Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಜ್ಯ ಸುದ್ದಿ

ಗಮನ ಸೆಳೆದ ಈಜು ಸ್ಪರ್ಧೆ

ಕೊಪ್ಪಳ ಜೂನ್ 02 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಸ್ವೀಮಿಂಗ್ ಕ್ಲಬ್ ಇವರ ಸಹಯೋಗದೊಂದಿಗೆ ರವಿವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಈಜು ಸ್ಪರ್ಧೆಯು ಎಲ್ಲರ ಗಮನ ಸೆಳೆಯಿತು.
ಕೊಪ್ಪಳ ಸಿಪಿಐ ಸುರೇಶ ಅವರು ಈಜು ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟು ಈಜು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ದೈಹಿಕವಾಗಿ ಮಾನಸಿಕವಾಗಿ ಸದೃಡವಾಗಲು ಸಾಧ್ಯ. ಹಾಗಾಗಿ ಕ್ರೀಡಾಪಟುಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕ್ರೀಡಾ ಪಟುಗಳಿಗೆ ಉತ್ತಮ ರೀತಿಯಲ್ಲಿ ಕ್ರೀಡಾ ಸೌಲಭ್ಯಗಳು ಸಿಗುತ್ತಿದ್ದು, ಪಾಲಕರು ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠಲ ಜಾಬಗೌಡರ್ ಅವರು ಮಾತನಾಡಿ, ಕ್ರೀಡೆ ಜೀವನದ ಒಂದು ಭಾಗವಾಗಿದೆ. ಪ್ರತಿಯೊಬ್ಬರು ಒಂದೊಂದು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸುವದರ ಜೊತೆಗೆ ತಮ್ಮ ಆರೋಗ್ಯವನ್ನು ಸದೃಡವಾಗಿಟ್ಟುಕೊಳ್ಳಬೇಕು. ಈಜು ಸ್ಪರ್ಧೆ ಬಹಳ ಮುಖ್ಯವಾಗಿದ್ದು, ಕೊಪ್ಪಳ ಜಿಲ್ಲೆಯ ಕ್ರೀಡಾ ಪಟುಗಳಿಗೆ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈಜು ಸ್ಪರ್ಧೆಯಲ್ಲಿ ಅಂತರ ರಾಷ್ಟ್ರೀಯ ಕ್ರೀಡಾ ಪಟುಗಳಾದ ಅಸ್ಮಿತಾ ಚಂದ್ರು ಹಾಗೂ ವೃತ್ತಿ ಅಗರವಾಲ್ ಅವರು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಅಸ್ಮಿತಾ ಚಂದು ಅವರು ಸಿಂಗಾಪೂರದಲ್ಲಿ ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿರುತ್ತಾರೆ. ಅವರಂತೆ ಎಲ್ಲಾ ಕ್ರೀಡಾಪಟುಗಳು, ಈ ಈಜು ಸ್ಪರ್ಧೆಯಲ್ಲಿ ಆಸಕ್ತಿವಹಿಸಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಬೆಳೆಯಬೇಕು ಎಂದು ಶುಭ ಹಾರೈಸಿದರು.
ಅಂತರ ರಾಷ್ಟೀಯ ಕ್ರೀಡಾಪಟು ಅಸ್ಮಿತಾಚಂದ್ರು ಅವರು ಮಾತನಾಡಿ, ನಾನು ಹೈದಾರಾಬಾದಿನವಳು ನಾನು ಈಜು ಸ್ಪರ್ಧೆಯಲ್ಲಿ ಹೆಚ್ದಿನ ಆಸ್ತಿಕ ಇದ್ದು, ನನಗೆ ನನ್ನ ತಂದೆ ತಾಯಿಗಳ ಪ್ರೋತ್ಸಾಹ ಹಾಗೂ ನನ್ನ ನೆಚ್ಚಿನ ಗುರುಗಳ ಮಾರ್ಗದರ್ಶನದಿಂದ ಬೆಸಿಗೆ ತರಬೇತಿಯಲ್ಲಿ ಭಾಗಹಿಸುತ್ತಿದ್ದೆ. ದಿನಂಪ್ರತಿ ಬೆಳಿಗ್ಗೆ ಈಜುತ್ತಿದ್ದೆ, ಇದರಿಂದ ನನಗೆ ರಾಷ್ಟç ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ. ಇದರಂತೆ ತಾವುಗಳು ಹೆಚ್ಚಿನ ರೀತಿಯಲ್ಲಿ ಈಜು ತರಬೇತಿ ಪಡೆದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಿ ಎಂದು ತಿಳಿಸಿದರು.
ಅಂತರ ರಾಷ್ಟೀಯ ಕ್ರೀಡಾಪಟು ವೃತಿ ಅಗರವಾಲ್ ಅವರು ಮಾತನಾಡಿ, ಈಜು ಸ್ಪರ್ಧೆಯಲ್ಲಿ ನಾನು ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುತ್ತೇನೆ. ತಾವುಗಳು ಸಹಿತ ಹಿರಿಯರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಹಾರೈಸಿದರು.
*50 ಕ್ರೀಡಾಪಟುಗಳು ಭಾಗಿ:* ಈಜು ಸ್ಪರ್ಧೆಯಲ್ಲಿ 8 ರಿಂದ 10 ವರ್ಷ ವಯೋಮಿತಿ, 10 ರಿಂದ 12 ವರ್ಷ ವಯೋಮಿತಿ ಹಾಗೂ 12 ರಿಂದ 14 ವರ್ಷ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕೀಯರಿಗೆ ಅವಕಾಶ ಕಲ್ಪಿಸಲಾಗಿದ್ದು, ಈಜು ಸ್ಪರ್ಧೆಯಲ್ಲಿ ಒಟ್ಟು 50 ಜನ ಬಾಲಕ ಬಾಲಕೀಯರು ಭಾಗವಹಿಸಿದ್ದರು.
*ವಿಜೇತರು:* 8 ರಿಂದ 10 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ವಿರಾಟ್ ಪಾಟೀಲ್ ಪ್ರಥಮ ಸ್ಥಾನ, ಆದರ್ಶ ದ್ವಿತೀಯ, ಸುಫಿಯಾನ್ ಪಟೇಲ್ ತೃತೀಯ ಸ್ಥಾನ ಪಡೆದುಕೊಂಡರು. 10 ರಿಂದ 12 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಶೌರ್ಯ ಪಾಟೀಲ್ ಪ್ರಥಮ, ಅನುಷ್ ದ್ವಿತೀಯ, ಶ್ರೀಧರ್ ಭಟ್ ತೃತೀಯ ಸ್ಥಾನ ಪಡೆದುಕೊಂಡರೆ, 12 ರಿಂದ 14 ವರ್ಷ ವಯೋಮಿತಿಯ ಸ್ಪರ್ಧೆಯಲ್ಲಿ ಗವಿಶ್ ಪ್ರಥಮ, ಶ್ರೇಯಸ್ ದ್ವಿತೀಯ ಮತ್ತು ತನಯ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಜಾನ್ವಿ ಮತ್ತು ಎ.ಎನ್. ಯತಿರಾಜ್, ಕೊಪ್ಪಳ ತಾಲ್ಲೂಕ ಕ್ರೀಡಾಧಿಕಾರಿಗಳಾದ ಶರಣಬಸವ ಬಂಡಿಹಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಸವಾಜು ಹನಮಸಾಗರ ಅವರು ಕಾರ್ಯಕ್ರಮ ನಿರೂಪಿಸಿದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ