Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಲೆ ಮಾಡಿ ರಾರಾವಿ ಹಗರಿಯಲ್ಲಿ ಹುತಿಟ್ಟಿದ್ದ ಪ್ರಕರಣದ ಇಬ್ಬರು ಆರೋಪಿಗಳ ಬಂದಿಸಿದ ಸಿರಗುಪ್ಪ ಪೋಲೀಸರು.

 

ಸಿರುಗುಪ್ಪ ಮಗಳನ್ನು ಪ್ರೀತಿ ಮಾಡಬಾರದೆಂದು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹಾ ಪ್ರೀತಿ ಮಾಡುವುದನ್ನು ಮುಂದುವರೆಸಿದ್ದು ಇದೇ ದ್ವೇಷವನ್ನಿಟ್ಟುಕೊಂಡು ಮಂಜುನಾಥ ಗೌಡನನ್ನು ಕೊಲೆ ಮಾಡಿರುವ ದುರ್ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದ್ದು, ಕೊಲೆ ಮಾಡಿದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹಗರಿ ನದಿಯಲ್ಲಿ ಮಂಜುನಾಥಗೌಡ ತಂದೆ ಶಂಕರಗೌಡ ವ:22 ವರ್ಷ, ರಾರಾವಿ ಗ್ರಾಮದವನು ಈತನ ಅರ್ಧ ದೇಹಭಾಗವನ್ನು ಹಗರಿ ನದಿಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಶವವು ಕಂಡು ಬಂದ ಮೇರೆಗೆ ಮೃತನ ಅಣ್ಣ ಹನುಮಂತ ಗೌಡ ತನ್ನ ತಮ್ಮನ ಸಾವಿನ ಬಗ್ಗೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದಾನೆ. ಪ್ರಕರಣದ ಬೆನ್ನು ಹತ್ತಿದ ಸಿರುಗುಪ್ಪ ಪೋಲಿಸರ ತಂಡ
ಡಿ.ಮಲ್ಲಯ್ಯ ನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸಮಯದಲ್ಲಿ ಆರೋಪಿತರು ಕೊಲೆಯಾದ ಮಂಜುನಾಥಗೌಡನು ತಮ್ಮ ಮಗಳನ್ನು ಪ್ರೀತಿ ಮಾಡಬಾರದೆಂದು ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹಾ ಪ್ರೀತಿ ಮಾಡುವುದನ್ನು ಮುಂದುವರೆಸಿದ್ದು ಇದೇ ದ್ವೇಷವನ್ನಿಟ್ಟುಕೊಂಡು 2024 ಡಿಸೆಂಬರ್ 28 ರಂದು ರಾತ್ರಿ ರಾರಾವಿಯ ಗ್ರಾಮದ ಹೊರವಲಯದ ಹುಣಸೆ ಮರದ ತೋಟಕ್ಕೆ ಮಂಜುನಾಥಗೌಡನನ್ನ ಕರೆಯಿಸಿ ಕುತ್ತಿಗೆಗೆ ಟವೆಲ್ ಬಿಗಿದು, ಮುಖಕ್ಕೆ ಸಲಿಕೆಯಿಂದ ಹೊಡೆದು ಸಾಯಿಸಿ, ಹಗರಿ ನದಿಯಲ್ಲಿ ಹೂತಿ ಹಾಕಿರುವುದಾಗಿ ತಿಳಿಸಿದ್ದಾರೆ ಇಬ್ಬರು ಆರೋಪಿತರನ್ನು ಕೊಲೆ ಪ್ರಕರಣದಲ್ಲಿ ಪತ್ತೆ ಹಚ್ಚಿದ್ದಾರೆ.
ಪ್ರಕರಣದ ತನಿಖೆಗೆ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿ ಡಾ:ಶೋಭಾರಾಣಿ ವಿ.ಜೆ ನೀಡಿದ ಮಾರ್ಗದರ್ಶನದ ಮೇರೆಗೆ ಸಿರುಗುಪ್ಪ ಉಪ-ವಿಭಾಗದ ಡಿ ಎ ಎಸ್ ಪಿ ವೆಂಕಟೇಶ ಇವರ
ನೇತೃತ್ವದಲ್ಲಿ ಸಿರುಗುಪ್ಪ ವೃತ್ತ ನಿರೀಕ್ಷಕರಾದ ಹನುಮಂತಪ್ಪ ಪಿ ಎಸ್ ಐ ಗಳಾದ ಪರಶುರಾಮ್ ಪಿಎಸ್‌ಐ ಸಿರುಗುಪ್ಪ, ಶಶಿಧರ ವೈ. ಹಚ್ಚೋಳ್ಳಿ, ಸಿಬ್ಬಂದಿರವರಾದ ಚಿನ್ನಪ್ಪ ಗುಡಿಕೇರಿ ಹೆಚ್, ಬಸವರಾಜ ಪಿಸಿ, ಬಾಲಚಂದ್ರ ರಾಥೋಡ್, ಈರಣ್ಣ ಪಿಸಿ, ವಿಷ್ಣುಮೋಹನ ಪಿಸಿ, ಮುದುಕಯ್ಯ ಶಿಕಾಲಿ , ಅಮರೇಶ ಪಿಸಿ,ಕುಪ್ಪಣ್ಣ ಪಿಸಿ, ಮಲ್ಲನಗೌಡ, ಗಾದಲಿಂಗಪ್ಪ ರವರನ್ನಳಗೊಂಡ ತಂಡಕಾರ್ಯಚರಣೆ ಮಾಡಿ ಪತ್ತೆ ಹಚ್ಚಿದ್ದಾರೆ.


ಆರೋಪಿಗಳ ಪತ್ತೆ ಹಚ್ಚಲು ಕಾರ್ಯ ನಿರ್ವಹಿಸಿದ್ದಕ್ಕೆ  ಎಸ್ಪಿ ಶೋಭಾರಾಣಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ