Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ನಮ್ಮ ಸಂವಿಧಾನ... ನಮ್ಮಹೆಮ್ಮೆ

 

ಇಡೀ ಪ್ರಪಂಚದ ದೇಶಗಳಲ್ಲಿ ಇರುವ ಸಂವಿಧಾನಿಕ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಓದಿ ಅರಗಿಸಿಕೊಂಡು
ನಮ್ಮ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಔದ್ಯೋಗಿಕ ಬೆಳವಣಿಗೆಗೆ ಅನುವಾಗುವಂತೆ ಭಾರತದ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದ ಸಮಿತಿಯು ರಚಿಸಿದ್ದು ಅದರ ಕರಡು ಪ್ರತಿಯನ್ನು 1949 ರ ನವೆಂಬರ್ 26ರಂದು ಅಂಗೀಕರಿಸಲಾಯಿತು. ಈ ದಿನವನ್ನು ನೆನಪಿಸುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಭಾರತದ ಸರ್ವ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ವಿಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ, ಭಕ್ತಿ ಮತ್ತು ಆರಾಧನೆಯಲ್ಲಿ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ನಮ್ಮ ಸಂವಿಧಾನವು ಖಾತ್ರಿಪಡಿಸುತ್ತದೆ. ರಾಷ್ಟ್ರೀಯ ಸದ್ಭಾವನೆಯನ್ನು, ಭಾವೈಕ್ಯತೆಯನ್ನು ನಮ್ಮ ಸಂವಿಧಾನವು ಉತ್ತೇಜಿಸುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಸಮಾನ ಬದುಕುವ ಹಕ್ಕುಗಳನ್ನು ನಮ್ಮ ಸಂವಿಧಾನವು ನಮಗೆ ನೀಡಿದೆ.

ನಮ್ಮ ಸಂವಿಧಾನವು ನಮಗೆ ಸಾರ್ವಭೌಮತ್ವವನ್ನು ಹೊಂದಿರುವ, ಸಮಾಜವಾದವನ್ನು, ಜಾತ್ಯತೀತವಾದವನ್ನು ನಮಗೆ ನೀಡಿರುವ ಪ್ರಜಾ ಸತ್ಯಾತ್ಮಕ ಗಣರಾಜ್ಯವಾಗಿದೆ. ಭಾರತ ದೇಶದ ಪ್ರತಿಯೊಬ್ಬ ಪ್ರಜೆಯು ನಮ್ಮ ಸಂವಿಧಾನದ ಕಾನೂನಿನ ಅಡಿಯಲ್ಲಿ ಸಮಾನ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ಹೊಂದಿದ್ದಾನೆ.
ಒಟ್ಟು ಆರು ಮೂಲಭೂತ ಹಕ್ಕುಗಳು ಹಾಗೂ ಹತ್ತು ಮೂಲಭೂತ ಕರ್ತವ್ಯಗಳನ್ನು ನಾವು ನಿರ್ವಹಿಸಲೇಬೇಕು.

ನಮ್ಮ ಸಂವಿಧಾನವು ನಮಗೆ ವೈಚಾರಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ, ನಂಬಿಕೆಯ ಸ್ವಾತಂತ್ರ್ಯ, ಭಕ್ತಿ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಕೊಡ ಮಾಡಿದೆ. ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ನೀಡಿರುವ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಾನು ನಂಬಿಕೊಂಡಿರುವ ದೈವವನ್ನು ಪೂಜಿಸುವ ಆರಾಧಿಸುವ ಹಕ್ಕನ್ನು ಹೊಂದಿರುವುದರ ಜೊತೆ ಜೊತೆಗೆ
ಅನ್ಯ ಧರ್ಮಗಳ ಕುರಿತು ಸಹಿಷ್ಣುತಾ ಭಾವವನ್ನು ಹೊಂದಿರಲೇಬೇಕಾದ ಕರ್ತವ್ಯವನ್ನು ನಿರ್ವಹಿಸಲೇಬೇಕು.

ವೈಯುಕ್ತಿಕ ಘನತೆ, ದೇಶದ ಒಗ್ಗಟ್ಟು ಹಾಗೂ ಐಕ್ಯತೆಯನ್ನು ಕಾಯಲು ಹೊಂದಿರುವ ಹಕ್ಕಿನ ಜೊತೆ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆಗೆ ಅತ್ಯವಶ್ಯಕವಾದ ಸಹೋದರ ಭಾವವನ್ನು ಹೊಂದಿರಲೇಬೇಕಾದ ಕರ್ತವ್ಯವನ್ನು ಪಾಲಿಸಲೇಬೇಕು.ಸರ್ವ ಧರ್ಮ ಸಮಾನತೆಯನ್ನು ಖಾತ್ರಿಪಡಿಸುವ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ.

ನಮ್ಮ ಸಂವಿಧಾನದ ಪ್ರಮುಖ ಅಂಶಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಮ್ಮ ನಾಗರಿಕರಲ್ಲಿ ಸಂವಿಧಾನದ ಮೌಲ್ಯಗಳ ಅರಿವನ್ನು ಮೂಡಿಸುವಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2015 ರಿಂದ ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಿಸಲು ಘೋಷಿಸಿತು. ಇದರ ಪರಿಣಾಮವಾಗಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ ಪ್ರಜಾ ಸತ್ತಾತ್ಮಕ ತತ್ವಗಳನ್ನು ಸ್ಮರಿಸಲು ನಮ್ಮ ಸಂವಿಧಾನ ನಮ್ಮ ಗೌರವ ಎಂಬ ಅಭಿಯಾನವನ್ನು ಪ್ರಾರಂಭಿಸಲಾಯಿತು.

ಕಳೆದ ವರ್ಷ ನಮ್ಮ ಭಾರತ ದೇಶದ ಗಣ್ಯ ಉಪರಾಷ್ಟ್ರಪತಿಗಳು ಈ ಅಭಯಾನವನ್ನು ದೆಹಲಿಯ ಬಿಆರ್ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಜನವರಿ 24 2024 ರಂದು ಆರಂಭಿಸಿದ್ದು ನಮ್ಮ ಸಂವಿಧಾನದ ಮೂಲಭೂತ ತತ್ವಗಳು ಪ್ರತಿ ಭಾರತೀಯನ ಮನದಾಳದ ಧ್ವನಿಯಾಗಿ ಹೊರಹೊಮ್ಮಬೇಕು ಎಂಬ ಆಶಯ ಈ ಅಭಿಯಾನದ್ದು.

ಸಾಂವಿಧಾನಿಕ ಜಾಗೃತಿಯನ್ನು ನಿರ್ಮಿಸುವುದು.... ಸಂವಿಧಾನದ ಪ್ರಮುಖ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಹಾಗೂ ಸಂವಿಧಾನವು ಉತ್ತೇಜಿಸುವ ನ್ಯಾಯ ಸಮಾನತೆ ಸ್ವಾತಂತ್ರ್ಯ ಮತ್ತು ಭಾತೃತ್ವದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಲು ಕಾರ್ಯಕ್ರಮಗಳನ್ನು, ವಿಚಾರಗೋಷ್ಠಿಗಳನ್ನು ಜಾತಾ ಗಳನ್ನು ಆಯೋಜಿಸುವುದು ಈ ಕಾರ್ಯಕ್ರಮದ ಉದ್ದೇಶ.

ಕಾನೂನು ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಉತ್ತೇಜಿಸುವುದು... ಸಂವಿಧಾನವು ನಮಗೆ ಕೊಡ ಮಾಡಿರುವ ಸಮಾನತೆಯ ಹಕ್ಕು, ವಾಕ್ ಸ್ವಾತಂತ್ರ್ಯದ ಹಕ್ಕು ಹಾಗೂ ನ್ಯಾಯಯುತ ವಿಚಾರಣೆಯ ಹಕ್ಕಿನಂತಹ ಮೂಲಭೂತ ಹಕ್ಕುಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಿ ಮಾತನಾಡಲು ನಾಗರಿಕರನ್ನು ಪ್ರೋತ್ಸಾಹಿಸುವುದು

ಎಲ್ಲರಿಗೂ ನ್ಯಾಯ.... ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯವೂ ಲಭ್ಯವಾಗುವಂತೆ ಕಾನೂನು ಸೇವೆಯ ಮೂಲಕ ಹಕ್ಕೊತ್ತಾಯ ಮಾಡುವುದು.

ನವ ಭಾರತ ನವ ಸಂಕಲ್ಪ.... ಸಂವಿಧಾನವು ನಮಗೆ ಕೊಡ ಮಾಡಿರುವ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಪಾಲಿಸುವ ಮೂಲಕ ಅಭಿವೃದ್ಧಿಯ ಉತ್ತೇಜಿಸುವುದು.
ಸಂಕಲ್ಪ ಸಾಕ್ಷರಣ, ಪಂಚಪ್ರಾಣ ರಂಗೋತ್ಸವ ಪಂಚಪ್ರಾಣ ಅನುಭವ ಹಾಗೂ ಸಂವಿಧಾನದ ಕುರಿತಾದ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಂವಿಧಾನದ ಕುರಿತಾದ ಮಾಹಿತಿಯನ್ನು ಜನರಿಗೆ ನೀಡುವುದು.

ಸಂವಿಧಾನ ವಿಧಿಯ ಜಾಗೃತಿ ಅಭಯಾನವನ್ನು ಆಯೋಜಿಸುವ ಮೂಲಕ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ನಾಗರಿಕರಿಗೆ ಅವರ ಹಕ್ಕುಗಳ ಕುರಿತಾದ ಶಿಕ್ಷಣ ನೀಡುವುದು. ಸಾಮಾಜಿಕ ಕಲ್ಯಾಣದ ಲಾಭಗಳು, ಸಕಾರಾತ್ಮಕ ಕ್ರಮಗಳು, ಕಾನೂನಿನ ರಕ್ಷಣೆ ಹಾಗೂ ಕಾನೂನಿನ ಅಡಿಯಲ್ಲಿ ನಾಗರಿಕರು ಹೊಂದಿರುವ ವಿವಿಧ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುವುದು.
ಗುಣಮಟ್ಟದ ಕಾನೂನು ನೆರವು ನೀಡುವಲ್ಲಿ ದಿಶಾ ಅಭಿಯಾನವನ್ನು, ಉಚಿತ ಕಾನೂನು ಸೇವೆಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದು.

ಭಾರತದ ಸಂವಿಧಾನದ ಪೀಠಿಕೆಯು ನಮಗೆ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿ ಗೌರವ, ವೇತನ, ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢ ಸಂಕಲ್ಪ ಮಾಡಿ 1949 ನೇ ಇಸವಿಯ ನವಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ

ಎಂಬ ಸಂವಿಧಾನ ಪೀಠಿಕೆಯನ್ನು ಪ್ರತಿ ಶಾಲೆ ಕಾಲೇಜು ಸಂಘ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬೋಧಿಸಲಾಗುತ್ತದೆ.

ಸಂವಿಧಾನದ ಮಹತ್ವವನ್ನು ಎತ್ತಿ ಹಿಡಿಯುವ ಎಲ್ಲ ನಾಗರಿಕರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು

ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ