Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಅಪರಾಧ ಸುದ್ದಿ

ಆಭರಣ ಮತ್ತು ಮೋಟಾರ ಸೈಕಲ್ ಕಳ್ಳನ ಬಂಧನ





ಧಾರವಾಡ ಫೆ.22: ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆಯ ಗುನ್ನಾ ನಂ: 27/2026 ಕಲಂ: 305,331(3), ಬಿಎನ್‍ಎಸ್ ನೇದ್ದರ ಪ್ರಕರಣದಲ್ಲಿ ಫೆಬ್ರವರಿ 15, 2026 ರಂದು ಪಿರ್ಯಾದಿದಾರರಾದ, ಸುರೇಶ ತಂದೆ ಭೀಮರಾಯಪ್ಪ ಕೋನರಡ್ಡಿ. ವಯಾ 60 ವರ್ಷ.ಸಾ. ಚಿಲಕವಾಡ. ತಾ. ನವಲಗುಂದ ನೇದ್ದವರು ಠಾಣೆಗೆ ಹಾಜರಾಗಿ ಫೆಬ್ರವರಿ 14, 2026 ರಂದು ಬೆಳಿಗ್ಗೆ 8 ಗಂಟೆಯಿಂದ ಫೆಬ್ರವರಿ 15, 2026 ರಂದು ಬೆಳಿಗ್ಗೆ 8 ಗಂಟೆಯ ನಡುವಿನ ಅವದಿಯಲ್ಲಿ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ತಮ್ಮ ವಾಸದ ಮನೆಯ ಬಾಗಿಲು ಮುರಿದು, ಮನೆಯ ಒಳಗಡೆ ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಕಳ್ಳತನವಾದ ಬಗ್ಗೆ ನೀಡಿದ ಪಿರ್ಯಾದಿಯನ್ವಯ ನವಲಗುಂದ ಪೆÇಲೀಸ ಠಾಣೆಗುನ್ನಾ ನಂಬರ 27/2026 ಕಲಂ 305, 331(3), 331(4) ಬಿಎನ್‍ಎಸ್ ನೇದ್ದಕ್ಕೆ ದಾಖಲ ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.



ಸದರ ಪ್ರಕರಣ ದಾಖಲಾದ ತಕ್ಷಣ ನವಲಗುಂದ ವೃತ್ತ ಸಿಪಿಐ ರವಿಕುಮಾರ ಕಪ್ಪತನವರ ಹಾಗೂ ಪಿ.ಎಸ್.ಐ ಜನಾರ್ಧನ ಬಿ. ಹಾಗೂ ತನಿಖಾ ತಂಡವು ಸ್ಥಳಿಯ ಸಿಸಿಟೀವಿ ಪುಟೇಜ ಸಂಗ್ರಹಿಸಿದ್ದರಲ್ಲಿ ಸದರಿ ಪುಟೇಜನಲ್ಲಿ ಸುಮಾರು 60 ರಿಂದ 65 ವಯಸ್ಸಿನ ವ್ಯಕ್ತಿಯ ಚಲನವಲಗಳು ಪುಟೇಝನಲ್ಲಿ ಲಭ್ಯವಾಗಿದ್ದು, ಸದರಿಯವನ ಚಹರೆ ಪಟ್ಟಿಯ ಆಧಾರದ ಮೇಲೆ ವಿವಿಧ ಜಿಲ್ಲೆಯ ಠಾಣೆಗಳ ಎಮ್‍ಓಬಿ ಜನರ ಚಹರೆ ಪಟ್ಟಿಯನ್ನು ನೋಡಲಾಗಿ ಗಜೆಂದ್ರಗಡ ತಾಲೂಕಿನ ನರೆಗಲ್ ಗ್ರಾಮದ ಜೀವನ ಉರ್ಫ ಜಿವ್ಯಾ ತಂದೆ ದ್ಯಾಮಣ್ಣ ದೊಡಮನಿ ನೇದವನ ಚಹರೆ ಪಟ್ಟಿಗೆ ಹೊಲಿಕೆಯಾಗಿದ್ದರಿಂದ, ನರೆಗಲ್ ಠಾಣೆಯ ಪಿಎಸ್‍ಐ ಐಶ್ವರ್ಯ ನಾಗರಾಳ ಹಾಗೂ ಸಿಬ್ಬಂದಿ ಕಿರಣ ಹಿರೇಮಠ ನೇದವರ ಸಹಾಯದಿಂದ ಸದರಿಯವನ ಮಾಹಿತಿ ಹಾಗೂ ಹಾಲಿ ಇರುವಾತಿ ಬಗ್ಗೆ ಕೇಳಲಾಗಿ ಸದರ ಸಿಬ್ಬಂದಿಯವರು ಜೀವಪ್ಪ ಉರ್ಫ ಜಿವ್ಯಾ ತಂದೆ ದ್ಯಾಮಣ್ಣ ದೊಡಮನಿ, ವಯಾ 69 ವರ್ಷ. ಸಾ. ನರೆಗಲ್ ಇವನ ಮನೆಗೆ ಹೊಗಿ ಪ್ರತಿದಿನ ರಾತ್ರಿ ವೇಳೆಗೆ ಎಮ್‍ಓಬಿ ಚೆಕ್ ಮಾಡುತ್ತಿದ್ದ ಕಾಲಕ್ಕೆ ಸದರಿ ಜೀವಪ್ಪನು ತನ್ನ ಮನೆಯಲ್ಲಿ ಇರುತ್ತಿದ್ದು, ಈಗ ಸುಮಾರು 3-4 ದಿನಗಳಿಂದ ರಾತ್ರಿ ವೇಳೆಗೆ ಎಮ್‍ಓಬಿ ಚೆಕ್ ಮಾಡುತ್ತಿದ್ದ ಕಾಲಕ್ಕೆ ಗೈರು ಹಾಜರಾತಿ ಇದ್ದ ಬಗ್ಗೆ ತಿಳಿಸಿದ್ದರಿಂದ ನಮಗೆ ಜೀವಪ್ಪ ಉರ್ಫ ಜಿವ್ಯಾ ತಂದೆ ದ್ಯಾಮಣ್ಣ ದೊಡಮನಿ, ವಯಾ 69 ವರ್ಷ. ಸಾ. ನರೆಗಲ್ ಮೇಲೆ ಸಂಶಯ ಬಂದು ಆತನನ್ನು ತಪಾಸು ಮಾಡುತ್ತಿರುವಾಗ ಒಂದು ಮೋಟಾರ ಸೈಕಲನೊಂದಿಗೆ ಹಾಜರಾತಿಗೆ ಸಿಕ್ಕಿದ್ದು ಇರುತ್ತದೆ.



ಅದು ಅಣ್ಣಿಗೇರಿ ಠಾಣಾ ಹದ್ದಿಯಲ್ಲಿ ಕಳ್ಳತನವಾದ ಮೋಟಾರ ಸೈಕಲ ಇದ್ದು, ಆತನ ಮೇಲೆ ಸಂಶಯ ಬಲವಾಗಿ ಮೂಡಿದ್ದರಿಂದ ಸದರಿಯವನನ್ನು ವಶಕ್ಕೆ ಪಡೆದು ಗುನ್ನೆಯ ಬಗ್ಗೆ ತೀವ್ರ ವಿಚಾರಣೆಗೊಳಪಡಿಸಿದಾಗ ಸದರಿಯವನು ಕಳ್ಳತನದ ಮಾಡಿದ ಜಾಲದ ಬಗ್ಗೆ ಅಲ್ಲದೇ ಮನಕವಾಡ, ನಲವಡಿ ಗ್ರಾಮದಲ್ಲಿ ತಲಾ ಒಂದೊಂದು ಮೊಟಾರ ಸೈಕಲ್ಲನ್ನು ಕಳ್ಳತನ ಮಾಡಿದ್ದರ ಬಗ್ಗೆ ತಪೆÇ್ಪಪ್ಪಿಗೆ ಹೇಳಿಕೆ ನೀಡಿದ್ದು, ಗುನ್ನೆ ನಡೆದ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ಕೈಕೊಂಡು ಕಳ್ಳತನವಾದ ಆಭರಣಗಳನ್ನು ಪ್ರಕರಣ ದಾಖಲಾದ ಶೀಘ್ರದಲ್ಲಿ ವಶಪಡಿಸಿಕೊಂಡಿದ್ದು ಅಲ್ಲದೇ ಗುನ್ನೆಗೆ ಉಪಯೊಗಿಸಿದ ಮೊಟಾರ ಸೈಕಲ್ಲಗಳನ್ನು ಸಹ ಜಪ್ತ ಮಾಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಕಾನೂನು ಕ್ರಮಕೈಗೊಂಡಿದ್ದು ಇರುತ್ತದೆ.



ಸದರಿ ಆರೋಪಿತನಿಂದ ಜಪ್ತ ಪಡಿಸಿಕೊಂಡ ಸ್ವತ್ತಿನ ವಿವರ: ಒಂದು 5.98 ಗ್ರಾಂ ತೂಕದ ಬಂಗಾರದ ಬಟನ್ಸ ಮತ್ತು ಗುಂಡ ರೂ. 71760, ಒಂದು 2.82 ಗ್ರಾಂ ತೂಕದ ಬಂಗಾರದ ಟಾಪ್ಸ ಅರಗ ಸಮೇತ ಇದ್ದದ್ದು ರೂ. 33840, ಒಂದು 1.84 ಗ್ರಾಂ ತೂಕದ ಬಂಗಾರದ ವಿ ಶೆಫ್‍ರಿಂಗ ರೂ. 22080, 53.96 ಗ್ರಾಂ ತೂಕದ ಬೆಳ್ಳಿಯ ಹಾಲಗಡಗ ಮತ್ತು ಕೈಕಡಗ ರೂ. 13500, 57.16 ಗ್ರಾಂ ತೂಕದ ಒಟ್ಟು 05 ಬೆಳ್ಳಿಯ ಕಾಲಚೈನಗಳು ರೂ. 14250, 18.51 ಗ್ರಾಂ ತೂಕದ ಬೆಳ್ಳಿಯ ಉಡದಾರ ರೂ. 4600, ಒಂದು ಹೆಚ್‍ಎಫ್‍ಡಿ ಲಕ್ಸ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-25-ಎಚ್‍ಎ-6992 ರೂ. 50.000, ಒಂದು ಪ್ಯಾಶನ ಪೆÇ್ರೀ ಕಂಪನಿಯ ಮೋಟಾರ ಸೈಕಲ ನಂಬರ ಕೆಎ-25-ಇಎಸ್-4143 ರೂ. 50.000 ಇರುತ್ತದೆ.



ಸದರ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕ ಗುಂಜನ್‍ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಪ್ರಭಾರ) ಶಿವಾನಂದ ಕಟಗಿ, ಪೊಲೀಸ್ ಉಪಾಧೀಕ್ಷಕ ವಿನೋದ ಮುಕ್ತೇದಾರ, ನವಲಗುಂದ ವೃತ್ತ ಸಿಪಿಐ ರವಿಕುಮಾರ ಕಪ್ಪತನವರ ಇವರ ಮಾರ್ಗದರ್ಶನದಲ್ಲಿ ನವಲಗುಂದ ಪಿ.ಎಸ್.ಐ ಜನಾರ್ಧನ ಬಿ. ಪಿಎಸ್ ಹಾಗೂ ಸಿಬ್ಬಂದಿಗಳಾದ ಸದಾಶಿವ ಮುಳ್ಳೂರ, ಸಂತೋಷ ಸಿಂಗಣ್ಣವರ, ಮುತ್ತು ಭಜಂತ್ರಿ, ವಿಜಯಕುಮಾರ ಸಲಕಿ, ಗಂಗಾಧರ ಸಣ್ಣಮೇಟಿ. ಪಾರೂಕ ನದಾಫ, ಶ್ರೀಧರ ಕಡಕೋಳ, ಸಿದ್ದಾರಾಮ ಮೇಡೆದಾರ, ಗೂಳಪ್ಪ ಜಗಲಿ, ಸಲೀಂ ಮತ್ತೆಖಾನ, ವಿಠ್ಠಲ ಡಂಗನವರ ಈ ಪ್ರಕಾರ ಸಿಬ್ಬಂದಿಯನ್ನೊಳಗೊಂಡ ತನಿಖಾ ತಂಡವು ಆರೋಪಿತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಇರುತ್ತದೆ.



ಸದರಿ ಪ್ರಕರಣದ ಆರೋಪಿತನಿಂದ ಕಳುವಾದ ಸ್ವತ್ತನ್ನು ವಶಪಡಿಕೊಂಡು ಆ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾದ ನವಲಗುಂದ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕಾರ್ಯ ವೈಖರಿಯನ್ನು ಹಿರಿಯ ಅಧಿಕಾರಿಗಳು ವ್ಯಕ್ತ ಪಡಿಸಿರುತ್ತಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ