Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ವಿಮಾ ಮೊತ್ತ ನೀಡಲು ನಿರಾಕರಿಸಿ ಸೇವಾನ್ಯೂನತೆ : ಪರಿಹಾರ ನೀಡಲು ಆದೇಶ


ಶಿವಮೊಗ್ಗ, ಆಗಸ್ಟ್ 03ಶ್ರೀಮತಿ ಆರ್. ರಾಜೇಶ್ವರಿ ಕೋಂ ಲೇಟ್ ಟಿ.ಎಸ್. ಶಿವಕುಮಾರ್, ಶ್ರೀ ದುರ್ಗಮ್ಮ ದೇವಸ್ಥಾನ, ಕಾಮಾಕ್ಷಿ ಬೀದಿ, ಶಿವಮೊಗ್ಗ ಇವರು ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್- ಬೆಂಗಳೂರು, ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್- ಮುಂಬೈ, ಇಂಡಸಿಂಡ್ ಬ್ಯಾಂಕ್ ಲಿ., ಶಿವಮೊಗ್ಗ ಮತ್ತು ಇಂಡಸಿಂಡ್ ಬ್ಯಾಂಕ್ ಲಿ., ಬೆಂಗಳೂರು ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ದೂರುದಾರರಾದ ಶ್ರೀಮತಿ ಆರ್. ರಾಜೇಶ್ವರಿಯವರ ಪತಿ ಖರೀದಿಸಿದ್ದ ಅಶೋಕ ಲೈಲ್ಯಾಂಡ್ ಬೋರ್‌ವೆಲ್ ಲಾರಿಯ ಮೇಲೆ ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್ ರವರಿಂದ ರೂ. 1,04,878/- ವಿಮಾ ಫ್ರಿಮಿಯಂ ಪಡೆದಿದ್ದು, 2024ರಲ್ಲಿ ಪಾಲಿಸಿದಾರರು ತೀರಿಕೊಂಡಿದ್ದರು. ಈ ಕುರಿತು ಇನ್ಷೂರನ್ಸ್ ಕಂಪನಿಗೆ ತಿಳಿಸಿ, ವಿಮಾ ಭರವಸೆಯ ಮೊತ್ತದಲ್ಲಿ ಸಾಲದ ಮೊತ್ತವನ್ನು ಭರಿಸಲು ಕೋರಿರುತ್ತಾರೆ. 1 ಮತ್ತು 2ನೇ ಎದುರುದಾರರಿಂದ ವಿಮಾ ಪಾಲಿಸಿಯ ಪ್ರೀಮಿಯಂ ಹಣವನ್ನು 3ನೇ ಎದುರುದಾರರಿಂದ 2023ರಂದು ಪಡೆದಿದ್ದು, ದೂರುದಾರರ ಪತಿ ಮರಣ ಹೊಂದಿದ ನಂತರ ದೂರುದಾರರ ಪತಿಯ ಸಾಲದ ಖಾತೆಗೆ ಜಮಾ ಮಾಡಿರುವುದರಿಂದ ಎಲ್ಲಾ ಎದುರುದಾರರು ಸೇವಾ ನ್ಯೂನ್ಯತೆಯನ್ನುಂಟು ಮಾಡಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.

ದೂರನ್ನು ದಾಖಲಿಸಿಕೊಂಡ ಆಯೋಗವು ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ದೂರುದಾರರು ಪಾಲಿಸಿಯನ್ನು ಪಡೆಯುವ ಪೂರ್ವದಲ್ಲಿ ಟಿ.ಎಂ.ಟಿ. ವೈದ್ಯಕೀಯ ತಪಾಸಣೆಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವುದಿಲ್ಲ ಹಾಗೂ ನಿಧನ ಹೊಂದಿದ ದಿನದಂದು ಪಾಲಿಸಿಯು ಚಾಲ್ತಿಯಲ್ಲಿರಲಿಲ್ಲ ಎಂಬ ಕಾರಣದೊಂದಿಗೆ ಪಾಲಿಸಿಯ ಭರವಸೆ ಮೊತ್ತ ಪಾವತಿಸಲು ಸಾಧ್ಯವಿಲ್ಲವೆಂದು ತಕರಾರು ಸಲ್ಲಿಸಿರುತ್ತಾರೆ.

ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, 1 ಮತ್ತು 2ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಪಾಲಿಸಿ ಪ್ರಸ್ಥಾವನೆಯಲ್ಲಿರುವ ಮೊತ್ತ ರೂ.36,38,583/- ಗಳನ್ನು ಈ ಆದೇಶವಾದ 45 ದಿನಗಳೊಳಗೆ ಪಾವತಿಸಲು ತಪ್ಪಿದ್ದಲ್ಲಿ ದಿ:21/04/2025 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.10.45 ರಂತೆ ಬಡ್ಡಿ ಸಹಿತ ಪಾವತಿಸುವುದು. 3 ಮತ್ತು 4ನೇ ಎದುರುದಾರರು ದೂರುದಾರರ ಪತಿಯ ಉಳಿಕೆ ಸಾಲದ ವಿವರಗಳನ್ನು 1 ಮತ್ತು 2ನೇ ಎದುರುದಾರರಿಗೆ ಒದಗಿಸಿ, ಪಾಲಿಸಿಯ ಮೊತ್ತವನ್ನು ದೂರುದಾರರ ಸಆಲದ ಖಾತೆಗೆ ಜಮೆ ಪಡೆಯಲು ಕ್ರಮವಹಿಸಲು ಹಾಗೂ 1 ರಿಂದ 4ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ರೂ. 40,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು, ತಪ್ಪಿದ್ದಲ್ಲಿ ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ಮೇಲ್ಕಂಡ ಮೊತ್ತಕ್ಕೆ ವಾರ್ಷಿಕ ಶೇ. 12 ರಂತೆ ಬಡ್ಡಿಯನ್ನು ಸೇರಿಸಿ ನೀಡತಕ್ಕದ್ದು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಜು.16 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ