ಸಿರುಗುಪ್ಪ ತಾಲೂಕಿನ ರಾರಾವಿಯಲ್ಲಿ ಕಾರ್ಮಿಕ ದಿನಾಚರಣೆ ಅಚರಿಸಲಾಯಿತು
ಕಷ್ಟ ನುಂಗಿ ಖುಷಿ ಹಂಚುವರರು ಕಾರ್ಮಿಕರು:ಸಾಕೀರ್ ಬಾಕ್ಲಿ ಸಿರುಗುಪ್ಪ:ಹಗಲು ರಾತ್ರಿ ಎಂದು ನೋಡುವುದಿಲ್ಲ, ಬಿಸಿಲು ಮಳೆ ಗಾಳಿಗೆ ಜಗ್ಗುವುದಿಲ್ಲ,ಕಠಿಣ ಪರಿಶ್ರಮ ಇವರು ಸಾಕ್ಷಿ, ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು,ದೇಶ ಕಟ್ಟುವಲ್ಲಿ ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿಯಡಗಿದೆ ಎಂದು ರಾರಾವಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಕೀರ್ ಬಾಕ್ಲಿ ಹೇಳಿದರು.
ತಾಲೂಕಿನ ರಾರಾವಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಕೂಲಿಕಾರರು ಇದ್ದ ಕಾಮಗಾರಿ ಸ್ಥಳಕ್ಕೆ ಹೋಗಿ ಕಾರ್ಮಿಕರ ದಿನಾಚರಣೆ ಕೇಕ್ ಕತ್ತರಿಸುವ ಮೂಲಕ ಕಾರ್ಮಿಕರ ದಿನಾಚರಣೆ ಅರ್ಥಪೂರ್ಣ ಅಚರಿಸಲಾಯಿತ್ತು.
ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ನರೇಗಾ ಕೂಲಿ ಕಾರ್ಮಿಕ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು.ಕಾರ್ಮಿಕರ ದಿನಾಚರಣೆ ನರೇಗಾ ಕೂಲಿಕಾರರು ಪರಸ್ಪರ ಸಿಹಿ ತಿನ್ನುಸುವುದರ ಮೂಲಕ ಮತ್ತು ಪರಸ್ಪರ ಕೇಕ್ ಮುಖಕ್ಕೆ ಹಂಚುವುದರ ಮೂಲಕ ಶುಭಾಶಯ ಕೋರಿದರು.ಇದೇ ವೇಳೆ ಕಂಪ್ಯೂಟರ್ ಆಪರೇಟರ್ ಕೆ ಸೋಮಶೇಖರ್,ಪಂಪ್ ಆಪರೇಟರ್ ವೆಂಕಟೇಶ್,ಕಾಯಕ ಬಂಧು ಸರಸ್ವತಿ,ಹಾಗೂ ನೂರರು ಕೂಲಿ ಕಾರ್ಮಿಕರು ಇದ್ದರು..
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.