Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಬಳ್ಳಾರಿ: ಇಪಿಎಫ್‌ಓ ಪ್ರಾದೇಶಿಕ ಕಚೇರಿಯಿಂದ ಬಾಕಿ ವಸೂಲಾತಿಗಾಗಿ ‘ವಿಶೇಷ ಅಭಿಯಾನ’

ಬಳ್ಳಾರಿ,ಮಾ.12

ಬಳ್ಳಾರಿ ಇಪಿಎಫ್‌ಓ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರ ಭವಿಷ್ಯ ನಿಧಿಯ ಬಾಕಿ ಮೊತ್ತವನ್ನು ವಸೂಲಿ ಮಾಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ವತಿಯಿಂದ ಮಾರ್ಚ್ ಮಾಹೆಯಲ್ಲಿ ‘ವಿಶೇಷ ವಸೂಲಾತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿಯ ಆಯುಕ್ತ ಕೆ.ವಿ ಪ್ರವೀಣ್ ಅವರು ತಿಳಿಸಿದ್ದಾರೆ.

ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳ ಎಲ್ಲಾ ಸಂಸ್ಥೆಗಳು ಮತ್ತು ಉದ್ಯೋಗದಾತರು ಈ ಅಭಿಯಾನದ ವ್ಯಾಪ್ತಿಗೆ ಬರಲಿದ್ದು, ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳಿಗೆ ಬಳ್ಳಾರಿ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ನೇರವಾಗಿ ಭೇಟಿ ನೀಡಿ, ಪ್ರಸಕ್ತ ಸಾಲಿನ ಮತ್ತು ಹಳೆಯ ಬಾಕಿ ಮೊತ್ತವನ್ನು ವಸೂಲಿ ಮಾಡಲಿದ್ದಾರೆ.

ತಕ್ಷಣವೇ ವಸೂಲಿ ಮಾಡಬಹುದಾದ ಕೆಟಗರಿಯಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಒಳಪಡುವ ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ವಿವಿಧ ಸುಸ್ತಿದಾರರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಈ ಕೆಳಕಂಡAತಿದೆ.

*ಸುಸ್ತಿದಾರರ ಪಟ್ಟಿ:*

ಬಳ್ಳಾರಿಯ ಬಿಎಂಸಿಆರ್‌ಸಿ(ವಿಮ್ಸ್), ಗಂಗಾವತಿಯ ಚಿನ್ಮಯ ಶಿಕ್ಷಣ ಸಂಸ್ಥೆ, ಕುಷ್ಟಗಿಯ ಪುರಸಭೆ ಕಚೇರಿ, ಗ್ಯಾಮನ್ ಇಂಜಿನಿಯರ್ ಕಾಂಟ್ರಾಕ್ರ‍್ಸ್, ಸಂಡೂರಿನ ಸಾಯಿ ಸಾಗರ್ ಎಂಟರ್‌ಪ್ರೆöÊಸಸ್, ಕೊಪ್ಪಳದ ಜ್ಞಾನಬಂಧು ಹಿರಿಯ ಪ್ರಾಥಮಿಕ ಶಾಲೆ, ಗಂಗಾವತಿಯ ನಗರಸಭೆ, ತೋರಣಗಲ್ಲಿನ ಬನಶಂಕರ ರೆಡ್ಡಿ, ಸಬೀರಾ ಸೆಕ್ಯುರಿಟಿ ಸರ್ವೀಸಸ್, ತೋರಣಗಲ್ಲಿನ ವರ್ಷಿಣಿ ಲೈಫ್ ಟೆಕ್&ಅರ್ಥ್ ಮೂವರ್ಸ್.

ಹೊಸಪೇಟೆಯ ಕಮಲಾಪುರದ ಭಾರತೀಯ ಪುರಾತತ್ವ ಸರ್ವೇಯ ಹಿರಿಯ ಸಂರಕ್ಷಣಾ ಸಹಾಯಕ, ಬಳ್ಳಾರಿಯ ವಿಶ್ವೇಶ್ವರಯ್ಯ ಎಜುಕೇಶನ್ ಸೊಸೈಟಿ, ಹೊಸಪೇಟೆಯ ಕಮಲಾಪುರದ ಭಾರತೀಯ ಪುರಾತತ್ವ ಇಲಾಖೆಯ ತೋಟಗಾರಿಕೆ ಸಹಾಯಕ, ಬೆಳಗಲ್ -ವಿಲ್ ತುಮಟಿ ರಸ್ತೆಯ ಸಾಯಿ ಸಪ್ತಗಿರಿ ಸ್ಪಾಂಜ್ ಪ್ರೆöÊವೇಟ್ ಲಿಮಿಟೆಡ್, ತೋರಣಗಲ್ಲಿನ ಜಿಂದಾಲ್ ಸ್ಟೀಲ್ಸ್ ಲಿಮಿಟೆಡ್‌ನ ತಿರುಮಲ ಕನ್ಸ÷್ಟçಕ್ಷನ್ಸ್, ಮುನಿರಾಬಾದ್ ನ ಸುರಭಿ ಎಂಟರ್ ಪ್ರೆöÊಸಸ್, ತುಂಗಭದ್ರಾ ಪಲ್ಪ್ ಮತ್ತು ಬೋರ್ಡ್ ಮಿಲ್ಸ್ ಲಿಮಿಟೆಡ್, ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಬಾಲಾಜಿ ಎಂಟರ್ ಪ್ರೆöÊಸಸ್, ತೋರಣಗಲ್ಲಿನ ಕೆ.ಎಸ್ ಚಂದ್ರಶೇಖರ್ ಮತ್ತು ಚಿತ್ರದುರ್ಗದ ವೇದಾ ಸಿಮೆಂಟ್ಸ್.

ಈ ಮೇಲ್ಕಂಡ ಸಂಸ್ಥೆಗಳು ಬಾಕಿ ಇರುವ ಮೊತ್ತವನ್ನು ಕೂಡಲೇ ಪಾವತಿಸುವಂತೆ ಉದ್ಯೋಗದಾತರಿಗೆ ಬಳ್ಳಾರಿ ಇಪಿಎಫ್ ಕಚೇರಿಯು ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಗರದ ರಾಘವೇಂದ್ರ ಕಾಲೋನಿಯ 2ನೇ ಹಂತದ ಮುಖ್ಯ ರಸ್ತೆಯ ‘ಭವಿಷ್ಯ ನಿಧಿ ಭವನ’ದ ಜಾರಿ ಅಥವಾ ವಸೂಲಾತಿ ವಿಭಾಗ ಅಥವಾ [email protected] ಗೆ ಇಮೇಲ್ ಮೂಲಕ ಸಂಪರ್ಕಿಸಬಹುದು ಎಂದು ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿಯ ಆಯುಕ್ತ ಕೆ.ವಿ ಪ್ರವೀಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ