Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಸಮಾರೋಪಗೊಂಡ ದಂತ ವೈದ್ಯರ ಷಟಲ್ ಬ್ಯಾಡ್ ಮಿಂಟನ್ ಪಂದ್ಯಾವಳಿ  ರಾಘವ ಭಟ್, ಅರ್ಪಣಾ ಪೂಜಾ, ವಿಕ್ರಂ ವಿನ್ನರ್

ಬಳ್ಳಾರಿ:  ಜು 28  ಭಾರತೀಯ ದಂತ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯು ಆತಿಥ್ಯ ವಹಿಸಿಕೊಂಡು ಎರೆಡು ದಿನಗಳ ಕಾಲ ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ನಡೆದ 

 ರಾಜ್ಯ ಮಟ್ಟದ ದಂತ ವೈದ್ಯರ ಷಟಲ್ ಬ್ಯಾಡ್ ಮಿಂಟಂನ್ ಪಂದ್ಯಾವಳಿ ಇಂದು ಸಮಾರೋಪಗೊಂಡಿದೆ. ಆತಿಥೇಯ ಬಳ್ಳಾರಿಯ ವೈದ್ಯರು ವಿಜೇತರಾಗದಿದ್ದರೂ ಬಹುತೇಖ ವೇಳೆ ಭಾಗಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆಯುವಲ್ಲಿ ಯಶ ಸಾಧಿಸಿದ್ದಾರೆ. 



ನಾಕೌಟ ಹಂತದಲ್ಲಿ ನಡೆದ ಪಂದ್ಯಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 58 ಕ್ಕೂ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು. 

ಅಂತಿಮ‌ ಪಂದ್ಯಗಳಲ್ಲಿ: ಮಹಿಳೆಯರ ವಿಭಾಗ: 

40 ವರ್ಷದೊಳಗಿನ ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪಾಎಂ ಮತ್ತು ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ. ವಿಜಯಲಕ್ಷ್ಮಿ, ಡಾ‌ ದೀಪಾ ಪಿ ಅವರನ್ನು ನೇರ ಸೆಟ್ ಗಳಿಂದ (2-0) 21-08, 21-02 ಅಂಕಗಳಿಂದ ಮಣಿಸಿದರು. 


40 ವರ್ಷ ಮೇಲ್ಪಟ್ಟ ಸಿಂಗಲ್ಸ್ ನಲ್ಲಿ ಉತ್ತರ ಕನ್ನಡದ ಡಾ ಅರ್ಪಣಾ ಅವರು ಡಾ.ಕೋಕಿಲಾ ಹೆಗಡೆ ಅವರನ್ನು 21-16 ಮತ್ತು 21-12 ಅಂಕಗಳಿಂದ ಮಣಿಸಿದರು.


40 ವರ್ಷ ಮೇಲ್ಪಟ್ಟ ಡಬಲ್ಸ್ ನಲ್ಲಿ ಬೆಳಗಾವಿಯ ಡಾ.ದೀಪ ಎಂ ಮತ್ತು ಉತ್ತರ ಕನ್ನಡದ ಡಾ. ಅರ್ಪಣಾ ಅವರು ಉತ್ತರ ಕನ್ನಡದ ಡಾ.ಸಂಗೀತಾ ಮತ್ತು ಡಾ.ಕೋಕಿಲಾ ಅವರನ್ನು 21-17, 21-16 ಅಂಕಗಳಿಂದ ಸೋಲಿಸಿದರು.

40 ವರ್ಷ ಕೆಳಗಿನ ಮಿಕ್ಸ್ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ.ಸುರೇಶ್ ಮತ್ತು ಡಾ.ದೀಪಾ ಪಿ ಅವರನ್ನು ನೇರ ಸೆಟ್ ನಿಂದ ಮಣಿಸಿ 21-15, 22-20 ಅಂಕಗಳಿಂದ ವಿಜಯ ಸಾಧಿಸಿದ್ದಾರೆ. 

40 ವರ್ಷ ಕೆಳಗಿನ ಸಿಂಗಲ್ಸ್ ನಲ್ಲಿ ಹುಬ್ಬಳ್ಳಿಯ ಡಾ.ಪೂಜಾ ಅವರು ಬಳ್ಳಾರಿಯ ಡಾ.ದೀಪಾ ಪಿ ಅವರನ್ನು 21-07, 21-05 ಅಂಕಗಳಿಂದ ಮಣಿಸಿ ವಿಜಯಿಯಾದರು. 

ಪುರುಷರ ವಿಭಾಗ: 

40 ವರ್ಷ ಮೇಲ್ಪಟ್ಟ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಡಾ.ರಾಘವ ಭಟ್ ಅವರು, ಶಿವಮೊಗ್ಗದ ಡಾ.ಶೈಲೇಂದ್ರ ಅವರನ್ನು 15-04, 15-05 ಅಂಕಗಳಿಂದ ಮಣಿಸಿದರು.


40 ವರ್ಷದೊಳಗಿನ‌ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ಡಾ.ವಿಕ್ರಂ ಅವರು ಬಳ್ಳಾರಿಯ ಡಾ.ಸುರೇಶ್ ಕುಮಾರ್ ಎಸ್.ಕೆ.ಇವರನ್ನು 21-11, 21-10 ಅಂಕಗಳಿಂದ ಸೋಲಿಸಿ ವಿಜಯಿಯಾದರು. 

40 ವರ್ಷದೊಳಗಿನ ಡಬಲ್ಸ್ ನಲ್ಲಿ ಬೆಂಗಳೂರಿನ ಡಾ.ಶಶಿಧರ ಮತ್ತು ಡಾ ರಾಘವ ಭಟ್ ಅವರು ಶಿವಮೊಗ್ಗದ ಡಾ.ಜೈ ಭಾರತ್ ರೆಡ್ಡಿ ಹಾಗು ಡಾ.ಶೈಲೇಂದ್ರ ಅವರನ್ನು 21-16 ಮತ್ತು 21-11 ಅಂಕಗಳಿಂದ ಮಣಿಸಿದರು.

40 ವರ್ಷ ಮೇಲ್ಪಟ್ಟ ವಿಭಾಗದಲ್ಲೂ ಬೆಂಗಳೂರಿನ‌ ಡಾ.ಶಶಿಧರ ಬಿ.ವಿ ಮತ್ತು ಡಾ.ರಾಘವ ಭಟ್ ಅವರುಗಳು ಡಾ.ಆದರ್ಶನ ಎನ್. ಹಾಗು ಡಾ.ಸುರೇಶ್ ಕುಮಾರ್ ಎಸ್.ಕೆ. ಇವರನ್ನು 21-18, 22-20 ಅಂಕಗಳಿಂದ ಮಣಿಸಿದರು.



40 ವರ್ಷ ಮೇಲ್ಪಟ್ಟ ಮಿಕ್ಸ್ ಡಬಲ್ಸ್ ನಲ್ಲಿ ಡಾ.ಶಶಿಧರ್ ಹಾಗು ಡಾ.ದೀಪಾ ಎಂ ಅವರು ಡಾ.ಶೈಲೇಂದ್ರ ಮತ್ತು ಡಾ.ಕೋಕಿಲಾ ಹೆಗಡೆ ಅವರುಗಳನ್ನು 21-19, 21-18 ಅಂಕಗಳಿಂದ ಮಣಿಸಿದರು. 

ಅಂತಿಮವಾಗಿ ಆಡಿದ ವಿವಿಧ ವಿಭಾಗಗಳ 10 ಪೈನಲ್ ಪಂದ್ಯಗಳಲ್ಲಿ ಬೆಸ್ಟ್ ಆಫ್ 3 ಯಾವು ಆಗಲಿಲ್ಲ. ಎಲ್ಲವೂ ನೇರ ಸೆಟ್ ಗಳಿಂದ ಗೆಲುವು ಆಗಿದ್ದವು. ಅಂದರೆ ಮ್ಯಾಚ್ ಗಳು ಬಹುತೇಖ ಒನ್ ಸೈಡ್ ಆಗಿದ್ದವು ಎನ್ನಬಹುದು. 


 ನಂತರ ಟ್ರೋಪಿ ವಿತರಣೆ ಸಮಾರಂಭ ನಡೆಯಿತು.

ಎಸ್ಪಿ ಡಾ.ಶೋಭಾರಾಣಿ ವಿ.ಜೆ.ಅವರು ವಿನ್ನರ್ ಹಾಗು ರನ್ನರ್ ಗಳಿಗೆ ಟ್ರೋಫಿಗಳನ್ನು ವಿತರಿಸಿದರು. 

ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಮಹೇಶ್ ಚಂದ್ರ, ಖಜಾಂಚಿ ಡಾ. ಸಂಜತ್ ಕುಮಾರ್, ಉಪಾಧ್ಯಕ್ಷ ನರೇಂದ್ರ ಕುಮಾರ್, ಹಿರಿಯ ದಂತ ವೈದ್ಯ ಶೇಷಗಿರಿರಾವ್, 

ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಡಾ.ಮಧುಸೂಧನ ರೆಡ್ಡಿ, ಕಾರ್ಯದರ್ಶಿ ಡಾ.ಶ್ರೀಧರರೆಡ್ಡಿ, ಖಜಾಂಚಿ ಡಾ.ರಾಜೀವ್ ವಿ, ರಾಜ್ಯ ಪ್ರತಿನಿಧಿ ಡಾ.ಮಂಜುನಾಥ, ಡಾ.ವೀರಾರೆಡ್ಡಿ ಪಾಲ್ಗೊಂಡಿದ್ದರು.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ