Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಅಪರಾಧ ಸುದ್ದಿ

ಲೋಕಾಯುಕ್ತ ಪೊಲೀಸ್ ಪ್ರಕಟಣೆ,ಭೂ ಮಾಪನ ಇಲಾಖೆಯ ಸರ್ವೆಯರ್ ರಾಘವೇಂದ್ರ ಕುಲಕರ್ಣಿಗೆ ಜೈಲು ಶಿಕ್ಷೆ ದಂಡ ವಿಧಿಸಿ ಆದೇಶ





ಧಾರವಾಡ ಫೆ 21: ಕುಂದಗೋಳ ಭೂ ಮಾಪನ ಇಲಾಖೆ ಸರ್ವೆಯರ್ ರಾಘವೇಂದ್ರ ಶಂಕರರಾವ ಕುಲಕರ್ಣಿ ಅವರಿಗೆ ಲಂಚ ಪ್ರಕರಣದಲ್ಲಿ 04 ವರ್ಷ ಜೈಲು ಶಿಕ್ಷೆ ಮತ್ತು 20,000 ದಂಡ ವಿಧಿಸಿ ಧಾರವಾಡದ 03 ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ ಆದೇಶಿಸಿದೆ.



ಧಾರವಾಡ ಲೋಕಾಯುಕ್ತ ಪೊಲೀಸ ಠಾಣೆ ಪ್ರಕರಣ ಸಂಖ್ಯೆ: 08/2019 ಕಲಂ. 07 (ಚಿ)

ಲಂಚ ಪ್ರತಿಬಂಧಕ ಕಾಯ್ದೆ-1988ರ ಆರೋಪಿ ರಾಘವೇಂದ್ರ ಶಂಕರರಾವ ಕುಲಕರ್ಣಿ, ಉದ್ಯೋಗ: ಸರ್ವೆಯರ್, ಭೂ ಮಾಪನ ಇಲಾಖೆ ಕುಂದಗೋಳ ಇವರಿಗೆ ಗೌರವಾನ್ವಿತ 03 ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ, ಧಾರವಾಡದಲ್ಲಿ ದೋಷಿಯೆಂದು ತೀರ್ಮಾನಿಸಿ ಇಂದು ದಿನಾಂಕ: 21-02-2026 ರಂದು ತೀರ್ಪು ನೀಡಲಾಗಿರುತ್ತದೆ.



ಈ ಪ್ರಕರಣದಲ್ಲಿಯ ಫಿರ್ಯಾದಿದಾರ ಮಲ್ಲಿಕಾರ್ಜುನಗೌಡ ಭರಮಗೌಡ ಪಾಟೀಲ, ಸಾ: ಶಿರೂರ, ತಾ: ಕುಂದಗೋಳ ಇವರು ತಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ಕುಂದಗೋಳ ತಾಲೂಕಿನ ಶಿರೂರ ಗ್ರಾಮದಲ್ಲಿರುವ ಸರ್ವೆ ನಂ 83/1, 83/1ಅ, 83/1ಬ ನೇದ್ದರಲ್ಲಿ ಒಟ್ಟು 9 ಎಕರೆ 8 ಗುಂಟೆ ಜಮೀನು ಇದ್ದು, ಈ ಜಮೀನುಗಳಲ್ಲಿ, 3 ಎಕರೆ 30 ಗುಂಟೆ, 3 ಎಕರೆ 30 ಗುಂಟೆ ಹಾಗೂ 1 ಎಕರೆ 28 ಗುಂಟೆ ಈ ಪ್ರಕಾರ ಉತಾರಗಳು ಜಂಟಿ ಹೆಸರಿನಲ್ಲಿದ್ದು, ಆ ಜಮೀನುಗಳು ಮೋಜಣಿ ಕಛೇರಿಯಲ್ಲಿ ಅಖಂಡ ಇದ್ದು, ಅದನ್ನು ಉತಾರಗಳ ಪ್ರಕಾರ ಅಳತೆ ಮಾಡಿ, ಪೆÇೀಡಿ ಮಾಡಿ ಕೊಡಲು ಅರ್ಜಿ ಸಲ್ಲಿಸಿದ್ದು, ಕೆಲಸ ಮಾಡಿಕೊಡಲು ಆಪಾದಿತನು 15,000 ರೂ.ಗಳ ಲಂಚದ ಹಣದ ಬೇಡಿಕೆ ಇಟ್ಟಿದರಿಂದಾಗಿ, ಆರೋಪಿ ರಾಘವೇಂದ್ರ ಶಂಕರರಾವ ಕುಲಕರ್ಣಿ, ಸರ್ವೆಯರ್, ಭೂ ಮಾಪನ ಇಲಾಖೆ ಕುಂದಗೋಳರವರ ವಿರುದ್ಧ ಧಾರವಾಡ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆ ದಿನಾಂಕ: 03-06-2019 ರಂದು 16-00 ಗಂಟೆಗೆ ಕುಂದಗೋಳ ಕೆ.ಎಸ್.ಆರ್.ಟಿ.ಸಿ ಕ್ಯಾಂಟಿನ್‍ನಲ್ಲಿ ಆರೋಪಿತನು ಫಿರ್ಯಾದಿದಾರರಿಂದ ಲಂಚದ ಹಣ ರೂ. 15,000 ಗಳನ್ನು ಪಡೆದುಕೊಳ್ಳುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಲಾಗಿತ್ತು.

ಆರೋಪಿತರ ಮೇಲೆ ಅಂದಿನ ತನಿಖಾಧಿಕಾರಿ ಬಿ.ಎ. ಜಾಧವ ಪೊಲೀಸ್ ಇನ್ಸಪೆಕ್ಟರ್ ರವರು ಪ್ರಕರಣದ ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.



ಧಾರವಾಡದ 03ನೇ ಅಧಿಕ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಜರೀನಾ ಅವರು ಇಂದು ನ್ಯಾಯಾಲಯದಲ್ಲಿ ಆಪಾದಿತ ಅಧಿಕಾರಿ ರಾಘವೇಂದ್ರ ಶಂಕರರಾವ ಕುಲಕರ್ಣಿ, ಸರ್ವೆಯರ್, ಭೂ ಮಾಪನ ಇಲಾಖೆ ಕುಂದಗೋಳ ರವರಿಗೆ 04 ವರ್ಷಗಳ ಕಾರಾವಾಸ ಶಿಕ್ಷೆ ಹಾಗೂ ರೂ. 20,000/- ದಂಡ ವಿಧಿಸಿ ಆದೇಶಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀ ಎಸ್ ಎಸ್ ಶಿವಳ್ಳಿಯವರು ಪ್ರಕರಣ ಕುರಿತು ವಾದ ಮಂಡಿಸಿದ್ದರು ಎಂದು ಕರ್ನಾಟಕ ಲೋಕಾಯುಕ್ತ ಧಾರವಾಡ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ