Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ಸಮಗ್ರ ಕೃಷಿ ಆಸರೆ: ಜಿಲ್ಲಾ ಪಂಚಾಯತ್‌ ಸಿ.ಇ.ಒ. ಅಭಿಮತ

ಮಂಡ್ಯ: ಜಿ.ಪಂ. ಸಿ.ಇ.ಒ. ನಂದಿನಿ ಕೆ.ಆರ್.ರವರು ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿಯ ಚನ್ನಪ್ಪನದೊಡ್ಡಿ ಗ್ರಾಮದ ನೈಸರ್ಗಿಕ ಕೃಷಿಕರಾದ ಶ್ರೀ ಕೆಂಪೇಗೌಡ ಬಿನ್‌ ಬೋರಯ್ಯ ರವರ ಜಮೀನಿಗೆ ಭೇಟಿ ನೀಡಿ, ಅವರು ಅನುಸರಿಸುತ್ತಿರುವ ಕೃಷಿ ಪದ್ದತಿಯ ಬಗ್ಗೆ ಪರಿಶೀಲಿಸಿದರು.
ಹವಾಮಾನ ಬದಲಾವಣೆ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಕಠಿಣ ಸನ್ನಿವೇಶಗಳಲ್ಲಿ ಬೆಳೆಗಳನ್ನು ರಕ್ಷಿಸಿಕೊಳ್ಳಲು, ನಷ್ಟವನ್ನು ತಡೆಯಲು ಮತ್ತು ನಿರಂತರ ಸುಸ್ಥಿರ ಆದಾಯ ಪಡೆಯಲು 'ಹವಾಮಾನ ಸ್ಥಿತಿಸ್ಥಾಪಕತ್ವ' (Climate Resilience) ಕೃಷಿ ಪದ್ಧತಿಗಳನ್ನು ರೈತರ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಮಣ್ಣಿನ ಆರೋಗ್ಯ ಸುಧಾರಣೆ ಇಂದಿನ ಆದ್ಯತೆಯಾಗಬೇಕಿದೆ. ಜಿಲ್ಲೆಯಲ್ಲಿ ರೈತರು ಏಕಬೆಳೆ ಬೆಳೆಯುವುದರ ಬದಲಾಗಿ ಸಮಗ್ರ ಕೃಷಿ ಪದ್ಧತಿಗೆ, ನೈಸರ್ಗಿಕ ಕೃಷಿ ಅಥವಾ ಸಾವಯವ ಕೃಷಿ ಪದ್ಧತಿಗಳಿಗೆ ಹೆಚ್ಚಿನ ಮನ್ನಣೆ ನೀಡಿ, ಸುಸ್ಥಿರ ಆದಾಯಕ್ಕಾಗಿ ಕೃಷಿ ನಂತರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಒಳಗೊಂಡಂತೆ ವಿವಿಧ ಆದಾಯೋತ್ಪನ್ನ ಚಟುವಟಿಕೆಗಳಿಗೆ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಜಿಲ್ಲೆಯಲ್ಲಿ ಅನಾವೃಷ್ಠಿ ಪರಿಸ್ಥಿತಿಯಿದ್ದು, ಅಲ್ಪಾವಧಿ ಹಾಗೂ ಕಡಿಮೆ ನೀರಿನಿಂದ ನಿರೀಕ್ಷಿತ ಉತ್ಪಾದನೆ ಪಡೆಯಬಹುದಾದ ಪರ್ಯಾಯ ಬೆಳೆಗಳನ್ನು ಆಯ್ಕೆಮಾಡಿಕೊಳ್ಳಬೇಕಿದೆ. ಸಮರ್ಥ ನೀರಿನ ಬಳಕೆಗಾಗಿ ಹನಿ ಅಥವಾ ತುಂತುರು ನೀರಾವರಿ ಘಟಕ, ಸಂರಕ್ಷಣಾತ್ಮಕ ನೀರಾವರಿಗಾಗಿ ಕೃಷಿ ಹೊಂಡ ಬಳಕೆಯ ವಿಧಾನಗಳನ್ನು ಅನುಸರಿಸಬೇಕಿದೆ. ಒಂದೇ ಬೆಳೆ ಬದಲಾಗಿ ವಿವಿಧ ಬೆಳೆಗಳನ್ನು ಬೆಳೆದಾಗ ಹವಾಮಾನ ಬದಲಾವಣೆಗೆ ನಷ್ಟದ ಪ್ರಮಾಣ ಕಡಿಮೆಯಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆಂಪೇಗೌಡರವರು ಕಳೆದ 10 ವರ್ಷದಿಂದ ನೈಸರ್ಗಿಕ ಕೃಷಿ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿ, ಆರ್ಥಿಕವಾಗಿ ಸುಸ್ಥಿರತೆ ಸಾಧಿಸಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಇವರು 2 ½ ಎಕರೆ ಜಮೀನು ಹೊಂದಿದ್ದು ನೈಸರ್ಗಿಕ ಕೃಷಿ ಪದ್ದತಿಯಲ್ಲಿ ಭತ್ತ, ಕಬ್ಬು, ಸೊಪ್ಪು, ತರಕಾರಿ ಹಾಗೂ ಹಲವಾರು ಹಣ್ಣು ಬೆಳೆಗಳನ್ನು ಬೆಳೆದು ತಮ್ಮದೆ ಮಳಿಗೆಯಲ್ಲಿ ಹಾಗೂ ಪ್ರತಿ ಬುಧವಾರ ಹಾಗೂ ಭಾನುವಾರ ಮಂಡ್ಯ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಎದುರು ನಡೆಯುವ ಸಾವಯವ ಸಂತೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ, ನಿರಂತರ ಆದಾಯ ಗಳಿಸುತ್ತಿದ್ದಾರೆ ಇದು ಉಳಿದ ರೈತರಿಗೂ ಮಾದರಿಯಾಗಲಿ ಎಂದು ತಿಳಿಸಿದರು.
*12 ಅಡಿ ಅಂತರದ ಪಟದಲ್ಲಿ ಕಬ್ಬು ಬೆಳೆ:* ಕಳೆದ ಐದು ವರ್ಷಗಳಿಂದ 12 ಅಡಿ ಅಂತರದ ಪಟದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆದು, ಪ್ರತಿ ನಿತ್ಯ ಇವರು 40-50 ಕೆ.ಜಿ. ಕಬ್ಬು ಮಾತ್ರ ಕಟಾವು ಮಾಡಿ ಮಂಡ್ಯ ನಗರದಲ್ಲಿ ತಮ್ಮ ಖುಷಿ ಆರ್ಗ್ಯಾನಿಕ್ಸ್ ಮಳಿಗೆಯಲ್ಲಿ, ಕಬ್ಬಿನ ಜ್ಯೂಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಟನ್‌ ಕಬ್ಬಿನಿಂದ 700 ಲೀಟರ್‌ ಜ್ಯೂಸ್‌ ಸಿದ್ದಪಡಿಸಿ ರೂ. 50,000/- ವರೆಗೆ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ತಾವು ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಕೆ ಸಹ ಮಾಡಿ ಮಾರಾಟ ಮಾಡುತ್ತಿದ್ದಾರೆ.
*ಕಬ್ಬಿನಲ್ಲಿ ಅಂತರ ಬೆಳೆ:* 12 ಅಡಿ ಅಂತರದ ಪಟದಲ್ಲಿ ಲಭ್ಯವಿರುವ ಜಾಗದಲ್ಲಿ ವಿವಿಧ ಬ್ಯಾಚ್‌ಗಳಲ್ಲಿ ಮೆಂತ್ಯ, ಪಾಲಕ್‌, ಸಪ್ಸಿಗೆ, ಕೊತ್ತಂಬರಿ, ಕಿಲಕಿರೆ, ದಂಟು ಸೊಪ್ಪು ಹಾಗೂ ಬೆಂಡೆ ಬೆಳೆಗಳನ್ನು ಬೆಳೆಯುತ್ತಿರುವುದನ್ನು ಸಿ.ಇ.ಒ. ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ