇಡ ಬುದ್ದ ಬೇಕು ಎಂದು ಈಗ ಇಡೀ ಜಗತ್ತೇ ಹೇಳುತ್ತಿದೆ. ಸಾಮರಸ್ಯದ ಬದುಕು ಕಟ್ಟಿಕೊಳ್ಳಲಾಗದಂತಹ ಪರಿಸ್ಥಿತಿ ಇಂದು ಜಗತ್ತಿನಲ್ಲಿ ಮುಂದುವರೆದಿದೆ. ಅಹಿಂಸೆ ಬೇಡ, ನಾವು ಬದುಕಬೇಕು ಮತ್ತು ಇತರರಿಗೂ ಬದುಕಲು ಬಿಡಬೇಕು ಎಂಬ ಮಹತ್ವದ ಸಂದೇಶವನ್ನು ಗೌತಮ ಬುದ್ದ ನೀಡಿದ್ದಾರೆ ಎಂದು ತಿಳಿಸಿದರು.

ನಿವೃತ್ತ ಉಪ ಅಧೀಕ್ಷಕರಾದ ಗಿರೀಶ ಕಾಂಬ್ಳೆ ಅವರು ವಿಶೇಷ ಉಪನ್ಯಾಸ ನೀಡಿ, ಬುದ್ದ ಅವರು ಕೇವಲ ಭಾರತದ ಬೆಳಕಲ್ಲ; ಅವರು ಇಡೀ ಜಗತ್ತಿನ ಬೆಳಕು. ಬುದ್ದ ಅಂದರೆ ಅದು ಮಹಾಸಾಗರ ಇದ್ದಂತೆ. ನಮ್ಮ ಮುಂದಿನ ಏಳ್ಗೇಗೆ, ನಮ್ಮ ಮುಂದಿನ ಬಾಳ್ವೆಗೆ ಬುದ್ದ ಬೇಕು. ಬುದ್ದನನ್ನು ಅರ್ಥ ಮಾಡಿಕೊಂಡವರು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕುತ್ತಾರೆ. ಬುದ್ದ ಒಂದು ಜಾತಿ, ಭಾಷೆ, ಪ್ರದೇಶ, ದೇಶಕ್ಕೆ ಸೀಮೀತರಾಗಿಲ್ಲ. ಅವರ ವಿಚಾರ ವಿಶ್ವವ್ಯಾಪಿ ಎಂದರು.

ಬುದ್ದನ ಆಶಯದಂತೆ ಡಾ.ಅಂಬೇಡ್ಕರ್ ಅವರು ಸಂವಿಧಾನ ಬರೆದರು ಎಂದು ತಿಳಿಸಿದರು. ರೋಗಿಯನ್ನು, ಸತ್ತವನನ್ನು ನೋಡಿದ ಗೌತಮ ಬುದ್ದ ಆಸ್ತಿ ಕೇಳಲಿಲ್ಲ; ಸಂಪತ್ತು ಕೇಳಲಿಲ್ಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ ಎಂದು ತಿಳಿಸಿದವರು ಬುದ್ದ. ಬುದ್ದ ಎಂದರೆ ಶಾಂತಿಯ ದ್ಯೋತಕ. ಆದರೆ ಬುದ್ದನ ವಿಚಾರಗಳು ಬೆಳೆಯಲು ಕೆಲವರು ಬಿಡುತ್ತಿಲ್ಲ ಎಂದರು.

ಸಮಾರಂಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ, ಪ್ರಸನ್ನ ವೀರಣ್ಣ ಗಡಾದ್, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಮುಖಂಡರಾದ ಕೃಷ್ಣ ಇಟ್ಟಂಗಿ, ಮುತ್ತುರಾಜ್ ಕುಷ್ಟಗಿ, ಸಿದ್ರಾಮ ಹೊಸಮನಿ, ನಾಗರಾಜ ಬೆಲ್ಲದ, ರಘು ಬೆಲ್ಲದ, ಜಗದೀಶ ಚಲವಾದಿ, ಹನುಮಂತಪ್ಪ ಬಂಗಾಳಿಗಿಡದ, ಮಹಾವೀರ ಅಳ್ಳಳ್ಳಿ, ಗವಿಸಿದ್ದಪ್ಪ ಬೆಲ್ಲದ ಹಾಗೂ ಇತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಸ್ವಾಗತಿಸಿದರು. ಬಿ ಎನ್ ಹೊರಪೇಟೆ ನಿರೂಪಿಸಿದರು. ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ