ಇಬ್ಬರು ಕೈ ಜೋಡಿಸಿದಾಗಲೇ ಆಗುವುದು ಚಪ್ಪಾಳೆ.
ನಮ್ಮ ಶ್ರಮಕ್ಕೆ ನೀವು ಕೊಟ್ಟ ಸಂಬಳ,
ನಮಗೆ ನಮ್ಮ ಕುಟುಂಬ ಚೆನ್ನಾಗಿ ನೋಡಿಕೊಳ್ಳುವ ಹಂಬಲ.
ನೀವು ಇರದಿದ್ದರೆ ನಾವು ಬರುತ್ತಿದ್ದೆವು ಬೀದಿಗೆ,
ನಾವಿರದಿದ್ದರೆ ಏರುತ್ತಿರಲಿಲ್ಲ ನೀವು
ಬಹು ಮಹಡಿಗಳ ಮಾಳಿಗೆ.
ಮಳೆ,ಗಾಳಿ,ಬಿಸಿಲೆನ್ನದೆ ಹಿಡಿವೆವು ಕೈಯಲ್ಲಿ ಪುಟ್ಟಿ,
ಖಾರ ರೊಟ್ಟಿ ತಿಂದು ದುಡಿಯಲು ಆಗೀವಿ ಗಟ್ಟಿ.
ಮಕ್ಕಳ ಭವಿಷ್ಯದ ಕನಸ ಕಾಣುತ್ತಾ,
ದುಡಿಯುತ್ತಿದ್ದೇವೆ ನಿಮ್ಮಗಳ ಸುತ್ತ.
ನಿಮಗಿರಲಿ ಉದಾರ ಮನಸ್ಸಿನ ಹಸ್ತ.
ನಮ್ಮಂತೆ ನಮ್ಮ ಮಕ್ಕಳು ಆಗುವದು ಬೇಡ,
ಶಿಕ್ಷಣ ಕಲಿತು ಅವರು ಉದ್ದಾರ ಆಗಬೇಕು ನೋಡ.
ಬರದಿರಲಿ ಅವರಿಗೆ ನಮ್ಮ ಪಾಡ,
ಕಾರ್ಮಿಕರೆಂದರೆ ಪಶುಗಳಲ್ಲ ಕಾಣಾ.
ದುಡಿಮೆಯೇ ದೇವರೆಂದು ನಂಬಿದವರು ನಾವು ,
ದುಡಿಯುವವರನ್ನು ಮನುಷ್ಯರಂತೆ ಕಾಣಬೇಕು ನೀವು.
ನಾವು ಕಟ್ಟದಿದ್ದರೆ ಮಹಡಿಗಳ
ಹುಡುಕಬೇಕಿತ್ತು ನೀವು
ಊರ ಹೊರಗಿನ ಕೆರೆ ಕಟ್ಟೆಗಳ.
ನಮಗೂ ಜೀವವಿದೆಯೆಂಬ ಅರಿವಿರಲಿ ನಿಮಗೆ,
ಖಂಡಿತ ನಿಮ್ಮ ಮೇಲೆ ಬರುತ್ತೆ ಭಯ,ಭಕ್ತಿ,ಪ್ರೀತಿ ನಮಗೆ.
ದುಡ್ಡೇ ಶಾಶ್ವತವಲ್ಲ ಎಲ್ಲರಿಗೂ,
ಮಾನವೀಯತೆ ಮುಖ್ಯ ಪ್ರತಿಯೊಬ್ಬರಿಗೂ.

ಶ್ರೀಮತಿ :ಉಮಾ ಗವೀಶ ಕಲ್ಮಠ. ಶಿಕ್ಷಕಿ
ಸರಕಾರಿ ಪ್ರೌಢಶಾಲೆ ಹಟ್ಟಿ (ಅಳವಂಡಿ )ಕೊಪ್ಪಳ
Also read