Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೋಂದಣಿ ಕಾರ್ಯ ಸ್ಥಗಿತ,ಜನ ಕಂಗಾಲು

ವಿಜಯನಗರ ವಾಣಿ ಸುದ್ದಿ   ಕೊಟ್ಟೂರು : ಏಕಾಏಕಿ ನೋಂದಣಿ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ್ಲಿಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜರುಗಿದೆ. ಇಲ್ಲಿನ ನೋಂದಣಿ ಮತ್ತು ಮುದ್ರಾಂಕ ಕಚೇರಿಗೆ ಎಂದಿನಂತೆ ಸೋಮವಾರದಂದು ನಾಗರೀಕರು ತಮ್ಮ ಕೆಲಸಗಳಿಗಾಗಿ ಆಗಮಿಸಿದ್ದರು. ಆದರೆ 12 ಗಂಟೆಯ ನಂತರ ಏಕಾಏಕಿ ಮೂರು ದಿವಸ ಯಾವುದೇ ನೋಂದಣಿ ಕಾರ್ಯಗಳು ಮುಷ್ಕರದ ಹಿನ್ನೆಲೆ ಇರುವುದಿಲ್ಲ ಎಂದು ತಿಳಿಸಿದ ಕೂಡಲೇ ಸಾರ್ವಜನಿಕರು ಕಂಗಾಲಾಗಿ ಯಾವುದೇ ಸರ್ಕಾರಿ ಆದೇಶವಿಲ್ಲದೆ ನೀವು ಮುಷ್ಕರ ನಡೆಸಿದರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದಾಗ ಯಾವುದೇ ಲಿಖಿತ ಉತ್ತರ ನೀಡದೇ ಇರುವುದು ಕಂಡುಬಂದಿತು. ನಂತರ ರೈತ ಸಂಘದ ಜಯಪ್ರಕಾಶ್ ನಾಯಕ್ ವಿಜಯನಗರ ವಾಣಿ ಪತ್ರಿಕೆಗೆ ಸಂಪರ್ಕ ಮಾಡಿ ಜನರ ಸಮಸ್ಯೆಗಳಿಗೆ ಪಟ್ಟು ಹಿಡಿದು ನಿಂತಾಗ ಉಪನೋ oದನಾಧಿಕಾರಿ ವೈಶಾಲಿ ಯವರು ಪತ್ರಿಕೆಗೆ ಮಾಹಿತಿ ನೀಡಿ ಇತ್ತೀಚೆಗೆ ದಾಖಲಾತಿಗಳು ಫೋರ್ಜರಿ ಆಗುತ್ತಿರುವ ಹಿನ್ನೆಲೆ, ಹಾಗೂ ಇ. ಖಾತ ತಂತ್ರಾಂಶದಲ್ಲಿ ಬದಲಾವಣೆ ಮಾಡಬೇಕಾಗಿರುವುದರಿಂದ ಮತ್ತು ರಾಜ್ಯದ ಎಲ್ಲಾ ಉಪನೋ oದನಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಯಾವುದೇ ಆಸ್ತಿಗಳು ನೋಂದಣಿಯಾದರು ಅಧಿಕಾರಿಗಳು ನೇರ ಹೊಣೆ ಎಂಬ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಮುಷ್ಕರ ದ ನೋಟಿಸ್ ನೀಡಿದ್ದಾರೆ. ಎಂಬ ಉತ್ತರ ಸಿಕ್ಕಿತು. ಆದರೆ ಏಕಾಏಕಿ ಕಾರ್ಯ ಸ್ಥಗಿತಕ್ಕೆ ಜನರು ಪರದಾಡಬೇಕಾಯಿತು. ಬಂದ ಜನರು ಬಂದ ದಾರಿಗೆ ಸುಂಕವಿಲ್ಲ ಎಂದು ಹೊರಟರು

ಕೂಡ್ಲಿಗಿ ಉಪನೊಂದಣಾದಿಕಾರಿ ಕಾರ್ಯಾಲಯದಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವುದು ಸಂಬಂದ ಪಟ್ಟ ಅಧಿಕಾರಿಗಳಿಗೆ ಕೇಳಿದರೆ ೩ ದಿನ ಸ್ಟ್ರೈಕ್ ಇದೆ ಎಂದು ಹೇಳುತ್ತಿದ್ದಾರೆ ಬೆಳಗಿನಿಂದಲೇ ರಿಜಿಸ್ಟ್ರೇಷನ್ ಗೆ ಬಂದು ಜನ ಕಾಯುತ್ತಿದ್ದಾರೆ ಸರಿಯಾದ ಮಾಹಿತಿ ಕೊಡದೆ ಜನಗಳು ಅಲೆದಾಡುವ ಸ್ಥಿತಿಯಲ್ಲಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಟ್ರೈಕ್ ಮಾಡ್ಲಿಕ್ಕೆ ಕಾರಣ ತಿಳಿಸಿ ನೋಟಿಸ್ ಬೋರ್ಡ್ ಗೆ ಹಾಕಿ ಮುಂದಿನ ದಿನಾಂಕ ಪ್ರಕಟಿಸಬೇಕು.
KS ಜಯಪ್ರಕಾಶ ನಾಯ್ಕ,
ರೈತ ಸಂಘ

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ