ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS ) STSS ಎಂಬುವುದು ಅಪರೂಪದ ಬ್ಯಾಕ್ಟಿರಿಯಾ ಸೋಂಕು ಆಗಿದೆ. ಇದು ರಕ್ತನಾಳದ ಒಳಗಡೆ ಹೊಕ್ಕಿ ದೇಹದಲ್ಲಿ ವಿಷಾಂಶ ಹಚ್ಚಿಸಿ ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ತುಂಬಾನೇ ಕಷ್ಟವಾಗುವುದು.
STSS ಕಾಯಿಲೆಯ ಲಕ್ಷಣಗಳು ಚಳಿ ಜ್ವರ, ಮೈಕೈ ನೋವು, ವಾಂತಿ ಈ ಬಗೆಯ ಲಕ್ಷಣಗಳು 24-48 ಗಂಟೆಯ ಒಳಗಡೆ ಉಂಟಾಗುವುದು. ವಯಸ್ಸಾದವರಿಗೆ ಊತ, ಜ್ವರ ಕಡಿಮೆ ರಕ್ತದೊತ್ತಡ, ಅಂಗಾಂಗಗಳ ವೈಫಲ್ಯ, ಅತ್ಯಧಿಕ ಹೃದಯ ಬಡಿತ, ತೀವ್ರ ಉಸಿರಾಟ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಮಕ್ಕಳಲ್ಲಿ ಗಂಟಲು ಕೆರೆತ ನೋವು ಕಂಡು ಬಂದರೆ, ದೊಡ್ಡವರಲ್ಲಿ ಸ್ನಾಯುಗಳಲ್ಲಿ ನೋವು, ಊತ, ಜ್ವರ, ಕಡಿಮೆ ರಕ್ತದೊತ್ತಡ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಇದರಿಂದಾಗಿ ಉಸಿರಾಟದಲ್ಲಿ ತೊಂದರೆ , ಅಂಗಾಂಗಗಳ ವೈಫಲ್ಯ ಉಂಟಾಗುವುದು. 50 ವರ್ಷ ಮೇಲ್ಪಟ್ಟವರಲ್ಲಿ ಸಾವು ಕೂಡ ಸಂಭವಿಸಲಿದೆ.ಈ ಕಾಯಿಲೆ ಬಂದ ತಕ್ಷಣ ಕೂಡಲೇ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ಕಡಿಮೆಯಾಗುವುದು. ಈ ಸೋಂಕು ತಡೆಗಟ್ಟುವುದು ಹೇಗೆ? ಶುಚಿತ್ವ ಕಡೆಗೆ ತುಂಬಾನೇ ಗಮನಹರಿಸಬೇಕು. ಸೋಪು ಹಚ್ಚಿ ಚೆನ್ನಾಗಿ ಕೈ ತೊಳೆಯಿರಿ. ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಡ್ಡಹಿಡಿಯಿರಿ.
ಪತ್ತೆಹಚ್ಚುವುದು ಹೇಗೆ? STSS ಬಗ್ಗೆ ಅನೇಕ ರೀತಿಯಲ್ಲಿ ಪರೀಕ್ಷೆ ಮಾಡಬೇಕು. ರಕ್ತ ಪರೀಕ್ಷೆ ಮಾಡಲಾಗುವುದು. ಈ ಸೋಂಕು ತಗುಲಿದರೆ ಕಿಡ್ನಿ, ಲಿವರ್ ಈ ಬಗೆಯ ಅಂಗಾಂಗಗಳ ವೈಫಲ್ಯ ಉಂಟಾಗಿರುತ್ತದೆ. ಚಿಕಿತ್ಸೆಯೇನು? ಬ್ಯಾಕ್ಟಿರಿಯಾ ಕೊಲ್ಲಲು antibiotics ಅನ್ನು ಐವಿ ಮೂಲಕ ನೀಡಲಾಗುವುದು, ರೋಗಿಯ ದೇಹದಲ್ಲಿ ರಕ್ತದೊತ್ತಡ ಸರಿಯಾಗಿದ್ದರೆ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಇನ್ನು ಕೆಲವು ಕೇಸ್ಗಳಲ್ಲಿ ಸರ್ಜರಿ ಕೂಡ ಬೇಕಾಗುವುದು. ಇದರಿಂದಾಗಿ ಈ ಸೋಂಕಿನಿಂದ ಸಾವು ಸಂಭವಿಸುವುದನ್ನು ತಡೆಗಟ್ಟಬಹುದು.
Also read