Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ರಾಷ್ಟ್ರೀಯ ಸುದ್ದಿ

ಸಕಲ ಗೌರವಗಳಿಂದ ನಡೆದ ಹುತಾತ್ಮ ಯೋಧನ ಅಂತ್ಯ ಸಂಸ್ಕಾರ

ಮಾನ್ವಿ:ಪಟ್ಟಣದ ಆರ್.ಜಿ.ಕ್ಯಾಂಪ್‌ನ ನಿವಾಸಿ ಹಾಗೂ ತಮಿಳುನಾಡಿನ ಕಲ್ಪಕಂ ಪರಮಾಣು ವಿದ್ಯುತ್ ತಯಾರಿಕ ಕೇಂದ್ರದಲ್ಲಿ ರಕ್ಷಣೆಯ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ತಮ್ಮ ರಾತ್ರಿಪಾಳಿ ಕೇಲಸವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಆಕಸ್ಮಿಕವಾಗಿ ಕೈಯಲಿರುವ ಬಂದೂಕಿನಿAದ ಗುಂಡು ಹಾರಿ  ಮೃತಪಟ್ಟಿರುವ ಕೈಗಾರಿಕಾ ಭದ್ರತಾ ಪಡೆಯ ಹುತಾತ್ಮ ಯೋಧ ಹಾಗೂ ಹೆಡ್ ಕಾನ್ಸ್ಟೆಬಲ್ ವೈ.ರವಿಕಿರಣ್ . ವ.37 ರವರ ಮೃತ ದೇಹವನ್ನು ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್ಸೆಪೆಕ್ಟರ್ ಅಂಕಿತ ಭಟಸಾಲ ನೇತೃತ್ವದ ಯೋಧರ ತಂಡ ಕುಟುಂಬಸ್ಥರಿಗೆ ಒಪ್ಪಿಸಿ ಗೌರವ ವಂದನೆ ಸಲ್ಲಿಸಿದರು.

ತಾಲೂಕು ಆಡಳಿತ ಹಾಗೂ ಕುಟುಂಬಸ್ಥರು  ಹುತಾತ್ಮ ಯೋಧ ವೈ.ರವಿಕಿರಣ್ ಮೃತ ದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದರು ನೂರಾರು ಯುವಕರು ಬೈಕ್ ರ‍್ಯಾಲಿ ಮೂಲಕ ಮೃತದೇಹವನ್ನು ಕರೆತರಲಾಯಿತು. ತಾಲೂಕು ಆಡಳಿತದ ಪರವಾಗಿ ಶಾಸಕ ಹಂಪಯ್ಯನಾಯಕ ಹಾಗೂ ಗ್ರೇಡ್-2 ತಹಸೀಲ್ದರ್ ಅಬ್ದುಲ್ ವಾಹಿದ್, ಪಿ.ಐ.ವೀರಭದ್ರಯ್ಯ ಹಿರೇಮಠ ಹೂವಿನ ಹಾರವನ್ನು ಹಾಕಿ ಗೌರವ ಸಲ್ಲಿಸಿದರು. 

ನಂತರ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ್,ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ವಿ.ಚನ್ನರೆಡ್ಡಿ, ಮಾಜಿ ಯೋಧರಾದ ಜಲ್ಲಿ ಆಂಜನೇಯ್ಯ, ಹಾಲಿ ಯೋಧರಾದ ದುರ್ಗಪ್ರಸಾದ್, ಶರಣಬಸವ, ವಂದೆ ಮಾತರಂ ಸಂಘದ ಅಧ್ಯಕ್ಷರಾದ ಮೆಹಬೂಬ್ ಮದ್ಲಾಪೂರ್  ಸೇರಿದಂತೆ ಕುಟುಂಬದವರು ಹಾಗೂ ನೂರಾರು ಅಭಿಮಾನಿಗಳು ಗೌರವ ಸಲ್ಲಿಸಿದರು .



ಕುಟುಂಬದವರ ಸ್ವಂತ ಜಮೀನಿನಲ್ಲಿ ಅಂತ್ಯ ಕ್ರೀಯೆ ನಡೆಯಿತು. ಸಿ.ಐ.ಎಸ್.ಎಫ್. ಸಬ್ ಇನ್ಸೆಪೆಕ್ಟರ್ ಅಂಕಿತ ಭಟಸಾಲ ನೇತೃತ್ವದಲ್ಲಿ ಯೋಧರಾದ ಸಂತೋಷಕುಮಾರ್, ಭರತಕುಮಾರ್,ಭೂಜರಾಜ ಶರ್ಮ,ಕೆ.ಕೆ.ನಗರವಾಲ್ ಹಾಗೂ ರಾಯಚೂರಿನ ಆರ್.ಟಿ.ಪಿ.ಎಸ್. ಸಿ.ಐ.ಎಸ್.ಎಫ್. ಸಬ್ ಇನ್ಸೆಪೆಕ್ಟರ್‌ಎಸ್.ಖಾಜವಾಲಿ ಹೆಡ್ ಕಾನ್ಸಟೆಬಲ್ ರವಿ.ಕುಪಲಿ ಈಶ್ವರರಾವ್, ಕೆ.ಡಿ.ವಾಗಮಾರೆ,ಮೌನೇಶ ಕುಮಾರ್,ದೀಪಾಕ್ ಮಹಮ್ಮದ್, ಸಿ.ಐ.ಎಸ್.ಎಫ್. ಸಂಪ್ರದಾಯದAತೆ ಯೋಧರು ಗೌರವ ವಂದನೆ ಸಲ್ಲಿಸಿದರು.

ಮನೆಯ ಅವರಣದಲ್ಲಿ ಅಂತಿಮ ದರ್ಶನ ಸಮಯದಲ್ಲಿ ಹುತಾತ್ಮ ಯೋಧನ ಪತ್ನಿ ಅನುಷ, ಇಬ್ಬರು ಪುತ್ರಿಯರಾದ ಯಶಸ್ವಿನಿ,ರಿತಿಕಾ , ತಂದೆ ವೈ .ಅಬ್ಬುಲು.ತಾಯಿ ವೈ.ವರಲಕ್ಷಿö್ಮ, ಸಹೋದರ ಮುರಳಿ ರವರು ರೋಧಿಸುತ್ತಿರುವ ದೃಶ್ಯ ಮನಕಲಕುವಂತೆ ಇತ್ತು.

ಹುತಾತ್ಮ ಯೋಧನ ಮಾವ ಕಾಮೇಶ್ವರರಾವ್ ಮಾತನಾಡಿ ಮದುವೆಯಾಗಿ ಹತ್ತು ವರ್ಷವಾಗಿದರಿಂದ ಮದುವೆಯ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎನ್ನುವ ಉದ್ದೇಶದಿಂದ ಮಗಳು ಹಾಗೂ ಮೋಮ್ಮಕಳು ಪಟ್ಟಣಕ್ಕೆ ಬಂದಿದ್ದರು ರಜೆಗಾಗಿ ಅಳಿಯ ಪ್ರಯತ್ನಿಸುತ್ತಿದ್ದ ಬಟ್ಟೆ,ಒಡವೆ ಸೇರಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಅಳಿಯನಿಗಾಗಿ ಕಾಯುತ್ತಿದ್ದೆವು ಅದ್ದರೆ ಅಳಿಯ ಇಂದು ಮನೆಗೆ ಶವವಾಗಿ ಬಂದಿರುವುದು ಕುಟುಂಬದವರಿಗೆ ಅತ್ಯಂತ ದುಃಖವನ್ನುಂಟು ಮಾಡಿದೆ ಎಂದು ಸಂಬAದಿಕರಲ್ಲಿ ಹೇಳಿಕೊಂಡು ರೋಧಿಸುತ್ತಿರುವುದು ಎಂತಹವರನ್ನಾದರು ಕರಗುವಂತೆ ಮಾಡುತ್ತಿತ್ತು. 

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ