Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನಾಚರಣೆ ಆಚರಣೆ

ರಾಯಚುರು : ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖೆ ಖಾಯಂ ಶುಶ್ರುಷಾಧಿಕಾರಿಗಳ ಸಂಘ (ರಿ) ಆರೋಗ್ಯ ಇಲಾಖೆ, ಸ್ಟೈಫೆಂಡರಿ ಹಾಗೂ ಏನ್. ಎಚ.ಎಮ್.ಶುಶ್ರುಷಾದಿಕಾರಿಗಳ ಸಂಯುಕ್ತಾಶ್ರಯದಲ್ಲಿ ದೀಪದಾರಣೆ ಫ್ಲೋರೆನ್ಸ ನೈಟಿಂಗೆಲ್ ಜನ್ಮ ದಿನೋತ್ಸವ ಹಾಗೂ ಅಂತಾರಾಷ್ಟ್ರೀಯ ಶುಶ್ರುಷಾಧಿಕಾರಿಗಳ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಣೆ ಮಾಡಲಾಯಿತು.

ದೀಪಾಧಾರಣೆ ಫ್ಲೋರೆನ್ಸ್ ನೈಟಿoಗೇಲ್ ಜನ್ಮದಿನೋತ್ಸವ ದಿನದಂದು ಹಮ್ಮಿಕೊಳ್ಳಲಾಗಿದ್ದ  ಈ ಕಾರ್ಯಕ್ರಮಕ್ಕೆ  ಗೌರವಾನ್ವಿತ ಮುಖ್ಯ ಉದ್ಘಾಟಕರಾಗಿ ಸನ್ಮಾನ್ಯ ಡಾllರಮೇಶ ಬಿ. ಎಚ್  ನಿರ್ದೇಶಕರು ರಿಮ್ಸ್ ಆಸ್ಪತ್ರೆ ರಾಯಚೂರು ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಈ ಕಾರ್ಯಕ್ರಮದ ಗೌರವಾನ್ವಿತ ಅಧ್ಯಕ್ಷತೆಯನ್ನು ಶ್ರೀ ಮತಿ ಸುನಂದಾ ಪದ್ಮಾಕರ.ಮೇಡಂ ಪ್ರಭಾರಿ ಶುಶ್ರುಷಕ ಅಧಿಕ್ಷಕರು  ರಿಮ್ಸ್ ಬೋಧಕ ಆಸ್ಪತ್ರೆ ವಹಿಸಿದ್ದರು.ಗೌರವ ಮುಖ್ಯ ಅತಿಥಿಗಳು ಶ್ರೀ ಗುರುಸಿದ್ಧಯ್ಯ ಹಿರೇಮಠ ಮುಖ್ಯ  ಆಡಳಿತಾಧಿಕಾರಿಗಳು ರಿಮ್ಸ್,ಅತಿಥಿಗಳಾಗಿ ಡಾ. ಬಸವರಾಜ ಎಂ ಪಾಟೀಲ ಪ್ರಾಂಶುಪಾಲರು ರಿಮ್ಸ್ ಮೆಡಿಕಲ್ ಕಾಲೇಜ್, ಆತಿಥಿಗಳಾಗಿ ಡಾ. ಭಾಸ್ಕರ್ ಕೆಂಪೇಗೌಡ ವೈದ್ಯಕೀಯ ಅಧೀಕ್ಷಕರು,ಡಾ.ವಿಜಯಶಂಕರ ಸರ್ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಡಾ.ಶಾಮಣ್ಣ ಮಾಚನೂರು ಸ್ಥಾನಿಕ ವೈದ್ಯಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು, ಡಾ.ಅಮರವರ್ಮ ಸರ್ ದಂತ ವಿಭಾಗದ ಮುಖ್ಯಸ್ಥರು,ಶ್ರೀ ಮಂಜುನಾಥ ಸಹಾಯಕ ಆಡಳಿತಾಧಿಕಾರಿ,ಶ್ರೀ ರಾಚೋಟಿ ವಾರದ ಪ್ರಾಂಶುಪಾಲರು ರಿಮ್ಸ್ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯ,ಶ್ರೀ ಮತಿ ಗಾಯಿತ್ರಿ ತಿವಾರಿ ಮೇಡಂ ಉಪಾಧ್ಯಕ್ಷರು ರಿಮ್ಸ್ ಶುಶ್ರೂಷಕರ ಸಂಘ,ಶ್ರೀ ಶ್ರೀನಿವಾಸ. ಎಂ .ಸರ್ ಉಪ ಪ್ರಾಂಶುಪಾಲರು ಹಾಗೂ ಜಂಟಿ ಕಾರ್ಯದರ್ಶಿಗಳು ಶುಶ್ರೂಷಾಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು  ಉಪಸ್ಥಿತರಿದ್ದರು.

ಈ ಕಾರ್ಯಮವನ್ನು ಪ್ರಾರ್ಥನೆ ಗೀತೆಯೊಂದಿಗೆ ಕು.ಭಾಗ್ಯ ಉಪ್ಪಾರ ಶುಶ್ರೂಷಕಿ ಆಧಿಕಾರಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು,ಸ್ವಾಗತ ಭಾಷಣವನ್ನು ಶ್ರೀ ಮತಿ ಅರ್ಚನಾ ಮೇಡಂ ಶುಶ್ರೂಷಕಿ ಅಧಿಕಾರಿ  ಸ್ವಾಗತಿಸಿದರು,ದೀಪಾಧಾರಣೆ ಕುರಿತು ಕವನ ವಾಚನ ಶ್ರೀ ಶಿವರಾಜ ರಾಯಪ್ಪ ಉಪನ್ಯಾಸಕರು ವಾಚನ ಮಾಡಿದರು.ಈ ವೇದಿಕೆಯ ಮೇಲಿರುವ ಅತಿಥಿ ಗಣ್ಯ ಮಹನೀಯರಿಂದ ಜ್ಯೋತಿ ಬೆಳಗಿಸಿದರು ಮತ್ತು ಧೀಪದಾರಣೆ ಫ್ಲೋರೆನ್ಸ್ ನೈಟಿಂಗೆಲ್ ಭಾವಚಿತ್ರಕ್ಕೆ ಪೂಜೆ ಮಾಲಾರ್ಪಣೆ ಮಾಡಿದರು.ಕೇಕ್ ಕತ್ತರಿಸುವ ಮೂಲಕ ಫ್ಲೋರ್ ನ್ಸ್ ನೈಟಿಂಗಲೇ ಜಯಂತೋತ್ಸವ ಆಚರಣೆ ಮಾಡಲಾಯಿತು.

ವೇದಿಕೆಯ ಮೇಲೆ ಇರುವ ಅತಿಥಿ ಮಹನೀಯರಿಂದ ಸಂದೇಶ ರವಾನಿಸಿದರು.2023-2024  ನೇ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಭೂತಪೂರ್ಣ ಸಾಧನೆ ಮಾಡಿದ ರಿಮ್ಸ್ ಶಶ್ರೂಷಾ ಮಹಾವಿದ್ಯಾಲಯ BSC nursing ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ರಿಮ್ಸ್ ಶುಶ್ರೂಷಕ ಸಂಘದಿಂದ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಶ್ರೀ ಮಲ್ಲಿಕಾರ್ಜುನ ಕೆ. ನಾಯಕ ಬೂದಿ ನಾಳ ಶುಶ್ರೂಷಕ ಅಧಿಕಾರಿ ರಿಮ್ಸ್ ಬೋಧಕ ಆಸ್ಪತ್ರೆ ಮತ್ತು ಶ್ರೀ ಲಕ್ಷ್ಮಣ ಲಾರ ಸರ್ ನಿರೂಪಣೆ ಮಾಡಿದರು.ಶ್ರೀ ಪ್ರಶಾಂತ  ಕಾಂಬ್ಳೆ ಶುಶ್ರುಷಕ ಮೇಲ್ವಿಚಾರಕರು ವಂದನಾರ್ಪಣೆ ಮಾಡಿದರು.ಈ ಕಾರ್ಯಕ್ರಮದಲ್ಲಿ ಶುಶ್ರೂಷಕ ಮೇಲ್ವಿಚಾರಕರು, ಶುಶ್ರೂಷಕ/ಕಿ ಅಧಿಕಾರಿಗಳು, ರಿಮ್ಸ್ ಶುಶ್ರೂಷಾ ಮಹಾವಿದ್ಯಾಲಯ ವಿಧ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ತಿತರಿದ್ದರು.  ರಿಮ್ಸ್ ಸಂಸ್ಥೆಯ  ಕಾರ್ಯಕ್ರಮದಲ್ಲಿ ಎಲ್ಲಾ ರಿಮ್ಸ್ ಶುಶ್ರುಷಕ ಸಂಘದ ಪದಾಧಿಕಾರಿಗಳು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

 

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ