Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಜಾನಪದ ಜಾತ್ರೆ ಆಚರಿಸಬೇಕು: ಪಿ.ರವಿ ಕುಮಾರ್





ಜಾನಪದ ಕಲೆ ನಶಿಸಿ ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಜಾನಪದ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಮಂಡ್ಯ ಶಾಸಕ ಪಿ. ರವಿಕುಮಾರ್ ಅವರು ಹೇಳಿದರು.



ಇಂದು (ಎ.3) ರಂದು ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ) ಹಮ್ಮಿಕೊಳ್ಳಲಾಗಿದ್ದ ಜಾನಪದ ಜಾತ್ರೆ - 2025 ಕಾರ್ಯಕ್ರಮವನ್ನು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಪ್ರಭಾವಕ್ಕೊಳಗಾಗಿ ಅನೇಕ ಜಾನಪದ ಆಟ, ಸಂಸ್ಕೃತಿ, ಕಲೆಗಳು ಅವನತಿ ಅಂಚಿನಲ್ಲಿ ನಿಂತಿರುವುದು ದುಃಖಕರ ವಿಷಯ ಎಂದು ವಿಷಾದ ವ್ಯಕ್ತಪಡಿಸಿದರು.



ಮುಖ್ಯಮಂತ್ರಿಗಳು ವಿಶೇಷ ಮುತುವರ್ಜಿ ವಹಿಸಿ ಜಾನಪದ ಸಂಸ್ಕೃತಿ ಕಲೆಯನ್ನು ಉಳಿಸುವ ಸಲುವಾಗಿ ಸದರಿ ವರ್ಷದಿಂದ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಜಾನಪದ ಜಾತ್ರೆ ಆಚರಿಸುವಂತೆ ಸೂಚನೆ ನೀಡಿದ್ದಾರೆ, ಆದರಲ್ಲೂ ನಮ್ಮ ಜಿಲ್ಲೆಯ ಮಹಿಳಾ ಕಾಲೇಜಿನಲ್ಲಿ ದಶಕಗಳ ಹಿಂದಿನಿಂದಲೂ ಜಾನಪದ ಜಾತ್ರೆ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.



ಮಂಡ್ಯ ವಿಶ್ವವಿದ್ಯಾನಿಲಯವನ್ನು ಉಳಿಸಲು ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಸಾಂಸ್ಕೃತಿಕ ಜಾತ್ರೆ ಆಯೋಜಿಸಿ ಸರ್ಕಾರ ಗಮನ ಸೆಳೆಯೋಣ, ಎಲ್ಲಾ ವಿದ್ಯಾರ್ಥಿಗಳ ಅದರಲ್ಲಿ ಭಾಗವಹಿಸಿ, ಮಂಡ್ಯ ವಿಶ್ವವಿದ್ಯಾನಿಲಯವನ್ನು ಉಳಿಸಿ ಅದಕ್ಕೆ ಮೆರುಗು ನೀಡಬೇಕೆಂದು ಕರೆ ನೀಡಿದರು.



ರಂಗಕರ್ಮಿಗಳು, ಜನಪದ ಗಾಯಕರು ಹಾಗೂ ರಂಗಾಯಣದ ಮಾಜಿ ನಿರ್ದೇಶಕರಾದ ಜನಾರ್ಧನ್ ಹೆಚ್ ಅವರು ಮಾತನಾಡಿ ಮಂಡ್ಯ ಜಿಲ್ಲೆ ಜಾನಪದದ ತವರೂರು, ಕಲಾವಿದರು ಒಂದಾಗಿ ಉತ್ಸವ, ಜಾತ್ರೆಗಳಲ್ಲಿ ಸಂಸ್ಕೃತಿಕವಾಗಿ ಸಮನ್ವಯ ಸಾಧಿಸಲು ಜಾನಪದ ಜಾತ್ರೆ ಸಹಾಯ ಮಾಡುತ್ತದೆ ಎಂದರು.



ತಾಯ್ತನದ ತತ್ವವನ್ನು ಎಲ್ಲರಲ್ಲೂ ಬಿತ್ತುವ ಕೆಲಸ ಜಾನಪದ ಮಾಡುತ್ತಿದೆ, ನಮ್ಮ ಗೂಡು ಬಿಟ್ಟು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ ಆಗ ಜಾನ್ಞ, ಬುದ್ಧಿಶಕ್ತಿ, ಆತ್ಮಬಲ ಹೆಚ್ಚಾಗುವುದು ಎಂದರು.



ಪ್ರಸ್ತುತ ಸನ್ನಿವೇಶದಲ್ಲಿ ಗುದ್ದಲಿ, ಪಿಕಾಸಿ, ಎತ್ತಿನ ಗಾಡಿಯನ್ನು ಹಳ್ಳಿಯಲ್ಲೇ ಹುಡುಕುವುದು ಕಷ್ಟವಾಗುವಂತಹ ಸಂದರ್ಭದಲ್ಲಿ ನಾವಿರುವುದು ವಿಪರ್ಯಾಸ ಎಂದು ಹೇಳಿದರು.



ಜಾನಪದ ಸಂಸ್ಕೃತಿ ಭಾರತೀಯರಿಗೆ ಪರಂಪರೆಯಿಂದಲ್ಲೇ ಬಂದಿದೆ, ಇಂದಿನ ದಿನಗಳಲ್ಲಿ ಜಾನಪದ ಸಂಸ್ಕೃತಿ ಬೆಳೆಸುವುದರ ಜೊತೆಗೆ ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ, ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಹೆಮ್ಮೆಯ ಜಾನಪದ ಸಂಸ್ಕೃತಿಯನ್ನು ಬಳುವಳಿಯಾಗಿ ನೀಡಬೇಕು ಎಂದು ತಿಳಿಸಿದರು.



ಸಭೆಯಲ್ಲಿ ಮೂಡ ಅಧ್ಯಕ್ಷ ನಹೀಮ್, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು.ಕೆ. ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ನಿಂಗರಾಜು ಹೆಚ್.ಎಸ್, ಸಾಂಸ್ಕೃತಿಕ ವೇದಿಕೆಯ ಖಜಾಂಚಿ ಡಾ. ಮಂಗಳಮ್ಮ ಕೆ.ಎಂ. ಮಹಿಳಾ ಸರ್ಕಾರಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ರವಿಕಿರಣ್ ಕೆ.ಪಿ ಮತ್ತು ಹೇಮಲತ ಎಸ್.ಪಿ, ಹಾಗೂ ಕೆ. ಎಸ್ ಆನಂದ್, ಎಂ.ಬಿ. ಪ್ರತಾಪ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.



*ಜಾನಪದ ಜಾತ್ರೆ - 2025 ರ ಮೆರವಣಿಗೆ*



ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ) ಆಯೋಜಿಸಲಾಗಿದ್ದ ಜಾನಪದ ಜಾತ್ರೆ - 2025 ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಜಾನಪದ ಕಲಾ ಪ್ರಕಾರಗಳನ್ನು ಕಾಲೇಜಿನ ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪ್ರದರ್ಶಿಸಿದರು, ಮಂಡ್ಯ ವಿಧಾನಸಭಾ ಶಾಸಕ ಪಿ. ರವಿಕುಮಾರ್ ಅವರು ಡೊಳ್ಳು ಭಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.



ಮಹಿಳಾ ಕಾಲೇಜಿನ ಆವರಣದಿಂದ ವನರಂಗದವರೆಗೆ ಎತ್ತಿನಗಾಡಿ ಮೇಲೆ ಶಾಸಕ ಪಿ. ರವಿಕುಮಾರ್ ಅವರು ಮೆರವಣಿಗೆಯಲ್ಲಿ ಸಾಗಿದರು.



ಮೆರವಣಿಗೆಯಲ್ಲಿ *ಪೂರ್ಣ ಕುಂಭ ಹೊತ್ತು ವಿದ್ಯಾರ್ಥಿನಿಯರು, ಡೊಳ್ಳು ಕುಣಿತ, ಕಂಸಾಳೆ, ಪಟ್ಟ ಕುಣಿತ, ವೀರಗಾಸೆ, ಪೂಜಾ ಕುಣಿತ, ಯಕ್ಷಗಾನ, ರಂಗ ಕುಣಿತ, ಬೊಂಬೆ ಕುಣಿತ* ಸೇರಿದಂತೆ ವಿವಿಧ ತಂಡಗಳು ಸಮೂಹ ಮೆರವಣಿಗೆಯಲ್ಲಿ ಸಾಗಿತು,

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ