Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಆದರ್ಶ ವ್ಯಕ್ತಿಗಳನ್ನು ಅನುಕರಿಸಿ ಅಭಿಮಾನಿಗಳಿಗೆ ಕಿವಿಮಾತು ನಟ ದರ್ಶನ್ ಪ್ರಕರಣದ ತನಿಖೆ ಪಾರದರ್ಶವಾಗಿ ನಡೆಯಲಿ: ಮರಿಸ್ವಾಮಿ ಬರಗೂರು.



ಗಂಗಾವತಿ: ರಾಜ್ಯದಲ್ಲಿ ಕೊಲೆ, ದೌರ್ಜನ್ಯ ಕಾನೂನು ಬಾಹೀರ ಚಟುವಟಿಕೆಗಳು ಮಿತಿ ಮೀರಿದ್ದು ಇವುಗಳಿಗೆ ಸರಕಾರ ಕಡಿವಾಣ ಹಾಕಬೇಕಿದ್ದು, ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರನ್ನು ರಕ್ಷಿಸಲು ಕೆಲ ರಾಜಕಾರಣಿಗಳು ಮುಂದಾಗುತ್ತಿರುವ ಮಾಹಿತಿ ಹರಿದಾಡುತ್ತಿದ್ದು ಪಾರದರ್ಶಕ ತನಿಖೆ ನಡೆಯಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಕೊಪ್ಪಳ ಜಿಲ್ಲಾಧ್ಯಕ್ಷ ಸಿ.ಕೆ. ಮರಿಸ್ವಾಮಿ ಅಗ್ರಹಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.ಪವಿತ್ರ ಗೌಡ ಎನ್ನುವವರಿಗೆ ಅಶ್ಲೀಲ ಮೆಸೇಜ್ ಹಾಕಿದ್ದಾರೆ ಎಂದು ರೇಣುಕಸ್ವಾಮಿಯನ್ನು ಕಿಡ್ನಾಪ್ ಮಾಡಿ ಪೇಟಿಗೇರೆ ಶೆಡ್ ವೊಂದರಲ್ಲಿ ಇಲ್ಲದ ಟಾರ್ಚರ್ ನೀಡಿ ಸಾರ್ವಜನಿಕರಿಗೆ ಹೇಸಿಗೆ ಹುಟ್ಟಿಸುವ ರೀತಿಯಲ್ಲಿ ಆತನನ್ನು ಹಿಂಸಿಸಿ ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ಕೃತ್ಯ, ಇದಕ್ಕೆ ಕ್ಷೆಮೆಯೇ ಇಲ್ಲ, ಕಡುಬಡತನದಲ್ಲಿರುವ ರೇಣುಕಾಸ್ವಾಮಿ ಕುಟುಂಬವನ್ನು ಕಾಪಾಡುವವರು ಯಾರು, ಆವರಿಗೆ ಆರ್ಥಿಕ ಶಕ್ತಿಯೂ ಇಲ್ಲ ಗರ್ಭೀಣಿ ಹೆಂಡತಿಯು ಹೇಗೆ ಮುಂದೆ ಬದುಕು ಕಟ್ಟಿಕೊಳ್ಳಬೇಕು, ತುಂಬು ಜೀವನ ನಡೆಸಬೇಕಾದ ಆ ಮಹಿಳೆಯ ಮಾಡಿದ ಪಾಪವಾದರೂ ಏನು ದರ್ಶನ್ ಅವರಿಗೆ ಇಷ್ಟು ಕಾನೂನು ಜ್ಞಾನ ಇಲ್ಲ ಎನ್ನುವುದು ಸೋಜಿಗದ ಸಂಗತಿ ಎಂದು ಅಕ್ರೋಶ ವ್ಯಕ್ತಪಡಿಸಿದರು.ರೇಣುಕಾಸ್ವಾಮಿ ಕುಟುಂಬಕ್ಕೆ ರಾಜ್ಯ ಸರಕಾರ ಸೂಕ್ತ ಆರ್ಥಿಕ ಭದ್ರತೆ ನೀಡಬೇಕು, ಉದ್ಯೋಗ ಒದಗಿಸಬೇಕು, ಸಾರ್ವಜನಕರೂ ಸಹ ಕುಟುಂಬಕ್ಕೆ ಕೈಲಾದ ಸಹಾಯ ಮಾಡಬೇಕು, ಇಂಥ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕಾನೂನು ಬಿಗಿಯಾಗಬೇಕು, ಅಧಿಕಾರ ಹಾಗು ಆರ್ಥಿಕ ಶಕ್ತಿ ಇದ್ದರೆ ಏನನ್ನದಾರು ಮುಚ್ಚಿಹಾಕಬಹುದು ಎಂದು ಭಾವಿಸಿರುವ ರಾಜ್ಯದ ಪ್ರಭಾವಿಗಳಿಗೆ ಇದು ತಕ್ಕ ಪಾಠವಾಗಬೇಕಿದೆ, ಓರ್ವ ಆರೋಪಿಯ ತಂದೆಯೂ ಸಹ ಈ ಕೃತ್ಯದ ಬಗೆಗೆ ಶಾಕ್ ಆಗಿ ಹೃದಯಘಾತ ಹೊಂದಿದ್ದಾನೆ. ದರ್ಶನ ಫ್ಯಾನ್ ಫಾಲೋಯಿಂಗ್ ಹೆಚ್ಚಿದ್ದು, ಆತನ ಒಳ್ಳೆಯ ಗುಣಗಳನ್ನು ಆದರಿಸಿ, ಆತನ ಕೆಟ್ಟ ನಡೆತೆಗಳನ್ನು ಖಂಡಿಸಿ ಆದರ್ಶ  ಬುದಕಿಗೆ ಸೋಷಿಯಲ್ ಮಿಡಿಯಾಗಳ ಮೂಲಕ ಜಾಗೃತಿ ಮೂಡಿಸಬೇಕು, ಒಂದು ವೇಳೆ ಆತನ ಗುಣ ಫಾಲೋ ಮಾಡಿದಲ್ಲಿ ಸಮಾಜ ಘಾತುಕ ಶಕ್ತಿಗಳು ಹೆಚ್ಚುವುದರಲ್ಲಿ ಸಂದೇಹವಿಲ್ಲ ಎಂದು ಮರಿಸ್ವಾಮಿ ಕಿವಿಮಾತು ಹೇಳಿದರು. ಇತ್ತೀಚಿಗೆ ಕೊಲೆ, ದೌರ್ಜನ್ಯ, ಗುಂಡಾಗಿರಿ, ಇಸ್ಪೀಟ್, ಜೂಜಾಟ ಹಾಗು ಗಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ನೇಹಾ, ಅಂಜಲಿ ಇತರೆ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದೆ, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಕಾನೂನು ಬಾಹೀರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಉಸ್ತುವಾರಿ ಸಚಿವರು, ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು  ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಹುಲ್ಲೇಶ್ ಬೋವಿ, ಟಿ. ವೆಂಕಟೇಶ, ಸೋಹೆಲ್ ಕನಕಗಿರಿ, ಗಂಗಾವತಿ ತಾಲೂಕು ಅಧ್ಯಕ್ಷ ಯಲ್ಲಪ್ಪ, ಗಂಗಾವತಿ ತಾಲೂಕು ಅಲ್ಪ ಸಂಖ್ಯಾತ ಅಧ್ಯಕ್ಷ ಅತ್ತು ಸಂಪಂಗಿ, ಕಾರಟಗಿ ತಾಲೂಕು ಅಧ್ಯಕ್ಷ ಮಂಜುನಾಥ ಗೋಮರ್ಷಿ, ಕನಕಗಿರಿ ತಾಲೂಕು ಅಧ್ಯಕ್ಷ ಹನುಮೇಶ. ಗಂಗಾವತಿ ತಾಲೂಕು ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಹಗೇದಾಳ, ಐಲಿ ಶಂಕರ, ವೆಂಕಟೇಶ ಮುಡುಮಕಲ, ಸುರೇಶ ಗಾಂಧಿನಗರ, ಗಣೇಶ, ಭುವನೇಶ ಗಾಂದಿನಗರ, ದುರುಗೇಶ, ಸರ್ಪರಾಜ,  ಆರೀಫ್, ರಾಘವೇಂದ್ರ, ಗಂಗಾವತಿ ನಗರ ಘಟಕದ ಅಧ್ಯಕ್ಷ ಸುಂಕಪ್ಪ ಬೋವಿ, ಕುಮಾರ್ ಸಂಗಾಪುರ ಹಾಗು  ರಾಘವೇಂದ್ರ ಮಲ್ಲಾಪುರ ಇತರರಿದ್ದರು.




Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ