Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಪ್ಲ್ಯಾಟ್ ಪೂರ್ತಿಗೊಳಿಸಿ ಸೌಧತ್ತಿ ವಕೀಲರಿಗೆ ಕ್ರಯ ಪತ್ರ ಬರೆದುಕೊಡುವಂತೆ ಸ್ಕೈಟೌನ್ ಬಿಲ್ಡ್‍ರ್ಸ್‍ಗೆ ಗ್ರಾಹಕರ ಆಯೋಗದ ಆದೇಶ


ಧಾರವಾಡ ಏ.29: ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ವಕೀಲರಾದ ಭೀಮಪ್ಪ ಹೊಂಗೇಕರ್ ಎಂಬುವವರು ಎದುರುದಾರ ಸ್ಕೈಟೌನ್ ಬಿಲ್ಡ್‍ರಸ್‍ರವರು ಹುಬ್ಬಳ್ಳಿಯ ಸುತಗಟ್ಟಿಯಲ್ಲಿ ನಿರ್ಮಿಸುತ್ತಿದ್ದ ಅಪಾರ್ಟಮೆಂಟನಲ್ಲಿ ರೂ.17,25,000 ಪ್ಲ್ಯಾಟ ಖರೀದಿಸಿದ್ದರು. ಆ ಪೈಕಿ ದೂರುದಾರರು ಒಟ್ಟು ರೂ.11,81,250 ಹಣಎದುರುದಾರ ಬಿಲ್ಡರಗೆ ಮುಂಗಡವಾಗಿಕೊಟ್ಟಿದ್ದರು. ಬಾಕಿ ಹಣ ರೂ.5,43,750 ದೂರುದಾರರು ಪಾವತಿಸಬೇಕಾಗಿತ್ತು. ಕರಾರು ಪತ್ರವಾದ ದಿನಾಂಕದಿಂದ 24 ತಿಂಗಳೊಳಗಾಗಿ ಕಟ್ಟಡದ ಪೂರ್ತಿ ಕೆಲಸ ಮುಗಿಸಿ ಖರೀದಿ ಪತ್ರ ಹಾಕಿಕೊಟ್ಟು ಸ್ವಾಧೀನತೆಕೊಡಬೇಕು ಅಂತಾ ಕರಾರು ಇತ್ತು. 24 ತಿಂಗಳ ಒಳಗಾಗಿ ಕಟ್ಟಡದ ಕೆಲಸ ಮುಗಿಸಿ ಕೊಡದಿದ್ದಲ್ಲಿ ಎದುರುದಾರ, ಬಿಲ್ಡ್‍ರ ತಿಂಗಳಿಗೆ ರೂ.8,000 ರಂತೆ ದೂರುದಾರರಿಗೆ ಬಾಡಿಗೆ ಹಣ ಲೆಕ್ಕ ಹಾಕಿ ಕೊಡಬೇಕು ಅಂತಾ ಷರತ್ತು ಇತ್ತು. 2010 ನೇ ಇಸವಿಯಲ್ಲಿ ಒಪ್ಪಂದಪತ್ರವಾಗಿದ್ದರೂ ಈವರೆಗೆ ಎದುರುದಾರರು ಕಟ್ಟಡ ಪೂರ್ತಿ ಮಾಡಿರಲಿಲ್ಲ. ತನಗೆ ಎದುರುದಾರರು ನೋಂದಣಿ ಪತ್ರ ಬರೆದು ಕೊಟ್ಟಿಲ್ಲ ಹಾಗೂ ಕರಾರಿನಂತೆ ಬಾಡಿಗೆಯನ್ನು ಕೊಟ್ಟಿಲ್ಲ ಅಂತಾ ಹೇಳಿ ಎದುರುದಾರರ ಅಂತಹ ನಡಾವಳಿಕೆಯಿಂದ ತನಗೆ ಮೋಸವಾಗಿದೆ ಮತ್ತು ಅವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಹುಬ್ಬಳ್ಳಿಯ ಸ್ಕೈಟೌನ್ ಬಿಲ್ಡರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:27/11/2024 ರಂದು ದೂರನ್ನು ಸಲ್ಲಿಸಿದ್ದರು.



ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ, ದೂರುದಾರರಿಂದ ರೂ.11,81,250 ಗಳನ್ನು ಮುಂಗಡ ಹಣ ಪಡೆದುಕೊಂಡು 24 ತಿಂಗಳಲ್ಲಿ ಅಪಾರ್ಟಮೆಂಟ್ ಕಟ್ಟುವ ಕೆಲಸ ಮುಗಿಸಿ ಪ್ಲ್ಯಾಟನ್ನು ನೋಂದಣಿ ಮಾಡಿ ಸ್ವಾಧೀನತೆಕೊಡುವುದಾಗಿ ಎದುರುದಾರರು ಕರಾರು ಪತ್ರ ಬರೆದುಕೊಟ್ಟಿದ್ದಾರೆ. ತಪ್ಪಿದ್ದಲ್ಲಿ 24 ತಿಂಗಳ ನಂತರ ಪ್ರತಿ ತಿಂಗಳಿಗೆ ರೂ.8,000 ಯಂತೆ ಬಾಡಿಗೆ ಕೊಡುವುದಾಗಿ ಸಹ ಎದುರುದಾರ, ಬಿಲ್ಡರ್ ಒಪ್ಪಿಕೊಂಡಿದ್ದಾರೆ. 2010 ರಿಂದ ಈಗ ಸುಮಾರು 14 ವರ್ಷ ಕಳೆದರೂ ಎದುರುದಾರು, ಬಿಲ್ಡ್‍ರ್ ಅಪಾರ್ಟಮೆಂಟ್ ಕೆಲಸ ಮುಗಿಸಿಲ್ಲ. ದೂರುದಾರರಿಗೆ ಪ್ಲ್ಯಾಟ ಪೂರ್ತಿಗೊಳಿಸಿ ಖರೀದಿ ಹಾಕಿ ಕೊಟ್ಟಿಲ್ಲ. ಅಲ್ಲದೇ ತಿಂಗಳಿಗೆ ರೂ.8,000 ಯಂತೆ ಬಾಡಿಗೆಕೊಟ್ಟಿಲ್ಲದಿರುವ ಎದುರುದಾರ ಬಿಲ್ಡ್‍ರ್ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಅಲ್ಲದೇ ಅನುಚ್ಚಿತ ವ್ಯಾಪಾರ ಪದ್ಧತಿ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರು ಬಾಕಿ ಹಣ ರೂ.5,43,750 ಎದುರುದಾರರಿಗೆ ಕೊಡಬೇಕು ಅಥವಾ ಆಯೋಗದಲ್ಲಿಡಿಪಾಜಿಟ್ ಮಾಡಬೇಕು. ಆ ನಂತರ ಪ್ಲ್ಯಾಟನಕಾಮಗಾರಿಯನ್ನು ಮುಗಿಸಿ ದೂರುದಾರರಿಗೆಕ್ರಯ ಪತ್ರ ನೋಂದಣಿ ಮಾಡಿಕೊಡಲುಎದುರುದಾರರಾದ ಸ್ಕೈಟೌನ್ ಬಿಲ್ಡರ್ಸ್‍ಗೆಆಯೋಗ ಆದೇಶಿಸಿದೆ.

ತಪ್ಪಿದ್ದಲ್ಲಿದೂರುದಾರರು ಆ ಕಾಮಗಾರಿಯನ್ನುತಮ್ಮ ಸ್ವಂತಖರ್ಚಿನಲ್ಲಿ ಮಾಡಿಸಿ ಅದರ ಮೊತ್ತವನ್ನುಎದುರುದಾರರಿಂದ ಭರಿಸಿಕೊಳ್ಳಬೇಕು ಅಂತಾಆದೇಶದಲ್ಲಿ ತಿಳಿಸಿದೆ. ದಿ:27/11/2024 ರಿಂದಕಾಮಗಾರಿ ಪೂರ್ತಿ ಆಗುವವರೆಗೆ ಎದುರುದಾರರು ತಿಂಗಳಿಗೆ ರೂ.8,000 ರಂತೆ ಬಾಡಿಗೆ ಲೆಕ್ಕ ಹಾಕಿ ಕೊಡಬೇಕು ಅಂತಾ ಆದೇಶವಾಗಿದೆ. ಎದುರುದಾರ ಕ್ರಯ ಪತ್ರ ಮಾಡಿಕೊಡದಿದ್ದಲ್ಲಿ ದೂರುದಾರರು ಕೋರ್ಟ ಕಮೀಷನರ್ ಮುಖಾಂತರ ಪ್ಲ್ಯಾಟನಖರೀದಿ ಪತ್ರ ಮಾಡಿಸಿಕೊಳ್ಳಬೇಕು ಅಂತಾ ಆಯೋಗ ನಿರ್ದೇಶಿಸಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ