Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಆರೋಗ್ಯ ಮತ್ತು ಫಿಟ್ನೆಸ್

ಆರೋಗ್ಯಕ್ಕೆ ಯೋಗದಿಂದಾಗುವ ಅನುಕೂಲಗಳು

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು.
ರಕ್ತದ ಒತ್ತಡ, ತೂಕ ಕಡಿಮೆ ಮಾಡಿಕೊಳ್ಳಲು, ಒತ್ತಡವನ್ನು ಕಡಿಮೆ ಮಾಡುವುದು, ಕೊಲೆಸ್ಟ್ರಾಲ್ ಅನ್ನು ಹತೋಟಿಯಲ್ಲಿ ಇಡುವಲ್ಲಿ ಯೋಗ ಸಕಾರಾತ್ಮಕವಾದ ಪರಿಣಾಮವನ್ನು ನೀಡುವುದರಿಂದ ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುವ ಪ್ರಯೋಗ ಇದಾಗಿದೆ. ತೂಕ ಕಳೆದುಕೊಳ್ಳಲು ಮಾತ್ರವಲ್ಲ ಯೋಗವು ದೇಹವನ್ನು ಸಮತೂಕದಲ್ಲಿಟ್ಟು ದೃಢ ಮತ್ತು ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ. ಇದರೊಂದಿಗೆ ಯೋಗ ಮನಸ್ಸಿನ ಶಾಂತಿಯನ್ನು ಕಾಪಾಡಲು ಅತ್ಯುತ್ತಮ ಮಾರ್ಗ.

ಯೋಗದಿಂದಾಗುವ ಕೆಲವು ಉಪಯೋಗಗಳ ಪಟ್ಟಿ ಇಲ್ಲಿದೆ:

.ಗರ್ಭಾವಸ್ಥೆಯಲ್ಲಿ ಯೋಗ ನೀವು ಗರ್ಭಿಣಿಯಾಗಿದ್ದು ದೇಹರಚನೆ ಫಿಟ್ ಆಗಿರ ಬಯಸಿದರೆ ಯೋಗ ನಿಮಗೆ ಸಹಾಯ ಮಾಡಬಲ್ಲದು. ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರಿಂದ ದೇಹ ಹೆಚ್ಚು ಬಲಯುತವಾಗುವುದು. ಪ್ರತೀದಿನ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಜೊತೆಗೆ ಆಂತರಿಕವಾಗಿ ಒಳ್ಳೆಯ ರಕ್ತ ಸಂಚಲನವಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ, ಉಸಿರಾಟ ಮತ್ತು ನರಗಳ ನಿಯಂತ್ರಣವನ್ನು ಹತೋಟಿಯಲ್ಲಿಡುತ್ತದೆ. ಅಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ಕಂಡುಬರುವ ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣ ಕ್ರಿಯೆ, ಕಾಲು ಊದಿಕೊಳ್ಳುವುದನ್ನು ತಡೆಯುತ್ತದೆ. ಆದರೂ ತೊಡಕುಗಳನ್ನು ತಡೆಯಲು ಯೋಗ ಮಾಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಕೇಳಿ ಸಲಹೆ ಪಡೆಯುವುದು ಒಳಿತು.

ಮನಃಶಾಂತಿ ಯೋಗದಲ್ಲಿ ಬರುವ ಉಸಿರಾಟ ಮತ್ತಿತರ ಸಮತೋಲನ ಆಸನಗಳು ಮೆದುಳಿನ ಎರಡೂ ಕಡೆಗಳಲ್ಲೂ ಸಮತೋಲನವನ್ನು ಕಾಪಾಡುತ್ತದೆ . ಇದು ನಮಗೆ ನಾವು ದಿನನಿತ್ಯದ ಜಂಜಾಟದಲ್ಲಿ ಕಷ್ಟವಾಗುವ ನಮ್ಮ ಮೆದುಳಿನ ಎರಡು ಕಡೆಯ ಆಂತರಿಕ ಸಂವಹನವನ್ನು ಉಪಯೊಗಿಸುವಲ್ಲಿ ಸಹಾಯ ಮಾಡುತ್ತದೆ. ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮೆದುಳಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.

.ಆರೋಗ್ಯಕ್ಕೆ ಬಲ ಒಳ್ಳೆಯ ಆರೋಗ್ಯ ಎಂದರೆ ಕೇವಲ ರೋಗದಿಂದ ದೂರವಿರುವುದು ಮಾತ್ರವಲ್ಲ ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಯೋಗ ಮಾಡುವುದರಿಂದ ದೃಢವಾಗಿ ಇರಲು ಜೊತೆಗೆ ಹಲವಾರು ರೋಗಗಳಿಂದ ದೂರವಾಗಿ ಸಂತೋಷ ಉಲ್ಲಾಸದಿಂದ ಇರಲು ಸಹಾಯವಾಗುತ್ತದೆ.

ಒಳ್ಳೆಯ ಪ್ರಸರಣ (ಸಂಚಲನ ) ಉಸಿರಾಟದ ಮತ್ತು ಇತರ ಆಸನಗಳಿಂದ ದೇಹದ ರಕ್ತ ಸಂಚಲನವನ್ನು ಸರಾಗವಾಗಿಸುವಲ್ಲಿ ಯೋಗ ಸಹಕರಿಸುತ್ತದೆ. ಈ ಸರಾಗ ರಕ್ತಸಂಚಲನದಿಂದ ಆಮ್ಲಜನಕ ಮತ್ತು ಜೀವಸತ್ವಗಳು ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಸಂಚಲನವಾಗುವುದರಿಂದ ಆರೋಗ್ಯಯುತ ಅಂಗಗಳು ಮತ್ತು ಕಾಂತಿಯುತವಾದ ಚರ್ಮವನ್ನು ಪಡೆಯಬಹುದು.

ಸಮತಟ್ಟಾದ ಹೊಟ್ಟೆಗಾಗಿ ಯೋಗ ಯೋಗ ಹೊಟ್ಟೆಯನ್ನು ಫ್ಲಾಟ್ ಆಗಿಸುವಲ್ಲಿ ಹೇಗೆ ಸಹಕರಿಸುತ್ತದೆ ಎಂಬುದನ್ನು ತಿಳಿಯುವ ಮೊದಲು ಬೇರೆ ಯಾವುದೇ ವ್ಯಾಯಾಮವು ಹೊಟ್ಟೆಯನ್ನು ಫ್ಲಾಟ್ ಅಗಿಸುವಲ್ಲಿ ಯಶಸ್ವಿಯಾಗಲಾರದೆಂಬುದನ್ನು ತಿಳಿಯಲೇ ಬೇಕು. ನಿಮಗೆ ಯಾರಾದರೂ ಕೆಲಸ, ಲೋ ಟೆಂಪೋ, ಮತ್ತು ವ್ಯಾಯಾಮಗಳಿಂದ ಹೊಟ್ಟೆಯನ್ನು ಫ್ಲಾಟ್ ಮಾಡಬಹುದು ಎಂದಲ್ಲಿ ನೀವು ಬೇರೆ ನುರಿತ ಸಲಹೆಗಾರರನ್ನು ಭೇಟಿ ಮಾಡುವುದು ಒಳಿತು. ಯೋಗಾದ ಆಸನಗಳಾದ ನೌಕಾಸನ, ಉಷ್ಟ್ರಾಸನ, ಮತ್ತು ಕೆಲವೊಂದು ಆಸನಗಳನ್ನು ಪ್ರತಿದಿನ ಮಾಡಿದರೆ ಇದು ಹೊಟ್ಟೆಯನ್ನು ನಿಧಾನವಾಗಿ ಒಳಹೊಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಯೋಗಾಭ್ಯಾಸ ಮತ್ತು ಸರಿಯಾದ ಆಹಾರ ಕ್ರಮದಿಂದ ಹೊಟ್ಟೆಯನ್ನು ಒಳಹಾಕಿ ಫ್ಲಾಟ್ ಆಗಿರುವಂತೆ ನೋಡಿಕೊಳ್ಳಬಹುದು.

ಆರೋಗ್ಯಯುತವಾದ ಹೃದಯ ಸ್ವಲ್ಪ ಕಾಲ ಉಸಿರನ್ನು ಬಿಗಿ ಹಿಡಿದು ಮಾಡುವ ಮತ್ತು ಇನ್ನಿತರ ಆಸನಗಳು ಹೃದಯ ಮತ್ತು ಅಪದಮನಿಯ ಆರೋಗ್ಯವನ್ನು ಕಾಪಾಡುತ್ತವೆ. ಯೋಗ ರಕ್ತಸಂಚಲನ ವನ್ನು ಸರಾಗವಾಗಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯಂತಹ ಕ್ರಿಯೆಯಿಂದ ರಕ್ಷಿಸಿ ಹೃದಯವನ್ನು ಆರೋಗ್ಯಯುತವಾಗಿರಿಸಿತ್ತದೆ.

ನೋವುಗಳನ್ನು ತಡೆಯುತ್ತದೆ ಯೋಗ ಮಾಡುವುದರಿಂದ ಬಲಯುತವಾಗುವುದರ ಜೊತೆಗೆ ಇದು ಬೆನ್ನು ನೋವು ಮತ್ತು ಕೀಳು ನೋವುಗಳನ್ನು ತಡೆಯುತ್ತದೆ. ಕುಳಿತು ಕೆಲಸಮಾಡುವವರು ಮತ್ತು ಲಾಂಗ್ ಡ್ರೈವ್ ಮಾಡುವವರು ಪ್ರತಿದಿನ ಯೋಗ ಮಾಡಬೇಕು ಇದರಿಂದ ಬೆನ್ನು ಮೂಳೆಯ ಸಂಕೋಚನ ಮತ್ತು ಬೆನ್ನು ಬಿಗಿತವನ್ನು ಹೋಗಲಾಡಿಸಬಹುದು. ಇದು ತಪ್ಪು ಭಂಗಿಯಿಂದಾಗಿ ನಂತರದ ದಿನಗಳಲ್ಲಿ ಕಾಡುವ ಎಲ್ಲಾ ನೋವುಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

ಉತ್ತಮ ಉಸಿರಾಟ ಯೋಗದಲ್ಲಿ ಬರುವ ಧೀರ್ಘ ಉಸಿರಾಟ ಮತ್ತು ನಿಧಾನ ಉಸಿರಾಟದ ಆಸನಗಳಿಂದ ಶ್ವಾಸಕೋಶ ಮತ್ತು ಹೊಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು . ಇದು ದೈನಂದಿನ ಕಾರ್ಯನಿರ್ವಹಣೆ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಧೀರ್ಘ ಉಸಿರಾಟದ ಯೋಗವು ವಿಶ್ರಾಂತಿಯನ್ನು ನೀಡಿ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸಮತೋಲನವನ್ನು ಹೆಚ್ಚಿಸುತ್ತದೆ ದಿನನಿತ್ಯದ ಜಂಜಾಟದಲ್ಲಿ ಕುಳಿತುಕೊಳ್ಳುವ ಬೇರೆಬೇರೆ ಭಂಗಿಯಿಂದಾಗಿ ವಯಸ್ಸಾಗುತ್ತಿದ್ದಂತೆ ನಾವು ನಮ್ಮ ಸಮತೋಲನವನ್ನು ಕಳೆದುಕೊಳ್ಳುತ್ತೇವೆ.ಈ ಕಾರಣದಿಂದಾಗಿ ಬೆನ್ನು ನೋವು, ಮೂಳೆಯ ಒಡೆತ, ಸೆಳೆತ ಇವುಗಳೆಲ್ಲ ಕಾಣಿಸಿಕೊಳ್ಳುತ್ತವೆ. ಯೋಗ ಮಾಡುವುದರಿಂದ ಈ ನೋವನ್ನು ನಿವಾರಿಸಿ ಸಮತೋಲನವನ್ನು ಕಾಪಾಡಿಕೊಂಡು ಹಿಡಿತದಲ್ಲಿರಬಹುದು. ಯೋಗದ ಮೂಲಕ ನೀವು ನಿಮ್ಮ ಬಲವನ್ನು ಮತ್ತೆ ಪಡೆದುಕೊಳ್ಳಬಹುದು. ಇದು ನಿಮ್ಮ ಮೆದುಳನ್ನು ಚುರುಕಾಗಿಸುವುದಲ್ಲೂ ಕೂಡ ಸಹಕರಿಸುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿರಾಮವಿಲ್ಲದ ಕೆಲಸದ ನಂತರ ನೀವು ಯೋಗ ಮಾಡಿದರೆ ಒತ್ತಡ ಕಡಿಮೆಯಾಗುವುದನ್ನು ಕಾಣಬಹುದು. ಅಂದಮಾತ್ರಕ್ಕೆ ಯೋಗ ಒಂದೇ ಒತ್ತಡವನ್ನು ನಿವಾರಿಸಲು ಇರುವ ಮಾರ್ಗ ಎಂದಲ್ಲ. ಯಾವುದೇ ರೀತಿಯ ವ್ಯಾಯಾಮವನ್ನು ಮನಸ್ಸಿಟ್ಟು ಶೃದ್ಧೆಯಿಂದ ಸರಿಯಾಗಿ ಮಾಡಿದರೆ ಅದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ