Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಶ್ರೀ ವಾಸವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ

ಬಳ್ಳಾರಿ 01-11-2025- : ಕರ್ನಾಟ ರಾಜ್ಯೋತ್ಸವದ ಅಂಗವಾಗಿ ನಗರದ ಶ್ರೀ ವಾಸವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು.
ಕುಮಾರಿ ಹರಣಿ ರವರ ಹಚ್ಚೇವು ಕನ್ನಡದ ದೀಪ ಎಂಬ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು,

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಳ್ಳಾರಿಯ ಪುಸಿದ ಇಂಜಿನಿಯರ್, ಪ್ರೇರಣಾದಾಯಕ ಕೆ.ಬಿ. ಸಂಜೀವ ಪ್ರಸಾದ್ ಅವರು ರಾಷ್ಟ್ರಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು
ಕರ್ನಾಟಕದ ನವಯುವಕರು ಕನ್ನಡ ನಾಡು ನುಡಿಯ ಶಕ್ತಿ ,ನಾವು ಕನ್ನಡವನ್ನು ಕೇವಲ ಮಾನಾಡುವುದಿಲ್ಲ ಆದರೊಂದಿಗೆ ಬದುಕಬೇಕು. ನಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡದ ಅಸ್ತಿತ್ವ ಪ್ರತಿಫಲಿಸಲಿ. ಈ ನಾಡು ಶ್ರೀಮಂತ ಇತಿಹಾಸದ ಧಾರ-ವಿಜಯನಗರ ಸಾಮ್ರಾಜ್ಯದ ವೈಭವ, ಹೊಯ್ಸಳರ ಶಿಲ್ಪಕಲೆ,ಚಾಳುಕ್ಯರ ವಾಸ್ತುಶಿಲ್ಪ, ಹಂಪಿಯ ಕಲ್ಲುಗಗಳಲ್ಲಿ ಮಾತಾನಾಡುವ ಕಲೆ ಇವೆಲ್ಲ ಕನ್ನಡ ನಾಡಿನ ಅಮರವಾಗಿವೆ. ನಮ್ಮ ಕರ್ನಾಟಕ ನಾಡು ಕಾವ್ಯ ಕಲೆ ಮತ್ತು ಸಂಸ್ಕೃತಿಯ ಬೀಡು. ಇದು ನಮ್ಮ ಹೆಮ್ಮೆ ನಮ್ಮ ಅಸ್ತಿತ್ವದ ಸಂಕೇತ, ಕರ್ನಾಟಕದ ಯಕ್ಷಗಾನ,ದಸಾರ ಉತ್ಸವ,ಜನಪದ ಕಲೆ, ಸಂಗೀತ ವಾಸ್ತುಶಿಲ್ಪ -ಇವೆಲ್ಲಾವೂ ಕನ್ನಡದ ಸೊಬಗು ಮತ್ತು ಸಾಂಸ್ಕೃತಿಕ ವೈಭವದ ಜೀವಂತ ಸಾಕ್ಷಿಗಳು.ಈ ಪರಂಪರೆಯ ಪಾವಿತ್ರ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ.ನಾವೆಲ್ಲರೂ ಕನ್ನಡದ ಕೀರ್ತಿಯನ್ನು ಕಾಪಾಡಿ,ಅದರ ಗೌರವವನ್ನು ಹೆಚ್ಚಿಸುವ ಶಪಥ ಮಾಡೋಣ. ಕನ್ನಡ ನಾಡಿನ ಶಕ್ತಿ ನಿಮ್ಮಿಂದಲೇ ನಿಮ್ಮ ಶಕ್ತಿ ಕನ್ನಡ ನಾಡಿನಿಂದಲೇ ಬರುತ್ತದೆ.” ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣದಾಯಕ ಸಂದೇಶ ನೀಡಿದರು.
10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಾವಣ್ಯ, ತಮ್ಮ ಸ್ಫೂರ್ತಿದಾಯಕ ಭಾಷಣದಲ್ಲಿ "ಕರ್ನಾಟಕ ನಾಡು ಕೇವಲ ನಕ್ಷೆಯಲ್ಲಿರುವ ಒಂದು ಪ್ರದೇಶವಲ್ಲ ಅದು ನಮ್ಮ ಹೃದಯದ ನಾಡಿ ಕನ್ನಡ ನಮ್ಮ ಉಸಿರು,ಅದರ ಸೊಗಸು ನಮ್ಮ ನಗು ಅದರ ಶಕ್ತಿ ನಮ್ಮ ಪ್ರೇರಣೆ. ನಾವು ಎಲ್ಲೆಡೆ ಕನ್ನಡದ ಕೀರ್ತಿಯನ್ನು ಹರಡುವ ನೂತನ ಪೀಳಿಗೆಯಾಗೋಣ,''ಎಂದು ಹೆಳಿದರು,
ಆವರಣವು ಹಬ್ಬದ ಛಾಯೆ ಪಡೆದು ಕಂಗೊಳಿಸುತ್ತಿತ್ತು. ವಿದ್ಯಾರ್ಥಿಗಳು "ಜಯ ಕರ್ನಾಟಕ ಮಾತೆ!" ಎಂಬ ಘೋಷಣೆಯನ್ನು ಕೂಗುತ್ತಾ ಕರ್ನಾಟಕ ರಾಜೋತ್ಸವವನ್ನು ಸಂಭ್ರಮಿಸಿದರು.ಕಾರ್ಯಕ್ರಮದ ಯಶಸ್ಸಿಗೆ ಶಾಲೆಯ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರ ಅಮೂಲ್ಯವಾಗಿ ರಾಷ್ಟ್ರಗೀತೆ ಮತ್ತು ಕನ್ನಡ ನಾಡಿನ ಜಯ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಸಂಭ್ರಿಮಿಸಿದರು.

ಈ ಸಂಧರ್ಭದಲ್ಲಿ ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ ನ ಮಾಜಿ ಅಧ್ಯಕ್ಷ ರಾದ ಶ್ರೀ ಅಗಡಿ ಗವಿಸಿದ್ಧೇಶ್ವರ ಪ್ರಸಾದ್, ಕಾರ್ಯದರ್ಶಿಗಳಾದ ಶ್ರೀ ಪಿ.ಎನ್. ಸುರೇಶ್,ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವೀರೇಶ್ ಯು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ