Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ....ಡಾಕ್ಟರ್ ಅಮಿದಾ ಫರ್ನಾಂಡಿಸ್

 

ಆಗ ತಾನೇ ಹುಟ್ಟಿದ ನವಜಾತ ಶಿಶುಗಳ ಉಸಿರಾಟ ಕ್ರಿಯೆಯನ್ನು ನಿರ್ವಹಿಸುವ ಕಾರ್ಯವನ್ನು ಯಂತ್ರಗಳು ಮಾಡುವ ಮುನ್ನವೇ ಡಾಕ್ಟರ್ ಅಮಿದಾ ಫರ್ನಾಂಡಿಸ್ ಅವರು ನಮ್ಮ ರಾಷ್ಟ್ರದ ಜನತೆಗೆ ಮಕ್ಕಳನ್ನು ಕಾಳಜಿ ಮಾಡುವುದನ್ನು ಕಲಿಸಿ ಕೊಟ್ಟರು.

ಅತ್ಯಂತ ಜನನಿಬಿಡ ಮುಂಬೈ ಮಹಾನಗರದ ಆಸ್ಪತ್ರೆಯ ವಾರ್ಡುಗಳಲ್ಲಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿರುವ ನವಜಾತ ಶಿಶುಗಳು ತಾಯಿಯ ಹಾಲಿನ ಕೊರತೆಯಿಂದ ಸಾವನ್ನಪ್ಪುತ್ತಿರುವಾಗ ಬೇರೆಯವರು ಊಹಿಸಲಾಗದ ಆಮೂಲಾಗ್ರ ಚಿಂತನೆಯನ್ನು ಹುಟ್ಟು ಹಾಕಿದರು... ಅದುವೇ ತಾಯಿಯ ಎದೆ ಹಾಲಿನ ಬ್ಯಾಂಕ್.

ಕೇವಲ ಸೇವಾ ಮನೋಭಾವದಿಂದ ಮಾತ್ರವಲ್ಲದೆ ನವಜಾತ ಮಕ್ಕಳ ಗೌರವದ, ಘನತೆಯ ಬದುಕಿ ಉಳಿಯುವಿಕೆಗೆ ದೃಷ್ಟಿಯ ಅವಶ್ಯಕತೆಯಿಂದಾಗಿ ಈ ಎದೆ ಹಾಲಿನ ಬ್ಯಾಂಕ್ ಆರಂಭವಾಯಿತು.
ಡಾಕ್ಟರ್ ಅಮೀದಾ ಅವರ ಆ ಒಂದು ಕಾರ್ಯ ಸಾವಿರಾರು ನವಜಾತ ಶಿಶುಗಳ ಮರಣವನ್ನು ತಪ್ಪಿಸಿತು. ನವಜಾತ ಶಿಶುಗಳ ಕಾಳಜಿಯ ನಿಟ್ಟಿನಲ್ಲಿ ಅತ್ಯದ್ಭುತವಾಗಿ ಕಾರ್ಯನಿರ್ವಹಿಸಿದ ಈ ಕ್ರಿಯೆಯೂ ಆಕೆಗೆ ಭಾರತದ ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ ಎಂದು ಗೌರವಿಸಲು ಕಾರಣವಾಯಿತು.
ಆ ಸಮಯದಲ್ಲಿ ಹುಟ್ಟುತ್ತಿದ್ದ ಮಕ್ಕಳಲ್ಲಿ ನೂರಕ್ಕೆ 70 ಮಕ್ಕಳು ಕೇವಲ ಎದೆ ಹಾಲಿನ ಕೊರತೆಯಿಂದ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮರಣವನ್ನು ಅಪ್ಪಲು ಕಾರಣವಾಗಿದ್ದು ಸುಮಾರು 2000ಕ್ಕೂ ಹೆಚ್ಚು ನರ್ಸಿಂಗ್‌ ಸಿಬ್ಬಂದಿಯನ್ನು ಅಮೀದಾ ತರಬೇತುಗೊಳಿಸಿ ಕಾರ್ಯನಿರ್ವಹಿಸಿದ ಕಾರಣ ಶೇಕಡ 70ರಷ್ಟು ಇದ್ದ ಶಿಶುಮರಣದ ಪ್ರಮಾಣವು ಕೆಲವೇ ದಿನಗಳಲ್ಲಿ ಶೇಕಡ 12ಕ್ಕೆ ಇಳಿಯಿತು.
1942- 43 ರಲ್ಲಿ ಜನಿಸಿದ ಅಮೀದ ಫರ್ನಾಂಡಿಸ್ ಅವರ ತಂದೆ ಅರ್ಮಾಂಡೋ ಮೆನೇಜಸ್. ಸರ್ಕಾರಿ ನೌಕರರಾಗಿದ್ದ ಅವರು ಕವಿ, ಲೇಖಕರು ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಗುರುತಿಸಿಕೊಂಡ ವ್ಯಕ್ತಿಯಾಗಿದ್ದರು. ಇಂಗ್ಲಿಷ್ ನಲ್ಲಿ ಕಥೆ, ಕವನಗಳನ್ನು ಬರೆಯುತ್ತಿದ್ದ ಅವರು ಧಾರವಾಡದಲ್ಲಿ ವಾಸವಾಗಿದ್ದರು.
ಅಮೀದ ಅವರು ತಮ್ಮ ವೈದ್ಯಕೀಯ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿದರು. ಮುಂಬೈಯ ಕೆಇಎಮ್ ಆಸ್ಪತ್ರೆಯಲ್ಲಿ ಆಕೆ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು.
1977 ರಲ್ಲಿ ಮುಂಬೈಯ ಮುನ್ಸಿಪಲ್ ಆಸ್ಪತ್ರೆಗೆ ಆಕೆ ನವಜಾತ ಶಿಶು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಆ ಸಮಯದಲ್ಲಿ ಆಕೆ ಅತ್ಯಂತ ಕುತೂಹಲದಿಂದ ಗಮನಿಸಿದ್ದು ಸಾಕಷ್ಟು ಜನ ಮಹಿಳೆಯರು ತಮ್ಮ ದೈಹಿಕ ಅನಾರೋಗ್ಯ ಹಾಗೂ ಅಶಕ್ತತೆಯ ಕಾರಣದಿಂದ ಮಕ್ಕಳಿಗೆ ತಮ್ಮ ಎದೆ ಹಾಲನ್ನು ಕುಡಿಸಲು ಸಾಧ್ಯವಾಗದೆ ಇರುವುದನ್ನು. ತಾಯಿಯ ಹಾಲಿನ ಬದಲಾಗಿ ಹಸುವಿನ ಹಾಲನ್ನು ಕುಡಿಸುವ ಬಹಳಷ್ಟು ಜನರ ಪ್ರಯತ್ನ ಕೊಂಚಮಟ್ಟಿಗೆ ಸಫಲವಾದರೂ ಸೋಂಕುಗಳಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ.ಇದನ್ನು ಮನಗಂಡ ಅಮೀದಾ ಮಕ್ಕಳಿಗಾಗಿ ಹಾಲಿನ ಬ್ಯಾಂಕನ್ನು ಸ್ಥಾಪಿಸಲು ಯೋಚಿಸಿದರು. ಪ್ರಾರಂಭದಲ್ಲಿ ಆಕೆಯ ಈ ಮಾತನ್ನು ಅಷ್ಟಾಗಿ ಯಾರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಆದರೆ ಏರುತ್ತಿರುವ ಶಿಶು ಮರಣದಿಂದ ಚಿಂತಿತಳಾದ ಆಕೆ ತನ್ನ ಪ್ರಯತ್ನವನ್ನು ಕೈ ಬಿಡಲೇ ಇಲ್ಲ

ಮುಂಬೈಯ ಲೋಕಮಾನ್ಯ ತಿಲಕ ಮುನ್ಸಿಪಾಲಿಟಿ ಆಸ್ಪತ್ರೆಯಲ್ಲಿ (ಸಿಯಾನ್ ಆಸ್ಪತ್ರೆ) ಏಷ್ಯಾ ಖಂಡದ ಮೊದಲ ಮಹಿಳ ಎದೆ ಹಾಲಿನ ಬ್ಯಾಂಕನ್ನು ಆಕೆ ಸ್ಥಾಪಿಸಿದರು. ಈ ಎದೆ ಹಾಲಿನ ಬ್ಯಾಂಕಿನಲ್ಲಿ ಮಗುವಿನ ಹಸಿವನ್ನು ಪೂರೈಸಲು ಅತ್ಯಗತ್ಯವಾದ ತಾಯಿಯ ಹಾಲನ್ನು ತಾಯಂದಿರಿಂದ ಸಂಗ್ರಹಿಸಿ ಅದನ್ನು ಪಾಶ್ಚರೀಕರಣದ ಮೂಲಕ ಸುರಕ್ಷಿತವಾಗಿರಿಸಿ ತಾಯಿಯ ಎದೆ ಹಾಲು ಲಭ್ಯವಿಲ್ಲದ, ಅವಧಿ ಮುನ್ನವೇ ಹುಟ್ಟಿದ ಮಕ್ಕಳಿಗೆ ಕುಡಿಸಲಾಯಿತು. ಪ್ರಾರಂಭದಲ್ಲಿ ಸಾಂಪ್ರದಾಯಿಕ ಮನಸ್ಥಿತಿಯ ಸಾಕಷ್ಟು ಪ್ರತಿರೋಧಗಳು ಬಂದರೂ ಕೂಡ ನಂತರದ ದಿನಗಳಲ್ಲಿ ಮಕ್ಕಳ ಆರೋಗ್ಯ ಸುಧಾರಣೆಯಾಗಿ ಈ ಯೋಜನೆಯು ಯಶಸ್ವಿಯಾದಾಗ ಎಲ್ಲರೂ ಈ ಯೋಜನೆಯನ್ನು ಪ್ರಶಂಶಿಸಲು ಆರಂಭಿಸಿದರು.
ಮುಂದೆ ನಿವೃತ್ತಿಯ ನಂತರ 1999 ರಲ್ಲಿ ಅಮೀದಾ ಫರ್ನಾಂಡಿಸ್ ಅವರು ಸ್ನೇಹ (ಸೊಸೈಟಿ ಫಾರ್ ನ್ಯೂಟ್ರಿಷನ್ ಎಜುಕೇಶನ್ ಅಂಡ್ ಹೆಲ್ತ್ ಆಕ್ಷನ್) ಎಂಬ
ಸಂಸ್ಥೆ ಒಂದನ್ನು ಸ್ಥಾಪಿಸಿ ಬಡತನದ ಹಿನ್ನೆಲೆ ಹಾಗೂ ಅರಿವಿನ ಕೊರತೆಯನ್ನು ಹೊಂದಿದ ಮುಂಬೈಯ ಕೊಳಗೇರಿಗಳ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸುಧಾರಣೆಯ ಮೇಲೆ ಹೆಚ್ಚಿನ ಗಮನಹರಿಸಿ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದರು.

ಮುಂಬೈಯ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ನ ಅಧ್ಯಕ್ಷರಾಗಿ ಆಕೆ ಆಯ್ಕೆಯಾದರು.
ಇದೀಗ ಮಹಿಳೆಯರ ಹಾಗೂ ನವಜಾತ ಶಿಶುಗಳ ಆರೋಗ್ಯ ಸುಧಾರಣೆಯಲ್ಲಿ ಆಕೆ ವಹಿಸಿದ ಕಾಳಜಿಯ ಕಾರಣವಾಗಿ ಸಾವಿರಾರು ಮಕ್ಕಳು ಆರೋಗ್ಯಪೂರ್ಣವಾಗಿ ಬದುಕುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಸೇವೆಯನ್ನು ಪರಿಗಣಿಸಿ 2026ರಲ್ಲಿ ಆಕೆಗೆ ಭಾರತ ದೇಶದ ಘನ ಸರ್ಕಾರವು ಆಕೆಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ.

ಭಾರತೀಯ ಶಿಶು ಶಾಸ್ತ್ರದ ಫೆಲೋಶಿಪ್ ಐ ಎ ಪಿ ಎಫ್ ಐ ಎ ಬಿ 2005ರ ಪ್ರಶಸ್ತಿಯನ್ನು ಆಕೆಗೆ ಸಂದಿದ್ದು, 2004ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾ ಟ್ರಿಕ್ಸ್ ಅವಾರ್ಡ್ ಅನ್ನು ಆಕೆ ಪಡೆದಿದ್ದಾರೆ ರಾಷ್ಟ್ರೀಯ ನವಜಾತ ಶಿಶುಗಳ ಫೋರಂಗೆ ಅಧ್ಯಕ್ಷೆಯಾಗಿರುವ ಆಕೆ 2004ರ ಅಶೋಕ ಫೆಲೋ ಪುರಸ್ಕಾರವನ್ನು ಗಳಿಸಿದ್ದು
ಮುಂಬೈಯ ಬಾಂಧ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಇಂದಿಗೂ ಆಕೆ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಸಕಾರಾತ್ಮಕ ಹಾಗೂ ಉಪಶಮನಾತ್ಮಕ ಚಿಕಿತ್ಸೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅವರ ಸೇವೆ ನೂರಾರು ಕಾಲ ಹೀಗೆಯೇ ಮುಂದುವರೆಯಲಿ ಎಂದು ಆಶಿಸುವ

ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ