Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಸುನೀತಾ ವಿಲಿಯಮ್ಸ್.. .. ಸುರಕ್ಷಿತವಾಗಿ ಬರಲಿ

ಭುವಿಗೆ ಸುನೀತಾ ವಿಲಿಯಮ್ಸ್, ಸುನೀತಾ ವಿಲಿಯಮ್ಸ್.. .. ಬಾಹ್ಯಾಕಾಶದ ಸಂಶೋಧನಾ ಕೇಂದದಲ್ಲಿ ಸಿಲುಕಿಕೊಂಡ ಕಾರಣ ವಿಶ್ವದ ಎಲ್ಲೆಡೆ ಜನ ಆತಂಕದಲ್ಲಿ ಮಿಡುಕುತ್ತಿದ್ದಾರೆ. ಗಗನಯಾತ್ರಿ ಭಾರತ ಸಂಜಾತೆ ಅಮೇರಿಕಾ ವಾಸಿ ಆದ ಸುನೀತಾ ವಿಲಿಯಮ್ಸ್ ವಿಶ್ವಕ್ಕೆ ಮೆಚ್ಚು,ಅದರಲ್ಲೂ ಭಾರತಕ್ಕೆಸುನೀತಾ ನಮ್ಮವರೆ ಎಂಬ ಭಾವನಾತ್ಮಕ ಸಂಬಂಧವಿದೆ. ತರಗತಿಗಳಲ್ಲಿ ಎಷ್ಟೋ ವಿದ್ಯಾರ್ಥಿಗಳಿಗೆ ಮಾದರಿಯಾಗ ಬಲ್ಲ ಸಾಧಕ ಮತ್ತು ಆದರ್ಶಮಹಿಳೆ ಎಂದು ಜಗದಗಲ ಸಾವಿರಾರು ಶಿಕ್ಷಕರು ಉದಾಹರಿಸುತ್ತಿದ್ದಾರೆ.ಅಂತಹ ಸುನೀತಾ ವಿಲಿಯಮ್ಸ್ಜೊ

ತೆಗೆಬುಚ್ವಿಲ್ಮೋರ್(ನಾಸಾ_ಗಗನಯಾತ್ರಿಗಳು)5ನೇ ಜೂನ್ 2024ರಲ್ಲಿಬೋಯಿಂಗ್ ತೊಂದರೆಗೊಳಗಾದ ಸ್ಟಾರ್ಲೈನರ್ ಕ್ಯಾಪ್ಸುಲ್ನಲ್ಲಿಅಂತರರಾಷ್ಟ್ರೀ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಇವರು 8 ದಿನಗಳ ಬೇಟಿಯ ನಂತರ ಹಿಂದಿರುಗಿ ಬರಬೇಕಿತ್ತು. ಆದರೆ ಅವರು ಬೋಯಿಂಗ್ನ ಹೊಸ ಸ್ಟಾರ್ಲೈನರ್ ಕ್ಯಾಪ್ಸುಲ್ನಲ್ಲಿ ಥ್ರಸ್ಟರ್
ವೈಫಲ್ಯಗಳು ಮತ್ತು ಹೀಲಿಯಮ್ ಸೋರಿಕೆ ಕಾರಣದಿಂದಾಗಿ
ಹಿಂದರುಗುವ ಪಯಣ ಮುಂದೂಡಲಾಗಿದೆ.
ಬೋಯಿಂಗ ಸ್ಟಾರ್ಲೈನರ್ : ಇದು ಮರುಬಳಕೆ ಮಾಡಬಹುದಾದ
ಬಾಹ್ಯಾಕಾಶ ನೌಕೆ (ಸ್ಪೇಸ್ಕ್ರಾಫ್ಟ್ ), ಅದು ಕ್ರಿವ್ ಮತ್ತು
ಕಾರ್ಗೊಗಳನ್ನು ( ಇಲ್ಲಿ ಕ್ರಿವ್ ಎಂದರೆ ಗಗನಯಾತ್ರಿಗಳ ಗುಂಪು,
ಮತ್ತು ಕಾರ್ಗೊ ಎಂದರೆ ಅವರ ಜೊತೆಗಿರುವ ವಸ್ತುಗಳು)
ಭೂಮಿಯಿಂದ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಅದೇ ರೀತಿ ಅಲ್ಲಿಂದ ಭೂಮಿಗೆ ಸಾಗಿಸಲು ಸಹಕರಿಸುತ್ತದೆ. ಇದರಲ್ಲಿ 7 ಜನ ಸಿಬ್ಬಂದಿಗೆ ಪಯಣಿಸಲು ಅವಕಾಶವಿದೆ, ಆದರೆ ನಾಸಾ 4 ಜನರಿಗೆ ಮಾತ್ರ ಪಯಣಿಸಲು ಅವಕಾಶ ಮಾಡಿಕೊಡುತ್ತದೆ, ಇದುಅಂತರಾಷ್ಟೀಬಹ್ಯಾಕಾಶದೊಂದಿಗೆ 7 ತಿಂಗಳ ಕಾಲ ಡಾಕ್ ರ್ಯಾಡಾರ್ ವ್ಯವಸ್ಥೆಯಮೂಲಕ ಬಾಹ್ಯಾಕಾಶ ಕೇಂದ್ರದೊಂದಿಗೆ ನೌಕೆ ಸಂಪರ್ಕಹೊಂದರುತ್ತದೆ ಎಂದು ಅರ್ಥ) ಆಗಿರುತ್ತದೆ.
ಹೀಲಿಯಂ ಸೋರಿಕೆ : ಜೂನ್ 5 ರಂದು ಟೇಕ್ಆಫ್ ಆಗಿದ್ದ ಬೋಯಿಂಗ್ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ 8 ದಿನಗಳ ನಂತರ ಹಿಂದಿರುಗಿ ಬರಲು ಯತ್ನಿಸಿತು ಆದರೆ ಸದರಿ ನೌಕೆಯು ಹೀಲಿಯಂ ಸೋರಿಕೆ ಮತ್ತು ಬಹು ಥ್ರಸ್ಟರ್ ವೈಫಲ್ಯಗಳ ಕಾರಣ ಆ ಇಬ್ಬರುಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಪುನಃ ಸೆಪ್ಟಂಬರ್ 6ರಂದು
ಇವರು ಸ್ಪೇಸ್ ಎಕ್ಸ್ ಕ್ರೂö್ಯ ಡ್ರಾö್ಯಗನ್ ನಲ್ಲಿ ಹಿಂದಿರುಗುತ್ತಾರೆ ಎಂದು ನಾಸಾ ಹೇಳಿತ್ತು, ಆದರೂ ಅದು ಸಾಧ್ಯವಾಗಲಿಲ್ಲ. ಹೀಲಿಯಂ ಸೋರಿಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತದೆ, ನೌಕೆಯಲ್ಲಿನ ಹೀಲಿಯಂ ಇಂಧನವನ್ನು ಥ್ರಸ್ಟರ್ಗಳಿಗೆ ತಳ್ಳಲು ಸಹಕರಿಸುತ್ತದೆ ಮಾತ್ರವಲ್ಲ ಭೂಮಿಯ ವಾತಾವರಣಕ್ಕೆ ಹಿಂದಿರುಗುವಲ್ಲಿ ಬಹು ಮುಖ್ಯಪಾತ್ರವಹಿಸುತ್ತದೆ. ಇದಲ್ಲದೆ ಹೀಲಿಯಂ ಎಂಬ ಅನಿಲ ನೌಕೆಯಲ್ಲಿ ಬೇರೆ ಬೇರೆ ಸೂಕ್ಷö್ಮ ಸೋರಿಕೆಗಳನ್ನು ಕಂಡುಹಿಡಿಯಲು ಸಹಕರಿಸುತ್ತದೆ. ಒಂದು ವೇಳೆ ಅತಿಯಾಗಿ ಹೀಲಿಯಂ ಸೋರಿಕೆಯಾದರೆ ಥ್ರಸ್ಟರ್ಗಳು ಸರಿಯಾಗಿ ಕೆಲಸ ನಿರ್ವಹಿಸಲಾರವು.ಹೀಲಿಯಂ ರಾಕೆಟ್ಗೆ
ಇಂದನವನ್ನು ಅವಿರತವಾಗಿ ಹರಿಯುವಂತೆ ಮಾಡುತ್ತದೆ. ಇಂಧನದ
ಟ್ಯಾಂಕಿನಲ್ಲಿ ಇಂಧನ ಖಾಲಿಯಾದಂತೆಲ್ಲಾ ಉಂಟಾಗುವ ನಿರ್ವಾತ
ಪ್ರದೇಶವನ್ನು ಹೀಲಿಯಂ ತುಂಬಿಕೊಂಡು ಒತ್ತಡ ಉಂಟುಮಾಡುವಲ್ಲಿ ಯಶಸ್ವಿಯಾಗುತ್ತದೆ. ಹೀಲಿಯಂ ಸೋರಿಕೆಯ ಹಿನ್ನೆಲೆಯಲ್ಲಿ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವುದು ವಿಳಂಬವಾಗುತ್ತಿದೆ.
ಸಂಶೋಧನೆ: ನಾಸಾ ಬಿಡುಗಡೆ ಮಾಡಿದ ವರದಿಯ ಪ್ರಕಾರ ಸುನೀತಾ ವಿಲಿಯಮ್ಸ್
ಭಾರವಿಲ್ಲದ (ಗುರುತ್ವಾಕರ್ಷಣೆ ಇಲ್ಲದ, ಬಾಹ್ಯಾಕಾಶದಲ್ಲಿ) ಪರಿಸರದಲ್ಲಿ ಸಸ್ಯಗಳಿಗೆ ಪರಿಣಾಮಕಾರಿಯಾಗಿ ನೀರುಣಿಸುವ ಮಾರ್ಗಗಳನ್ನು
ಕಂಡುಹಿಡಿಯುತ್ತಿದ್ದಾರೆ. ಅತೀ ಸ್ವಲ್ಪ ಗುರುತ್ವ
(ಮೈಕ್ರೋಗ್ರಾö್ಯವಿಟಿ ) ಇರುವ ಸ್ಥಳದಲ್ಲಿ ವಿವಿಧ ಗಾತ್ರದ
ಸಸ್ಯಗಳು ನೀರನ್ನು ಹೇಗೆ ಹೀರಿಕೊಳ್ಳುತ್ತವೆ ಎಂಬುದನ್ನು
ಪರಿಕ್ಷಿಸುತ್ತಿದ್ದಾರೆ. ಅಲ್ಲಿ ಈ ಇಬ್ಬರು ಗಗನಯಾತ್ರಿಗಳು ತಮ್ಮ
ಹೆಚ್ಚಿನ ಸಮಯವನ್ನು ಮೈಕ್ರೋಗ್ರಾವಿಟಿಯ ತೂಕವಿಲ್ಲದ
ಪರಿಸರದಲ್ಲಿ ಮಣ್ಣಿಲ್ಲದೆ ಸಸ್ಯಗಳನ್ನು ನೀರುಣಿಸಿ ಬೆಳೆಸಬಹುದೇ?,
ಹೈಡ್ರೋಫೋನಿಕ್ಸ್ ಮತ್ತು ವಾಯುಪರಿಚಲನೆ ತಂತ್ರಗಳನ್ನು
ಬಳಸಿಕೊಂಡ ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ಆವಾಸಸ್ಥಾನಗಳಲ್ಲಿ
ವಿವಿಧ ಸಸ್ಯಗಳನ್ನು ಪರಿಣಾಮಕಾರಿಯಾಗಿ ಪೋಷಿಸುವುದು ಹೇಗೆ
ಎಂಬುದನ್ನು ತಿಳಿಯಲು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.ಇದಕ್ಕೆ
ದ್ರವ ಭೌತಶಾಸ್ತ್ರವನ್ನು ಬಳಸಿಕೊಂಡಿದ್ದಾರೆ. ಜೊತೆಗೆ ಬಾಹ್ಯಾಕಾಶದಲ್ಲಿ
ಮಾನವ ದೇಹವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು
ಮುಂದಿನ ಯೋಜನೆಗಳಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು,
ಧೀರ್ಘಾವಧಿಯ ಕಾಲ ತೂಕವಿಲ್ಲದ (ಜೀರೋಗ್ರಾವಿಟಿ) ಕಾರಣ
ಗಗನಯಾತ್ರಿಗಳ ಮೇಲೆ ಬೀರುವ ಪರಿಣಾಮವನ್ನು ವಿಜ್ಞಾನಿಗಳು
ಅಧ್ಯಯನ ಮಾಡುತ್ತಿದ್ದಾರೆ. ಈಗ ಅನಿವಾರ್ಯವಾಗಿ ಅಂತರ್ರಾಷ್ಟ್ರೀ
ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಹಿಂದಿರುಗಿ ಬರುವುದು
ತಡವಾದ ಕಾರಣ ಗಗನ ಯಾತ್ರಿಗಳ ಆರೋಗ್ಯದ ಬಗ್ಗೆ ಈ ಕೆಳಗಿನ
ಅಂಶಗಳನ್ನು ಸಂಶೋಧಿಸಲಾಗುತ್ತಿದೆ.
ಸುನಿತಾ ವಿಯಮ್ಸ್ ಮತ್ತು ಬುಚ್ವಿಲ್ಮೋರ್ರ ಆರೋಗ್ಯ:
ಮೈಕ್ರೋ ಗ್ರಾವಿಟಿ, ವಿಕಿರಣ ಸೂಸುವಿಕೆ, ನಿಗಧಿಪಡಿಸಿದ ಜೀವನ ವಿಧಾನ
ಮತ್ತು ಐಶೋಲೇಶನ್ ಒಳಗೊಂಡ ಅನನ್ಯ ಪರಿಸರದಲ್ಲಿ ಸಮಯ
ಕಳೆಯುವುದು ಎಂದರೆ ಕಷ್ಟದಾಯಕ, ಇಂತಹ ಪರಿಸ್ಥಿತಿಯು
ಗಗನಯಾತ್ರಿಗಳ ಆರೋಗ್ಯದ ಮೇಲೆ ಗಮನಾರ್ಹ
ಪರಿಣಾಮಬೀರುತ್ತದೆ. ಮಾನವನ ದೇಹದ ಪ್ರತಿಯೊಂದು
ವ್ಯವಸ್ಥೆಯು ಹಾನಿಗೊಳಗಾಗ ಬಹುದು. ಅಲ್ಪಕಾಲಿಕ ಬದಲಾವಣೆ
ದೇದಲ್ಲಿ ಉಂಟಾಗುವಿಕೆಯ ಜೊತೆಗೆ ದೀರ್ಘಾವಧಿಯ ಅನಾರೋಗ್ಯ
ಪರಿಣಾಮಗಳು ಏರ್ಪಡುತ್ತವೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ
ಜೀರೋ ಅಥವಾ ಅತೀ ಕಡಿಮೆ ಇರೋದರಿಂದ ನಿರಂತರವಾದ ಎಳೆತವಿಲ್ಲದೆ
ದೇಹದಲ್ಲಿನ ದ್ರವಗಳ ಮೇಲ್ರೆ ಅದರಲ್ಲೂ ರಕ್ತದ ಮೇಲೆ
ಪ್ರಭಾವ ಬೀರುತ್ತದೆ. ಇದರಿಂದಾಗಿ ರಕ್ತದ ಒತ್ತಡದಲ್ಲಿ
ಬದಲಾವಣೆಗಳುಂಟಾಗ ಬಹುದು.ಈ ಮೈಕ್ರೋಗ್ರಾವಿಟಿಯು ಸ್ನಾಯು
ಕ್ಷೀಣತೆ ಮತ್ತು ಮೂಳೆಯ ನಷ್ಟವನ್ನು ಉಂಟುಮಾಡುತ್ತದೆ.
ದ್ರವದ ವಿತರಣೆಯು ದೇಹದ ಎಲ್ಲಭಾಗಗಳಿಗೆ ಸರಿಯಾಗಿ ಹರಿದು
ಹೋಗದ ಕಾರಣ ಮೂತ್ರದ ವ್ಯವಸ್ಥೆಯ ಮೇಲೆ ಪರಿಣಾಮ
ಬೀರಬಹುದು ಎಂದು ತಜ್ಞರು ತಿಳಿಸುತ್ತಾರೆ. ಮಾತ್ರವಲ್ಲ ದೃಷ್ಟಿ
ದೋಷವೂ ಉಂಟಾಗಬಹುದು.
ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಸುನೀತಾ ವಿಲಿಯಮ್ಸ್ “ನನ್ನ ದೇಹವು ಸ್ವಲ್ಪ ಬದಲಾಗಿದೆ ಎಂದು ನಾನು ಭಾವಿಸುತ್ತೇನೆ ಆದರೆ ನಾನು ಅದೇ ತೂಕವನ್ನು ಹೊಂದಿದ್ದೇನೆ” ಎಂದಿದ್ದಾರೆ. ಆದರೂ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ರವರ ಆರೋಗ್ಯದ ಬಗ್ಗೆ ವಿಶ್ವದಾತ್ಯಂತ ಕಾಳಜಿ ಹೆಚ್ಚುತ್ತಿದೆ. ಹಿಂದಿರುಗುವಿಕೆ: ಸನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ರವರು ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ
ಕೇಂದ್ರದಿಂದ 2025ರ ಫೆಬ್ರವರಿ ತಿಂಗಳಲ್ಲಿ ಸ್ಪೇಸ್ ಎಕ್ಸ್ ಡ್ರಾಗನ್ ಸ್ಪೇಸ್ ಕ್ರಾಫ್ಟ್ ಮುಖಾಂತರ ಭೂಮಿಗೆ ಹಿಂದಿರುಗಲಿದ್ದಾರೆ ಎಂದು ನಾಸಾ ವರದಿ
ಮಾಡಿದೆ. ಆದರೂ ಕಾದು ನೋಡಬೇಕಿದೆ,ಏನೇ ಆಗಲಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ
ಅದಷ್ಟು ಬೇಗ ಬರಲಿ ಎಂಬುದೇ ಎಲ್ಲರ ಆಶಯ.


ಡಾ.ಯು.ಶ್ರೀನಿವಾಸ ಮೂರ್ತಿ
ಉಪನ್ಯಾಸಕರು, ವಿಜ್ಞಾನ ಸಾಹಿತ್ಯ ಲೇಖಕರು
ವಿಚಾರ ಕುಟೀರ
ರಾಮನಗರ 1ನೇ ಕ್ರಾಸ್, ಹವಂಬಾವಿ
ಬಳ್ಳಾರಿ_583101
ಫೋ:9731063950
7975983624

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ