Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಪರಿಕರ ಮಾರಾಟಗಾರರ ಸಭೆ:

ಸಿರುಗುಪ್ಪ.ಜೂ.೦೧:- ಕೃಷಿ ಪರಿಕರಗಳ ಮಾರಾಟಗಾರರು ರೈತರಿಗೆ ದೇವರಿದ್ದಂತೆ ಮಾರಾಟಗಾರರು ಏನು ಹೇಳುತ್ತಾರೋ ಅದನ್ನು ರೈತರು ಕೇಳುತ್ತಾರೆ, ಅಧಿಕಾರಿಗಳ ಹೇಳಿದ್ದನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹೊರಗೆ ಬಿಡುತ್ತಾರೆ. ಆದ್ದರಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡಬೆಕೇಂದು ಕೃಷಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಂಜುನಾಥ ತಿಳಿಸಿದರು.
ನಗರದ ಸಿ.ಡಿ.ಪಿ.ಒ ಕಛೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಮಾರಾಟಗಾರರು ತಮ್ಮ ಅಂಗಡಿಯ ಲೈಸನ್ಸ್ನ್ನು ಬಹಿರಂಗವಾಗಿ ಹಾಕಬೇಕು, ಅಲ್ಲದೆ ತಮ್ಮಲ್ಲಿ ಸಂಗ್ರಹವಿರುವ ರಸಗೊಬ್ಬರ, ಕ್ರಿಮಿನಾಶಕ, ಬೀಜಗಳ ಧರದ ಪಟ್ಟಿಯನ್ನು ಭೋರ್ಡ್ನಲ್ಲಿ ಹಾಕಬೇಕು, ಯಾವುದೇ ವಸ್ತುವನ್ನು ರೈತರು ಖರೀದಿಸಿದರು ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು, ಅಲ್ಲದೆ ಡಿ.ಎ.ಪಿ. ಗೊಬ್ಬರಕ್ಕೆ ಪರ್ಯಾಯವಾಗಿ ಅನೇಕ ಗೊಬ್ಬರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪರ್ಯಾಯ ಗೊಬ್ಬರಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ತಿಳಿಸಬೇಕು, ಬೇರೆ ರಾಜ್ಯದಿಂದ ಯಾವುದೇ ರಸಗೊಬ್ಬರ, ಬೀಜ, ಕೀಟನಾಶಕ ತಂದು ಮಾರಾಟ ಮಾಡುವುದು ಅಕ್ರಮವಾಗಿರುತ್ತದೆ. ಯಾವ ಊರಿನಲ್ಲಿ ಲೈಸೆನ್ಸ್ ಪಡೆದಿರುತ್ತೀರೋ ಅದೇ ಊರಿನಲ್ಲಿ ಅಂಗಡಿಯನ್ನು ತೆರೆಯಬೇಕು, ಬೇರೆಕಡೆ ತೆರೆದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ಆಂದ್ರಪ್ರದೇಶದಿAದ ಗಡಿಭಾಗದ ಹಳ್ಳಿಗಳಿಗೆ ಹತ್ತಿಬೀಜ, ಔಷಧಿ, ನ್ಯೂಟ್ರೆಂಟ್‌ಗಳು ಬರುತ್ತಿದ್ದು, ರೈತರು ಹೊಲದಲ್ಲಿ ಮಾರಾಟ ಮಾಡಲು ಬರುವವರಿಂದ ಯಾವುದೇ ಪರಿಕರಗಳನ್ನು ಖರೀದಿಸಬಾರದು, ಅಧಿಕೃತ ಮಾರಾಟಗಾರರ ಹತ್ತಿರ ತೆಗೆದುಕೊಂಡು ಕಡ್ಡಾಯವಾಗಿ ರಸೀದಿ ಪಡೆದು ಬೆಳೆ ಮನೆಗೆ ಬರುವವರೆಗೂ ರಸೀದಿ ಮತ್ತು ಬೀಜದ ಚೀಲವನ್ನು ಕಾಯ್ದಿರಿಸಬೇಕು. ಒಂದು ವೇಳೆ ಬೀಜ ಸರಿಯಾಗಿ ಬೆಳೆ ಕೊಡದಿದ್ದರೆ ನಷ್ಟ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ವ್ಯಾಪಾರಿಗಳು ರೈತರ ಹಿತದೃಷ್ಟಿಯನ್ನಿಟ್ಟುಕೊಂಡು ತಮ್ಮ ವ್ಯಾಪಾರ ವಹಿವಾಟನ್ನು ನಡೆಸಬೇಕು, ರೈತರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದುಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆಯ ತನಿಖಾದಳದ ಸಹಾಯಕ ನಿರ್ದೇಶಕ ಮುಜಬಿರ್ ರೆಹಮಾನ್ ಮಾತನಾಡಿ ಇಲಾಖೆಯ ಮಾರ್ಗದರ್ಶನದಲ್ಲಿ ವ್ಯಾಪಾರಿಗಳು ಮಾರಾಟ ಮಾಡಲು ಅನುಮತಿಯನ್ನು ಕೊಡಲಾಗಿದೆ, ಆದ್ದರಿಂದ ಸರ್ಕಾರದ ಮಾರ್ಗದರ್ಶಿಯ ಪ್ರಕಾರ ವ್ಯಾಪಾರಿಗಳು ತಮ್ಮ ವಹಿವಾಟನ್ನು ನಡೆಸಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ವ್ಯಾಪಾರಿಗಳು ಮೂರು ರೀತಿಯ ವ್ಯಾಪಾರ ಮಾಡಲು ಮೂರು ರೀತಿಯ ಲೈಸನ್ಸ್ಗಳನ್ನು ಪಡೆದುಕೊಳ್ಳಬೇಕು, ಒಂದೇ ಲೈಸನ್ಸ್ನಲ್ಲಿ ಮೂರು ರೀತಿಯ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.
ವ್ಯಾಪಾರ ಮಾಡಲು ಲೈಸನ್ಸ್ಗಳನ್ನು ನೀಡುವಲ್ಲಿ ಪಾರದರ್ಶಕ ಕಾಯ್ದುಕೊಂಡಿದ್ದು, ಹೊಸ ಹೊಸ ಕಾನೂನುಗಳು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುತ್ತಿವೆ, ಎಲ್ಲಾ ಹೊಸ ಕಾನೂನುಗಳ ಬಗ್ಗೆ ವ್ಯಾಪಾರಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಕೃಷಿ ಅಧಿಕಾರಿಗಳಾದ ಬಾಲಾಜಿನಾಯ್ಕ್, ಪರಮೇಶ್ವರರೆಡ್ಡಿ, ಪುರುಷೋತ್ತಮ ಮತ್ತು ವಿವಿಧ ಗ್ರಾಮಗಳ ಕೃಷಿ ಪರಿಕರಗಳ ಮಾರಾಟಗಾರರು ಇದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ