Press ID & Credential Portal
Apply / Verify  ➔
LIVE TV ಸ್ಥಳೀಯಅಪರಾಧರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯರಾಜಕೀಯವಾಣಿಜ್ಯಶಿಕ್ಷಣಮನರಂಜನೆಕ್ರೀಡೆಆರೋಗ್ಯವಿಶೇಷ ಲೇಖನಪ್ರವಾಸಅಡುಗೆ
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
ಸ್ಥಳೀಯ ಸುದ್ದಿ

ಪೂರ್ತಿ ಮರುಪಾವತಿ ಮಾಡಿದರೂ ಸಾಲ ವಸೂಲಾತಿ ನಿಲ್ಲಿಸದ ಧಾರವಾಡದ ಟಾಟಾ ಕ್ಯಾಪಿಟಲ್ ಫೈನಾನ್ಸ್‍ಗೆ ದಂಡ ವಿಧಿಸಿ ಮತ್ತು ಪರಿಹಾರ ನೀಡಲು ಆಯೋಗ ಆದೇಶ





ಧಾರವಾಡ ಮಾ.10: ಧಾರವಾಡ ದಯಲಿಗಾರ ಓಣಿ ನಿವಾಸಿ ಅಫ್ರೀನ್ ದಫೇದಾರ ರವರು ದ್ವೀಚಕ್ರ ವಾಹನ ಖರೀದಿಸಲು ಧಾರವಾಡದ ಟಾಟಾಕ್ಯಾಪಿಟಲ್ ಫೈನಾನ್ಸ್ ನಿಂದ ದಿ:21/09/2019ರಂದು ರೂ.70,635 ಸಾಲ ಪಡೆದಿದ್ದರು. ಸಾಲ ಮರುಪಾವತಿ ನಿಯಮದಂತೆ ತಿಂಗಳಿಗೆ ರೂ.2,571 ರಂತೆ ಅವರು 42 ಕಂತುಗಳಲ್ಲಿ ದಿ:03/09/2019 ರಿಂದ ದಿ:03/04/2024ರವರೆಗೆ ಸಾಲ ಮರುಪಾವತಿ ಮಾಡಿದ್ದರು. ಪೂರ್ತಿ ಸಾಲ ಮರುಪಾವತಿಯಾಗಿದೆ ಮತ್ತು ದೂರುದಾರರಿಂದ ಯಾವುದೇ ಹಣ ಬರುವುದು ಬಾಕಿ ಇಲ್ಲಅಂತಾ ದಿ:17/04/2023ರಂದು ಎದುರುದಾರ ಫೈನಾನ್ಸ್ ನವರು ಆರ್.ಟಿ.ಓ ಕಚೇರಿಗೆ ಮಾಹಿತಿ ನೀಡಿದ್ದರು. ಪೂರ್ತಿ ಸಾಲ ಮರುಪಾವತಿ ಆಗಿದ್ದರೂ ದಿ:17/04/2023ರ ನಂತರ ದಿ:08/10/2024ರವರೆಗೆ ದೂರುದಾರರ ಕೆನರಾ ಬ್ಯಾಂಕಿನ ಎಸ್.ಬಿ. ಖಾತೆಯಿಂದ ಪ್ರತಿ ತಿಂಗಳು ಈ.ಸಿ.ಎಸ್. ಮರುಪಾವತಿ ಆಗುತ್ತಿತ್ತು. ಅದನ್ನು ನಿಲ್ಲಿಸುವಂತೆ ಹಲವುಬಾರಿ ದೂರುದಾರರು ಎದುರುದಾರರಿಗೆ ವಿನಂತಿಸಿದಳು. ವಕೀಲರ ಮೂಲಕ ಕಾನೂನು ಬದ್ಧ ನೋಟಿಸನ್ನು ಕೊಡಿಸಿದಳು. ಆದರೂ ಎದುರುದಾರ ಫೈನಾನ್ಸ್ ನವರು ಈ ಸಿ.ಎಸ್. ಮರುಪಾವತಿ ನಿಲ್ಲಿಸಿರಲಿಲ್ಲ. ಅಂತಹ ಅವರ ವರ್ತನೆ/ಕ್ರಮ ಬ್ಯಾಂಕಿನ ನಿಯಮಾವಳಿಗೆ ವಿರುದ್ಧವಾದುದು ಹಾಗೂ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:24/04/2024ರಂದು ದೂರು ದಾರಳು ಎದುರುದಾರ ಟಾಟಾ ಕ್ಯಾಪಿಟಲ್ ಫೈನಾನ್ಸ್ ನವರ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.



ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು ದೂರುದಾರರ ಬ್ಯಾಂಕಿನ ಅಕೌಂಟ ಸ್ಟೇಟ್ ಮೆಂಟಗಳನ್ನು ಪರಿಶೀಲಿಸಿ ದಿ:19/04/2023ಕ್ಕೆ ದೂರುದಾರಳು ಪೂರ್ತಿ ಸಾಲದ ಹಣ ಮರುಪಾವತಿ ಮಾಡಿದ್ದಾಳೆ. ಈ ಬಗ್ಗೆ ದಿ:19/04/2023ರಂದು ಎದುರುದಾರ ಫೈನಾನ್ಸ್ ನವರು ದೂರುದಾರರಿಗೆ ಎನ್.ಓ.ಸಿ. ಕೊಟ್ಟಿದ್ದಾರೆ. ಆದರೂ ದೂರುದಾರರ ಎಸ್.ಬಿ. ಖಾತೆಯಿಂದ ಈ.ಸಿ.ಎಸ್. ಮರುಪಾವತಿ ದಿ:08/10/2024 ರವರೆಗೆ ಮುಂದುವರಿದಿರುವುದು ಬ್ಯಾಂಕು ಹಾಗೂ ರಿಸರ್ವ ಬ್ಯಾಂಕಿನ ನಿಯಮಾವಳಿಗೆ ವಿರುದ್ಧವಾಗಿದೆ. ಅಂತಹ ಎದುರುದಾರ ಟಾಟಾ ಕ್ಯಾಪಿಟಲ್ ಫೈನಾನ್ಸ್ ನವರ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಅಲ್ಲದೇ ಅವರ ಅನುಚ್ಚಿತ ವ್ಯಾಪಾರ ಪದ್ಧತಿಯನ್ನು ಎತ್ತಿ ತೋರಿಸುತ್ತದೆ ಅಂತಾ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.



ದೂರುದಾರರಿಂದ ಒಟ್ಟು ರೂ.24,603 ಗಳನ್ನು ಹೆಚ್ಚುವರಿಯಾಗಿ ಎದುರುದಾರರು ವಸೂಲಿ ಮಾಡಿದ್ದಾರೆ. ಸದರಿ ಹಣ ರೂ.24,603 ಮತ್ತು ಅದರ ಮೇಲೆ ಶೇ12 ದಿ:01/02/2024 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಹಿಂದಿರುಗಿಸುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರರು ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಎದುರುದಾರ ಧಾರವಾಡದ ಟಾಟಾ ಕ್ಯಾಪಿಟಲ್ ಪೈನಾನ್ಸ್‍ನವರಿಗೆ ಆದೇಶಿಸಿದೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನಸಿರುಗುಪ್ಪ–ಅರಳಿಗನೂರು ಬಸ್‌ಗಳಲ್ಲಿ ಜನಜಂಗುಳಿ ಜೀವದ ಹಂಗು ತೊರೆದು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣಕೊಂಚಿಗೇರಿಯಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಒನ್ ಮಂತ್ ಒನ್ ವಿಸಿಟ್: ಕೇಂದ್ರ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಭೇಟಿಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಸಂಚಾರ: ಬರ ಪರಿಸ್ಥಿತಿಯ ಅವಲೋಕನ ----ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವಿಬಿ-ಜಿ ರಾಮ್-ಜಿ ಯೋಜನೆ ----- ಕೊಪ್ಪಳ ಜಿಲ್ಲೆಯಲ್ಲಿ ಬಯಲುಸೀಮೆಗೆ ಕೃಷಿಹೊಂಡಗಳ ನಿರ್ಮಾಣ ರೈತರಿಗೆ ವರದಾನಹಲ್ಲೆ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು, ರೂ. 61,000 ದಂಡನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನನಾಳೆ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಸಿರುಗುಪ್ಪ ಸಜ್ಜು: ಪೊಲೀಸರ ಬೃಹತ್ ಪಥಸಂಚಲನ