Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾಳೆಬರೆ ಘಾಟ್ : ಪ್ರಯಾಣಿಕರ ಅದಲು-ಬದಲು ವ್ಯವಸ್ಥೆ ಮೂಲಕ ಸಾರಿಗೆ ಸಂಪರ್ಕ


ಶಿವಮೊಗ್ಗ ಏ.15: ಬಾಳೆಬರೆ ಘಾಟ್‌ನಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ, ಘಾಟಿಯ ಎರಡು ಬದಿಗಳಿಂದ ಬರುವ ಬಸ್ಸುಗಳ ಪ್ರಯಾಣಿಕರನ್ನು ಪರಸ್ಪರ ಬದಲಾಯಿಸುವ (ಅದಲು-ಬದಲು) ಮೂಲಕ ಪ್ರಯಾಣ ಮುಂದುವರಿಸಲು ಕೆಲವು ಷರತ್ತುಗಳಿಗೆ ಒಳಪಟ್ಟು ತಾತ್ಕಾಲಿಕ ಅನುಮತಿ ನೀಡಿ ಆದೇಶಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದ್ದಾರೆ.

ಸಂಚಾರ ನಿಯಮಗಳು ಮತ್ತು ಷರತ್ತುಗಳು :

• ಈ ವ್ಯವಸ್ಥೆಯು ಕೇವಲ ಸಾರ್ವಜನಿಕ ಸಂಪರ್ಕ (ಸ್ಟೇಜ್ ಕ್ಯಾರೇಜ್) ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಕೇವಲ 35 ಆಸನವುಳ್ಳ (432 ಸೆಂ.ಮೀ ಚಕ್ರತಳ ಮೀರದ) ಬಸ್ಸುಗಳಿಗೆ ಮಾತ್ರ ತಿರುಗಲು ಅವಕಾಶವಿರುತ್ತದೆ.

• ವಾಹನ ಬದಲಾವಣೆ ಮಾಡಲು ಪ್ರಯಾಣಿಕರು ಸುಮಾರು 85 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ದಾಟಬೇಕಾಗುತ್ತದೆ. ಈ ಮೆಟ್ಟಿಲುಗಳು ಕಿರಿದಾಗಿರುವುದರಿಂದ ಕೇವಲ ದೈಹಿಕವಾಗಿ ಸದೃಢರಾಗಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು.

• ಭೂಕುಸಿತ ಸಂಭವಿಸಿದ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಳೆಗಾಲ ಹತ್ತಿರವಿರುವುದರಿಂದ ಮೆಟ್ಟಿಲುಗಳಿಗೆ ಹ್ಯಾಂಡ್ ರೈಲ್‌ಗಳನ್ನು ಅಳವಡಿಸಲು ಮತ್ತು ದುರಸ್ತಿ ಮಾಡಲು ಸೂಚಿಸಲಾಗಿದೆ.

• ಸ್ಥಳದಲ್ಲಿ ತುರ್ತು ಉಪಚಾರಕ್ಕಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ.

ಮಾರ್ಗ ಬದಲಾವಣೆ ವಿವರ

• ಶಿವಮೊಗ್ಗ-ಹೊಸನಗರ-ನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರಕ್ಕೆ ತೆರಳುವ ವಾಹನಗಳು ಚಂಡಿಕಾ ದೇವಸ್ಥಾನದವರೆಗೆ ಸಂಚರಿಸಬಹುದಾಗಿದ್ದು, ಅಲ್ಲಿ ಸೂಕ್ಷö್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.

• ಚಂಡಿಕ ದೇವಸ್ಥಾನದ ಒಂದನೇ ತಿರುವಿನಲ್ಲಿ ಭೂ ಕುಸಿತವಾದ ಜಾಗದ ಕೆಳಗಿನ ಮೊದಲನೇ ತಿರುವಿನಲ್ಲಿ ಹಾಲಿ ಇರುವ ಕಾಂಕ್ರಿಟ್ ರಸ್ತೆಯ ಕ್ಯಾರೇಜ್-ವೇ-24 ಅಡಿ ಇದ್ದು ಅದಕ್ಕೆ ಹೊಂದಿಕೊAಡಿರುವ ರಸ್ತೆಯ ಗ್ರಾವೆಲ್ ಶೋಲ್ಡರ್‌ನ್ನು ಸ್ಥಳೀಯ ಸಾರ್ವಜನಿಕರೇ ಕಾಂಕ್ರಿಟ್ ರಸ್ತೆಗೆ ಸಮನಾಗಿ 18 ಅಡಿ ಅಗಲಕ್ಕೆ ಅಗಲೀಕರಣ ಮಾಡಿ ಎತ್ತರಿಸಿ ಮಟ್ಟ ಮಾಡಿರುವುದು ಕಂಡುಬAದಿದ್ದು, ವಾಹನಗಳನ್ನು ಸೂಕ್ಷö್ಮತೆ ಮತ್ತು ಜಾಗರೂಕತೆಯಿಂದ ತಿರುಗಿಸಲು ಅವಕಾಶವಿರುತ್ತದೆ.

• ಪ್ರಯಾಣಿಕರು ವಾಹನ ಬದಲಾವಣೆ ಮಾಡಲು ಕಾಲ್ನಡಿಗೆಯಲ್ಲಿ ಓಡಾಡಲು ಪ್ರಸ್ತಾಪಿಸಿರುವ ಮಟ್ಟಿಲುಗಳು ಕಿರಿದಾಗಿದ್ದು ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಗೊಂದಲವಿಲ್ಲದೇ ದೈಹಿಕವಾಗಿ ಸದೃಢವಾಗಿರುವ ಪ್ರಯಾಣಿಕರಿಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಬಹುದಾಗಿರುತ್ತದೆ. ಈ ಆದೇಶವು ಏಪ್ರಿಲ್ 14 ರಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
Advertisement

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು